--Ads--

ಮಣ್ಣಿನಲ್ಲಿ ಹುದುಗಿ ತುಂಡಾಗಿ ಬಿದ್ದಿದ್ದ ನಾಯಿಯ ಸ್ಮಾರಕದ ಶಿಲ್ಪ ಶಾಸನ ಸಂರಕ್ಷಣೆ

On: May 14, 2026 5:13 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಮಣ್ಣಿನಲ್ಲಿ ಹುದುಗಿ ತುಂಡಾಗಿ ಬಿದ್ದಿದ್ದ ನಾಯಿಯ ಸ್ಮಾರಕದ ಶಿಲ್ಪ ಶಾಸನ ಸಂರಕ್ಷಣೆ

ಶಿಡ್ಲಘಟ್ಟ : ತಾಲ್ಲೂಕಿನ ಮಳ್ಳೂರು ಗ್ರಾಮದ ವೃತ್ತದ ಬಳಿ ಹಂದಿ ಬೇಟೆಯನ್ನಾಡುವ ನಾಯಿಯ ಸ್ಮಾರಕದ ಶಿಲ್ಪ ಮಣ್ಣಿನಲ್ಲಿ ಹುದುಗಿ, ಎರಡು ತುಂಡಾಗಿ ಬಿದ್ದಿದ್ದ
ಈ ಕಲ್ಲುಗಳನ್ನು ಗ್ರಾಮಸ್ಥರಾದ ನಾರಾಯಣಸ್ವಾಮಿ, ಮಂಜುನಾಥ್, ನಾಣಿ, ರೆಡ್ಡಿ, ಬೇಕರಿ ವೆಂಕಟೇಶ್‌, ಮಧು, ಶ್ರೀನಿವಾಸ ನಾಯಕ್‌, ನರಸಿಂಹಮೂರ್ತಿ,ಅಶೋಕ್ ಹೊರತೆಗೆದಿದ್ದರು.

ಮಳ್ಳೂರು ಗ್ರಾಮದ ವೃತ್ತದ ಬಳಿ ಕಳೆದ ವರ್ಷ ಅಕ್ಟೋಬ‌ರ್ ತಿಂಗಳಿನಲ್ಲಿ ಪತ್ತೆಯಾಗಿದ್ದು, ಅದರ ಜೊತೆಯಲ್ಲಿ ನಾಲ್ಕು ಸಾಲುಗಳ ಕನ್ನಡ ಶಾಸನ ಕೂಡ ಕಂಡುಬಂದಿತ್ತು.

ಅದಕ್ಕೊಂದು ಸುಂದರ ಕಮಾನನ್ನೂ ರೂಪಿಸಿ ಸಂರಕ್ಷಣೆ ಮಾಡಿದ್ದಾರೆ ,ಶಾಸನತಜ್ಞರಾದ ಧನಪಾಲ್ ಮತ್ತು ತ್ಯಾಗರಾಜ್ ಅದರಲ್ಲಿ ಕೆತ್ತಿರುವ ಕನ್ನಡ ಲಿಪಿಯನ್ನು ಓದಿದ್ದಲ್ಲದೆ, ಕರ್ನಾಟಕ ಇತಿಹಾಸ ಅಕಾದೆಮಿ ವತಿಯಿಂದ ಶಾಸನದ ಪಾಠ, ಸಾರಾಂಶ ಹಾಗೂ ಚಿತ್ರಗಳನ್ನೊಳಗೊಂಡ ಮಾಹಿತಿ ಫಲಕವನ್ನು ಸಿದ್ಧಪಡಿಸಿ ಗ್ರಾಮಸ್ಥರಿಗೆ ಈಚೆಗೆ ನೀಡಿದರು.

ಈ ಶಿಲ್ಪವು ಶಾಸನದ ಲಿಪಿಯ ದೃಷ್ಟಿಯಿಂದ ಸುಮಾರು 15 ನೇ ಶತಮಾನಕ್ಕೆ ಅಂದರೆ ಕ್ರಿ. ಶ.1432 ರ ಮಾರ್ಚ್ 8 ರ ಶನಿವಾರಕ್ಕೆ ಅಂದಾಜಿಸಬಹುದು ,ಗ್ರಾಮದ ಹೊಲಗಳಲ್ಲಿ ಹಂದಿಯ ಉಪಟಳ ಹೆಚ್ಚಾದಾಗ ಗ್ರಾಮದ ಗಡ್ಡೆದಡೆ ವೊಂಡೆದೆಯರ ಬಾಣ ಎಂಬಾತನು ತನ್ನ ಮುದ್ದಿನ “ಬೀಮಾಂಚ” ಎಂಬ ನಾಯಿಯೊಡನೆ ಬೇಟೆಗೆ ಹೋದಾಗ, ಬಲಿಷ್ಠ ಹಂದಿಯೊಡನೆ ಹೋರಾಡಿ ಹಂದಿಯನ್ನು ಕೊಂದು ನಾಯಿಯೂ ಮರಣಹೊಂದಿದಾಗ, ತನ್ನ ಮುದ್ದಿನ ನಾಯಿಯ ವೀರತ್ವ ಸೂರ್ಯ ಚಂದ್ರರು ಇರೋವರೆಗೂ ಮುಂದಿನ ಜನಾಂಗಕ್ಕೆ ತಿಳಿಯಲು ಈ ಸ್ಮಾರಕವನ್ನು ಹಾಕಲಾಗಿದೆ ಎಂದು ಅವರು ವಿವರಿಸಿದರು.

