ವಿಜಯ ದರ್ಪಣ ನ್ಯೂಸ್…..
ನಂದಿ ಬೆಟ್ಟದಲ್ಲಿ ಯಶಸ್ವಿಯಾಗಿ ನಡೆದ ಕನ್ನಡ ಜಾಗೃತಿ ವೇದಿಕೆ ಕಾರ್ಯಾಗಾರ

ಚಿಕ್ಕಬಳ್ಳಾಪುರ: ಕನ್ನಡ ಜಾಗೃತಿ ವೇದಿಕೆ ವತಿಯಿಂದ ತಾರೀಖು-17-05-2026 ದಂದು,ಚಿಕ್ಕಬಳ್ಳಾಪುರ ಜಿಲ್ಲೆಯ ಇತಿಹಾಸ ಪ್ರಸಿದ್ದ ನಂದಿಗಿರಿದಾಮದಲ್ಲಿನ ಸಭಾಂಗಣದಲ್ಲಿ , ಒಂದು ದಿನದ ಕಾರ್ಯಾಗಾರವನ್ನು ಗಣ್ಯರು ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಲಾಯಿತು.
ಕಾರ್ಯಾಗಾರದಲ್ಲಿ ವೇದಿಕೆಯ ಪದಾಧಿಕಾರಿಗಳ ಜವಾಬ್ದಾರಿಯ ವ್ಯಾಪ್ತಿ, ಸಂಘಟನೆಯ ಶಿಸ್ತು, ಗುರಿ ಉದ್ದೇಶಗಳ ಬಗ್ಗೆ ಮಾಹಿತಿಯನ್ನು ವೇದಿಕೆಯ ರಾಜ್ಯಾಧ್ಯಕ್ಷ ಮಂಜುನಾಥ ದೇವರವರು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಡಾ.ಕೆ.ಪಿ.ವೆಂಕಟೇಶ್ ರವರು ಸಂಘಟನೆ ಮತ್ತು ಹೋರಾಟಗಳ ಸಂಬಂದಿತ ಕಾನೂನು ಅರಿವು ಹಾಗು ನೆರವಿನ ಬಗ್ಗೆ ಮಾತನಾಡಿದರು.
ಮತ್ತೊಬ್ಬ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಧಾರಾವಾಡದ ವಕೀಲೆ ಶ್ರೀಮತಿ ಲಕ್ಮಿಬಡಿಗೇರರವರು ಮಹಿಳೆಯರ ಹಕ್ಕುಗಳ ಬಗ್ಗೆ ತಿಳಿಸಿದರು.
ಮೈಸೂರಿನಿಂದ ಆಗಮಿಸಿದ್ದ ಪುನೀತ್ ರವರು ಸಂಘಟನೆಯನ್ನು ಬೇರು ಮಟ್ಟದಿಂದ ಹೇಗೆ ಬೆಳೆಸಬೇಕು ಎಂಬುದರ ಬಗ್ಗೆ ಮಾತನಾಡಿದರು.
ಕಾರ್ಯಕ್ರಮದ ಸ್ವಾಗತವನ್ನು ವೇದಿಕೆ ರಾಜ್ಯ ಮಹಿಳಾ ಅಧ್ಯಕ್ಷೆ ಶ್ರೀಮತಿ ವತ್ಸಲ ರವರು ವಹಿಸಿದ್ದರು.
ಪ್ರಾಸ್ತವಿಕ ಮಾತುಗಳನ್ನು ಸಂಘಟನೆಯ ರಾಜ್ಯ ಪ್ರದಾನ ಕಾರ್ಯದರ್ಶಿಗಳು ನುಡಿದರು.
ನಿರೂಪಣೆಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಧ್ಯಕ್ಷ ನಾಗರಾಜ್ ರವರು ವಹಿಸಿದ್ದರು.
ಆನೇಕಲ್ ಮಹಿಳಾ ಅಧ್ಯಕ್ಷೆ ಶ್ರೀಮತಿ ನಾಗರತ್ನ ರವರು ವಂದನಾರ್ಪಣೆ ಮಾಡಿದರು.
ಕಾರ್ಯಕ್ರಮದಲ್ಲಿ ಗದಗ ಜಿಲ್ಲೆಯ ಪ್ರಭುರಾಜಗೌಡ ಪಾಟೀಲ ರವರನ್ನು ರಾಜ್ಯ ಕಾರ್ಯದರ್ಶಿಯಾಗಿ ನೇಮಕ ಮಾಡಲಾಯಿತು.ವಿವಿಧ ಜಿಲ್ಲೆಯ ಪದಾಧಿಕಾರಿಗಳಿಗೆ ಗುರುತಿನ ಚೀಟಿ ಮತ್ತು ಆಯ್ಕೆ ಪ್ರಮಾಣ ಪತ್ರ ನೀಡಲಾಯಿತು.

ಸಂಘಟನೆಗೆ ಹಲವಾರು ಜಿಲ್ಲೆಯ ಯುವಕರು, ಮುಖಂಡರು ಸೇರ್ಪಡೆಗೊಂಡರು.ಚಿಕ್ಕಮಗಳೂರು ಜಿಲ್ಲಾಧ್ಯಕ್ಷರನ್ನು ಅಯ್ಕೆ ಮಾಡಲಾಯಿತು.
