--Ads--

ಸಡಗರ ಸಂಭ್ರಮದಿಂದ ನಡೆದ ಗಂಗಾದೇವಿ ಜಾತ್ರಾ ಮಹೋತ್ಸವ

On: May 17, 2026 2:15 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ಸಡಗರ ಸಂಭ್ರಮದಿಂದ ನಡೆದ ಗಂಗಾದೇವಿ ಜಾತ್ರಾ ಮಹೋತ್ಸವ

ವಿಜಯಪುರ : ಪಟ್ಟಣದ ಗ್ರಾಮದೇವತೆ ಗಂಗಾದೇವಿ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಮಂಗಳವಾರ ನಡೆಯಿತು.
ದೇವರಿಗೆ ವಿವಿಧ ಅಲಂಕಾರಗಳೊಂದಿಗೆ ಹಾಗೂ ಪೂಜೆಯೊಂದಿಗೆ ಜಾತ್ರಾ ಮಹೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು.
ಪಟ್ಟಣದ ಪ್ರಮುಖ ಬೀದಿಗಳು, ದೇವಾಲಯಗಳು ವಿದ್ಯುತ್ ದೀಪಗಳಿಂದ ಕಂಗೋಳಿಸಿದವು. ಗಂಗಾದೇವಿಯೊಂದಿಗೆ ದುರ್ಗಾ ತಾಯಿ, ಸತ್ಯಮ್ಮ ತಾಯಿ, ಸಪಲಮ್ಮ ತಾಯಿ, ಮಾರಮ್ಮ ದೇವಿ ಹಾಗೂ ಸಪ್ತ ಮಾತೃಕೆಯರಿಂದ ಕೂಡಿದ ಚೌಡೇಶ್ವರಿ ಅಮ್ಮನವರ ಉತ್ಸವಗಳು ಪಟ್ಟಣದಲ್ಲಿ ಹಬ್ಬದ ಕಳೆಯನ್ನು ಹೆಚ್ಚಿಸಿತು.
ಜಾತ್ರಾ ಮಹೋತ್ಸವ ಅಂಗವಾಗಿ ಮಹಿಳೆಯರು ತಂಬಿಟ್ಟಿನ ದೀಪಗಳ ಅಲಂಕೃತ ಕಲಶವನ್ನು ತಲೆ ಮೇಲೆ ಹೊತ್ತು ವಿವಿಧ ವಾದ್ಯ ತಂಡಗಳೊಡನೆ ಮೆರವಣಿಗೆಯಲ್ಲಿ ಸಾಗಿ ಗ್ರಾಮ ದೇವತೆಗಳಿಗೆ ದೀಪ ಬೆಳಗುವ ಮೂಲಕ ಹರಿಕೆ ತೀರಿಸಿದರು.
ಗಂಗಾದೇವಿಯ ದೇವಾಲಯದಲ್ಲಿ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ಮಹಿಳೆಯರು ದೀಪ ಬೆಳಗಿಸಿ ಪೂಜೆ ಸಲ್ಲಿಸಿದರು. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸಾಲುಗಟ್ಟಿ ನಿಂತು ದೇವಿಯ ದರ್ಶನ ಪಡೆದು ಇಷ್ಟಾರ್ಥ ನಮಿಸಿದರು.