“ಬೇಟೆಯಲ್ಲಿ ಕುಶಲತೆಯನ್ನು ಹೊಂದಿರುವ ಬೀಮಾಂಚ ನಾಯಿಯು ಮೊದಲ ಪಟ್ಟನ್ನು ಮುಂದುಗಡೆಯಿಂದ ಹಂದಿಯ ಕುತ್ತಿಗೆಯ ಹಿಂಭಾಗಕ್ಕೆ ಹಾಗೂ ಮುಂಗಾಲಿನ ಮೇಲಿರುವ ಸೂಕ್ಷ್ಮ ಸ್ಥಳಕ್ಕೆ ಬಾಯಿ ಹಾಕಿ ಭದ್ರವಾಗಿ ಕಚ್ಚಿ ಹಿಡಿದಿರುವಂತೆ ಶಿಲ್ಪವನ್ನು ಕೆತ್ತಲಾಗಿದೆ ,ಆಗ ಹಂದಿಯು ಅರ್ಧ ಶಕ್ತಿಹೀನವಾದಂತಾಗುತ್ತದೆ ಹಂದಿಯು ಚೇತರಿಸಿಕೊಳ್ಳಲು ಕೊಂಚವೂ ಅವಕಾಶ ಕೊಡದೆ ಕ್ಷಣಮಾತ್ರದಲ್ಲಿ ಎರಡನೇ ಪಟ್ಟನ್ನು ಹಂದಿಯ ವೃಷಣಕ್ಕೆ ಬಾಯಿಹಾಕಿ ಸಂಪೂರ್ಣವಾಗಿ ಜರ್ಜರಿತಗೊಳಿಸಿ ಕೊಲ್ಲುತ್ತದೆ ಇದು ಬೇಟೆ ನಾಯಿಯ ಕೌಶಲ್ಯ” ಎಂದು ಹೇಳಿದರು.

ಗ್ರಾಮಸ್ಥರಾದ ಮಂಜುನಾಥ, ಸಿ.ನಾರಾಯಣಸ್ವಾಮಿ ತಿರುಮಲೇಶ್,ಮೂರ್ತಿ, ಚಂದನ್,
ಎಂ.ಜಿ.ನಾರಾಯಣಸ್ವಾಮಿ, ಮುನಿರಾಜಪ್ಪ,ಜ್ಞಾನೇಶ್ವರಿ, ಅಶ್ವಿನಿ, ಅರುಣ್ ಮುಂತಾದವರು ಹಾಜರಿದ್ದರು.

WhatsApp

Join Now

Telegram

Join Now

Instagram

Join Now

ಇದನ್ನೂ ಓದಿ

ರಾಜಕಾರಣಿಗಳು ಹಾಗೂ ಸರ್ಕಾರಿ ಅಧಿಕಾರಿಗಳು ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿದರೆ ದೇಶವು ಪ್ರಗತಪತದತ್ತ ಸಾಗಲಿದೆ : ಶಾಸಕ ಬಿ.ಎನ್.ರವಿಕುಮಾ‌ರ್

ಸುಂಡ್ರಹಳ್ಳಿಯ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಯೋಧರನ್ನು  ವಿವಿಧ ಸಂಘಟನೆಗಳಿಂದ ಸನ್ಮಾನ

ಜಿಕೆವಿಕೆ ವಿದ್ಯಾರ್ಥಿಗಳಿಂದ ಸಾಮಾಜಿಕ ಹಾಗೂ ಋತುಮಾನ ನಕ್ಷೆಗಳ ಪ್ರದರ್ಶನ

ಮಕ್ಕಳಲ್ಲಿ ಪ್ರಶ್ನಿಸುವ, ಚಿಂತಿಸುವ ಮತ್ತು ಸ್ವತಂತ್ರವಾಗಿ ಕಲಿಯುವ ಮನೋಭಾವ ಬೆಳೆಸಬೇಕು : ಉಪನ್ಯಾಸಕಿ ವಾಣಿ

ಪುಟ್ ಪಾತ್ ಒತ್ತವರಿ ತೆರವುಗೊಳಿಸಲು ಅಂಗಡಿ ಮಾಲಿಕರಿಗೆ ನಗರಠಾಣೆ ಪಿಎಸ್ಐ ಸೂಚನೆ

ಆಗಸ್ಟ್ 24ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು ಆಕ್ಷೇಪಣೆಗಳನ್ನು ಸಲ್ಲಿಸಲು ಎರಡು ತಿಂಗಳ ಕಾಲಾವಕಾಶ ನೀಡಲಾಗುತ್ತದೆ : ಎಸ್.ಎಸ್.ಅಬೀದ್