ಕಾರ್ಯಾಗಾರದಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಗುಡ್ಡಹಟ್ಟಿ ರಾಮಸ್ವಾಮಿ,ಅಗ್ನಿವೆಂಕಟೇಶ್ , ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷೆ ಲಕ್ಮಿಹುದಲಿ, ರಾಜ್ಯಾ ಕಾರ್ಯಾಧ್ಯಕ್ಷೆ ಶ್ರೀಮತಿ ಸುಮಾಲಿನಿ,ರಾಜ್ಯ ಮಹಿಳಾ ಘಟಕದ ಕಾರ್ಯದರ್ಶಿ ಶ್ರೀಮತಿ ಸೌಭಾಗ್ಯ, ಸಂಘಟನಾ ಕಾರ್ಯದರ್ಶಿ ಉಷಾ,ಬೆಂಗಳೂರು ನಗರ ಜಿಲ್ಲೆಯ ಅಧ್ಯಕ್ಷೆ ಶ್ರೀಮತಿ ಶಿಲ್ಪ, ಬೆಂಗಳೂರು ನಗರ ಜಿಲ್ಲೆಯ ಯುವಘಟಕದ ಅಧ್ಯಕ್ಷ ಆರ್,ಮಧುಕುಮಾರ್ , ಕೋಲಾರ ಜಿಲ್ಲಾಧ್ಯಕ್ಷ ರಮೇಶ್ ಗೌಡ,ಬೆಳಗಾವಿ ಜಿಲ್ಲಾಧ್ಯಕ್ಷ ಪ್ರವೀಣ್ ಪಾಟೀಲ್ ,ಮೈಸೂರು ಜಿಲ್ಲಾಧ್ಯಕ್ಷ ಯೋಗೇಶ್ , ತುಮಕೂರು ಜಿಲ್ಲಾಧ್ಯಕ್ಷ ರಾಘವೇಂದ್ರ ,ಹಾವೇರಿ ಜಿಲ್ಲಾಧ್ಯಕ್ಷ ಹರೀಶ್ ,ವಿಜಯನಗರ ಜಿಲ್ಲಾಧ್ಯಕ್ಷೆ ಈರಮ್ಮ, ದೊಡ್ಡಬಳ್ಳಾಪುರ ತಾಲ್ಲೂಕು ಅಧ್ಯಕ್ಷ ಶಶಿಧರ್ ,ಕಾರ್ಮಿಕ ಘಟಕದ ಅಧ್ಯಕ್ಷ ಗುರುಪ್ರಸಾದ್ ,ಕೆಜಿಎಫ್ ತಾಲ್ಲೂಕು ಅಧ್ಯಕ್ಷ ಸುರೇಶ್ ,ಮಧುಗಿರಿ ತಾಲ್ಲೂಕು ಅಧ್ಯಕ್ಷ ರೋಹಿತ್ ,ಚಿಂತಾಮಣಿ ತಾಲ್ಲೂಕು ಅಧ್ಯಕ್ಷ ಮಂಜುನಾಥ್ , ಶ್ರೀನಿವಾಸಪುರ ತಾಲ್ಲೂಕು ಅಧ್ಯಕ್ಷ ಮಂಜುನಾಥ್ , ಕಿತ್ತೂರು ತಾಲ್ಲೂಕು ಅಧ್ಯಕ್ಷ ಈರಮ್ಮ, ದೊಡ್ಡಬಳ್ಳಾಪುರ ತಾಲ್ಲೂಕು ಮಹಿಳಾ ಘಟದ ಅದ್ಯಕ್ಷ ಮುನಿರತ್ನಮ್ಮ ,ಆನೇಕಲ್ ತಾಲ್ಲೂಕು ಯುವ ಘಟಕದ ಉಪಾಧ್ಯಕ್ಷ ಜಾವೀದ್ ,ಹಾಗೂ ಬೆಂಗಳೂರು ಸಂಘಟನೆಯ ಹಿರಿಯ ಮುಖಂಡರಾದ ಬಸವರಾಜ್ ,ಸೆಬಾಸ್ಟಿಯನ್ ಸ್ವಾಮಿ,ರಮೇಶ್ ,ಬೆಂಗಳೂರು ನಗರ ಉಪಾಧ್ಯಕ್ಷ ಮೈಲಸಂದ್ರ ಸಂಪಂಗಿ, ಬೆಂಗಳೂರು ದಕ್ಷಿಣ ಜಿಲ್ಲೆಯ ನೂತನ ಅಧ್ಯಕ್ಷರನ್ನಾಗಿ ಕುಮದಿನಿ ರವರನ್ನು ನೇಮಿಸಲಾಯಿತು . ಜೊತೆಗೆ ಹಲವಾರು ಪದಾಧಿಕಾರಿಗಳು ಭಾಗವಹಿಸಿ ಕಾರ್ಯಾಗಾರವನ್ನು ಯಶಸ್ವಿಗೊಳಿಸಿದರು..
ಆನೇಕಲ್ ತಾಲ್ಲೂಕಿನ ಯುವ ಮುಖಂಡರು ಅಂಬರೀಶ್,ಸೂರ್ಯ,ಮೋಹನ್ ಮತ್ತು ಗೆಳೆಯರು ಹಾಜರಿದ್ದರು