ಪಟ್ಟಣದ ಚೆನ್ನಕೇಶವಸ್ವಾಮಿ ಕಾಂಪ್ಲೆಕ್ಸ್‍ನಲ್ಲಿ ಬೆಂಗಳೂರಿನ ನಗರ ದೇವತೆ ಅಣ್ಣಮ್ಮ ತಾಯಿಯವರನ್ನು ಪ್ರತಿಷ್ಠಾಪಿಸಿ, ವಜ್ರಭರಣಗಳಿಂದ ಅಲಂಕರಿಸಲಾಗಿತ್ತು. ಭಕ್ತಾದಿಗಳು ತಾಯಿಗೆ ಮಡಿಲಕ್ಕಿ ಮತ್ತು ಸೀರೆ ಸಲ್ಲಿಸಿ ತಮ್ಮ ಹರಕೆಗಳನ್ನು ತೀರಿಸಿದರು.
ಜಾತ್ರೆಯಲ್ಲಿ ತಮಟೆ ಸದ್ದು, ಗಾರುಡಿ ಗೊಂಬೆ, ಹುಲಿವೇಷದ ಕುಣಿತಗಳು ವಿಶೇಷ ಆಕರ್ಷಿಸಿವು. ಗಂಗಾ ತಾಯಿ ದೇವಾಲಯ ಸೇರಿದಂತೆ ಪ್ರಮುಖ ವೃತ್ತಗಳಲ್ಲಿ ಪಲ್ಲಕ್ಕಿ ಉತ್ಸವ ಹಾಗೂ ಗಾನವೃಂದದವರಿಂದ ಭಕ್ತಿ ಮತ್ತು ಭಾವಗೀತೆಗಳ ಕಾರ್ಯಕ್ರಮಗಳು ನಡೆದವು.
ಹಲವೆಡೆ ಪಾನಕ, ಮಜ್ಜಿಗೆ, ಕೋಸಂಬರಿ, ಅನ್ನ ಸಂತರ್ಪಣೆ ಹಾಗೂ ಮನೆಗಳಲ್ಲಿ ಜನರು ಬಾಡೂಟ ಸವಿದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಾಹನ ದಟ್ಟಣೆ ಹೆಚ್ಚಾದರಿಂದ ಟ್ರಾಫಿಕ್ ಸಮಸ್ಯೆ ಉಂಟಾಯಿತು.
ವಿವಿಧ ದೇವಾಲಯಗಳಿಗೆ ಭೇಟಿ ನೀಡಿದ ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಅವರು, ವರ್ಷಪೂರ್ತಿ ಶ್ರಮಪಟ್ಟು ದುಡಿಯುವ ಜನತೆಗೆ ದೈವಿಕ ನೆಮ್ಮದಿ ಮತ್ತು ಸಂತಸ ನೀಡಲು ಇಂತಹ ಜಾತ್ರೆಗಳು ಸಹಕಾರಿ ಎಂದು ತಿಳಿಸಿದರು.
ಬಿಜೆಪಿ ಟೌನ್ ಅಧ್ಯಕ್ಷ ವೆಂಕಟೇಶ್ವರ ಪ್ರಭು, ಮುಖಂಡರಾದ ಮುತ್ಯಾಲಪ್ಪ, ದೇವರಾಜು, ಪುರಸಭೆಯ ಮಾಜಿ ಅಧ್ಯಕ್ಷರಾದ ಅನ್ನಪೂರ್ಣಮ್ಮ ಮುನಿಕೃಷ್ಣಪ್ಪ , ರಾಜೇಶ್ವರಿ ಭಾಸ್ಕರ್, ಜಾತ್ರಾ ಸಮಿತಿ ಅಧ್ಯಕ್ಷ ಎಂ.ಸತೀಶ್ ಕುಮಾರ್, ಸಮಿತಿ ಸದಸ್ಯರಾದ ಸಂಪತ್ ಕುಮಾರ್, ಎಂ.ನಾಗರಾಜು, ಎನ್.ರುದ್ರಮೂರ್ತಿ, ರಂಗನಾಥ್, ರಾಜಣ್ಣ, ಗಂಗಯ್ಯ ಇದ್ದರು.
ದುರ್ಗಾ ತಾಯಿಗೆ ತಂಬಿಟ್ಟಿನ ದೀಪೋತ್ಸವ
ವಿಜಯಪುರ : ಜಾತ್ರಾ ಮಹೋತ್ಸವ ಪ್ರಯುಕ್ತ ಪಟ್ಟಣದ ದುರ್ಗಾ ತಾಯಿ ದೇವಾಲಯದಲ್ಲಿ ದೇವಿಗೆ ವಿಶೇಷ ಅಲಂಕಾರ, ಪೂಜೆಗಳು ನಡೆದವು. ಮಹಿಳೆಯರು ತಂಬಿಟ್ಟಿನ ದೀಪಗಳ ಅಲಂಕೃತ ಕಲಶವನ್ನು ತಲೆ ಮೇಲೆ ಹೊತ್ತು ವಿವಿಧ ವಾದ್ಯ ತಂಡಗಳೊಡನೆ ಮೆರವಣಿಗೆಯಲ್ಲಿ ಸಾಗಿ ದುರ್ಗಾ ದೇವಿಗೆ ದೀಪ ಬೆಳಗುವ ಮೂಲಕ ಪ್ರಾರ್ಥಿಸಿದರು.
ಪ್ರತಿ ವರ್ಷ ಮಳೆ, ಬೆಳೆ ಸಮೃದ್ಧಿಗಾಗಿ, ಊರಿನ ಕೇಡು ನಿವಾರಣೆಗಾಗಿ ಪ್ರತಿ ವರ್ಷ ಪಟ್ಟಣದಲ್ಲಿ ಗ್ರಾಮ ದೇವತೆಗಳ ಜಾತ್ರಾ ಮಹೋತ್ಸವನ್ನು ಹಮ್ಮಿಕೊಂಡು ಬರಲಾಗುತ್ತಿದೆ. ಜನರು ಊರ ಹಬ್ಬವನ್ನು ಗ್ರಾಮ ದೇವತೆಗಳಿಗೆ ವಿಶೇಷ ಪೂಜೆ ಸಲ್ಲಿಸಿ, ಲೋಕ ಕಲ್ಯಾಣಕ್ಕಾಗಿ ಪ್ರಾರ್ಥಿಸುತ್ತಾರೆ ಎಂದು ಟೌನ್ ಬಿಜೆಪಿ ಅಧ್ಯಕ್ಷ ವೆಂಕಟೇಶ ಪ್ರಭು ತಿಳಿಸಿದರು. ಮುತ್ಯಾಲಪ್ಪ, ದೇವರಾಜು ಇದ್ದರು.

WhatsApp

Join Now

Telegram

Join Now

Instagram

Join Now