ವಿಜಯ ದರ್ಪಣ ನ್ಯೂಸ್…..
ಕಲಾವಿದರನ್ನು ಕರೆತಂದ ಕಲಾಸಂಗಮ ಯಶಸ್ಸಿ: ಡಾ. ಅಪ್ಪಗೆರೆ ತಿಮ್ಮರಾಜು

ಕನಕಪುರ : ನಗರದ ರೂರಲ್ ಪದವಿ ಕಾಲೇಜಿನಲ್ಲಿ ವಾರ್ಷಿಕೋತ್ಸವ ಸಮಾರಂಭವನ್ನು ಕಲಾಸಂಗಮ ಹೆಸರಿನಲ್ಲಿ ಅರ್ಥಪೂರ್ಣವಾಗಿ ನಡೆಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪ್ರಸಿದ್ಧ ಗಾಯಕ ಮತ್ತು ವಿದ್ವಾಂಸ ಡಾ.ಅಪ್ಪಗೆರೆ ತಿಮ್ಮರಾಜು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಡಾಕ್ಟರ್ ಜಿ ಎಸ್ ಶಿವರುದ್ರಪ್ಪ ರವರು ಶಿಕ್ಷಕರಾಗಿದ್ದ ಸಂಸ್ಥೆ ಮೊದಲು 42 ವಿದ್ಯಾರ್ಥಿಗಳೊಟ್ಟಿಗೆ ಆರಂಭವಾದ ಸಂಸ್ಥೆ ಇಂದು ಹಳ್ಳಿ ಗಾಡಿನ ಸಾವಿರಾರು ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆ ನೀಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದ್ದು, ಈ ಸಮಯದಲ್ಲಿ ಸಂಸ್ಥೆಯ ಸಂಸ್ಥಾಪಕ ಪೂಜ್ಯ ಎಸ್ ಕರಿಯಪ್ಪನವರನ್ನು ಸ್ಮರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ .ವಿದ್ಯಾರ್ಥಿಗಳಾದ ನೀವು ಕಲಾಭಿಮಾನದ ಜೊತೆಗೆ ಉತ್ತಮ ಸಂಸ್ಕೃತಿಯನ್ನು ಬೆಳೆಸಿಕೊಂಡು ಸಮಾಜಕ್ಕೆ ಮಾದರಿಯಾಗುವಂತೆ ತಿಳಿಸಿದರು.
ಸಮಾರಂಭದ ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಚಲನಚಿತ್ರ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಮಾತನಾಡಿ ವಿದ್ಯಾರ್ಥಿಗಳು ಇಂದು ಹಲವಾರು ದುಶ್ಚಟ ಗಳಿಗೆ ಬಲಿಯಾಗುತ್ತಿದ್ದು ಗಾಂಜಾ, ಕುಡಿತ, ಡ್ರಗ್ಸ್ ಗಳ ಚಟಕ್ಕೆ ಬಿದ್ದು ತಮ್ಮ ಜೀವನವನ್ನು ಹಾಳುಮಾಡಿಕೊಳ್ಳು ತ್ತಿದ್ದು, ಜಗತ್ತಿನಲ್ಲಿ ಸಕಾರಾತ್ಮಕ ಮತ್ತು ನಕಾರಾತ್ಮಕ ಎರಡು ರೀತಿ ಅಂಶಗಳಿವೆ ಆದರೆ ನಮ್ಮ ಗಮನ ಯಾವಾಗಲೂ ಒಳ್ಳೆಯ ಕೆಲಸಗಳ ಕಡೆಗೆ ನೀಡಿದಾಗ ನಿರ್ಭಯವಾಗಿ ಯಶಸ್ಸು ನಮ್ಮನ್ನು ಹುಡುಕಿ ಬರುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿ ತಮ್ಮದೇ ಶೈಲಿಯ ಹಾಸ್ಯಗಳಿಂದ ವಿದ್ಯಾರ್ಥಿಗಳನ್ನು ನಗೆಗಡಲಿನಲ್ಲಿ ತೇಲಿಸಿದರು.ಸಂಸ್ಥೆಯ ಅಧ್ಯಕ್ಷ ಡಾ. ಎಚ್ ಕೆ ಶ್ರೀಕಂಠ ಮಾತನಾಡಿ ಕಲಾಸಂಗಮ ಹೆಸರಿನಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮಕ್ಕೆ ಜಾನಪದ ಸಂಗೀತ ಸಿನಿಮಾ ಕ್ಷೇತ್ರ ಗಳಿಂದ ಸಾಧಕರನ್ನ ಕರೆತಂದಿರುವುದು ಕಾರ್ಯಕ್ರಮದ ಆರಂಭದ ಜಯ ಎಂದರು.
ಕಲಾ, ವಾಣಿಜ್ಯ, ವಿಜ್ಞಾನ ವಿಭಾಗದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಎನ್ ಎಸ್ ಎಸ್, ಎನ್ ಸಿ ಸಿ ಎಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳು ಹಾಡುಗಾರಿಕೆ, ನಾಟಕ, ನೃತ್ಯ ಗಳನ್ನು ಪ್ರದರ್ಶಿಸಿ ಆಕರ್ಷಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ.ಎಂ ಎಸ್ ಕೆಂಪೇಗೌಡ, ಉಪ ಪ್ರಾಂಶುಪಾಲ ಅಪ್ಪಾಜಿ, ಸಂಚಾಲಕಿ ಶ್ರೀಮತಿ ಸುಮಲತಾ ಸೇರಿದಂತೆ ಎಲ್ಲಾ ಬೋಧಕ ಬೋಧಕೀತರ ವರ್ಗ ಮತ್ತು ವಿದ್ಯಾರ್ಥಿಗಳು ಈ ವೇಳೆ ಹಾಜರಿದ್ದರು.








