ವಿಜಯ ದರ್ಪಣ ನ್ಯೂಸ್….
ಅಧಿಕಾರಿಗಳ ನಿರ್ಲಕ್ಷ್ಯದಿಂದ ರಾಷ್ಟ್ರೀಯ ಹೆದ್ದಾರಿ-234ರ ಅಂಡರ್ ಬ್ರಿಜ್ ಬಳಿ ಅಪಘಾತಗಳು ಹೆಚ್ಚು

ಶಿಡ್ಲಘಟ್ಟ : ರಾಷ್ಟ್ರೀಯ ಹೆದ್ದಾರಿ-234ರ ಶಿಡ್ಲಘಟ್ಟ-ಚಿಂತಾಮಣಿ ಮಾರ್ಗದಲ್ಲಿ ದಿನದ 24 ಗಂಟೆ ಸದಾ ವಾಹನಗಳ ದಟ್ಟಣೆಯಿದ್ದು, ಹೆದ್ದಾರಿ ಪ್ರಾಧಿಕಾರ
ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಪಘಾತಗಳು ಹೆಚ್ಚುತ್ತಿವೆ ಭಾರಿ ವಾಹನಗಳ ಸಂಚಾರದ ಒತ್ತಡದಿಂದ ಅಂಡರ್ಪಾಸ್ನಲ್ಲಿ ಅಳವಡಿಸಿರುವ ಚರಂಡಿಯ ಕಬ್ಬಿಣದ ಸರಳುಗಳ ವೆಲ್ಡಿಂಗ್ ಕಿತ್ತು ಬಂದು ಮೇಲ್ಮುಖವಾಗಿ ನಿಂತಿದೆ ವೇಗವಾಗಿ ಬರುವ ವಾಹನಗಳಿಗೆ ಮೇಲಕ್ಕೆ ಎದ್ದಿರುವ ಕಬ್ಬಿಣದ ಸರಳು ಸಿಕ್ಕಿ ಹಾಕಿಕೊಂಡು ಅಪಘಾತಗಳು ಸಂಭವಿಸುತ್ತಿವೆ.
ವೀರಾಪುರ ಬಳಿಯ ರೈಲ್ವೆ ಅಂಡರ್ಪಾಸ್ನಲ್ಲಿ ಚರಂಡಿಗೆ ಅಳವಡಿಸಿದ್ದ ಕಬ್ಬಿಣದ ಸರಳು ಕಿತ್ತು ಸಂಚಾರಕ್ಕೆ ಅಡ್ಡಿಯಾಗಿದೆ ಮೂಡುಬಿದರೆಯಿಂದ ಮುಳಬಾಗಿಲಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ-234ರ ಮಾರ್ಗವು ಮೂಡುಬಿದರೆ, ಗೌರಿಬಿದನೂರು, ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ಚಿಂತಾಮಣಿ, ಶ್ರೀನಿವಾಸಪುರ, ಮುಳಬಾಗಿಲು ಮೂಲಕ ಆಂಧ್ರ, ತಮಿಳುನಾಡಿಗೂ ಸಂಪರ್ಕ ನೀಡಲಿದೆ.
ಇದೇ ಸ್ಥಳದಲ್ಲಿ ತಿಂಗಳಲ್ಲಿ ಮೂರು ಅಪಘಾತಗಳು ಸಂಭವಿಸಿ ಹಲವರು ಗಾಯಗೊಂಡಿದ್ದಾರೆ ಹದಿನೈದು ದಿನಗಳ ಹಿಂದೆ ಕಬ್ಬಿಣದ ಸರಳು ಕಿತ್ತು ಬಂದು ಚಿಂತಾಮಣಿ ತಾಲ್ಲೂಕು ಮೈಲಪ್ಪನಹಳ್ಳಿಯ ಯುವಕನೊಬ್ಬ ಬಿದ್ದು ಮುಖ ಕಿತ್ತು ಬಂದಿತ್ತು ಆಗ ವೀರಾಪುರ, ತಲದುಮ್ಮನಹಳ್ಳಿ ಗ್ರಾಮಸ್ಥರು, ಪೊಲೀಸರ ಒತ್ತಡದಿಂದ ಹೆದ್ದಾರಿ ಇಂಜಿನಿಯರ್ ಸ್ಥಳಕ್ಕೆ ಬಂದು ತಾತ್ಕಾಲಿಕ ವೆಲ್ಡಿಂಗ್ ಮಾಡಿ ಹೋದರು.
ಇದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದಾಗ 20 ದಿನ ಕಾಲಾವಕಾಶ ಕೊಡಿ, ಶಾಶ್ವತ ದುರಸ್ತಿ ಮಾಡಲಾಗುವುದು ಎಂದು ಹೇಳಿದವರು ಇನ್ನೂ ಇತ್ತ ಮುಖಮಾಡಿಲ್ಲ. ಅಷ್ಟರಲ್ಲಿ ಮತ್ತೆ ವೆಲ್ಡಿಂಗ್ ಕಿತ್ತು ಬಂದಿದ್ದು, ಮತ್ತದೆ ಸಮಸ್ಯೆ ಸೃಷ್ಟಿಯಾಗಿದೆ.

ವೆಲ್ಡಿಂಗ್ ಮಾಡಲು ಬಂದವರನ್ನು ರೈತ ಸಂಘದ ಉಪಾಧ್ಯಕ್ಷ ಮುನಿನಂಜಪ್ಪ, ಮಂಜುನಾಥ್ ಸೇರಿದಂತೆ ವೀರಾಪುರ, ತಲದುಮ್ಮನಹಳ್ಳಿ ಗ್ರಾಮಸ್ಥರು ತಡೆದರು. ಶಾಶ್ವತ ದುರಸ್ತಿ ಮಾಡಿ ಇಲ್ಲವಾದರೆ ಬೇಡ ಎಂದು ವೆಲ್ಡಿಂಗ್ ಮಾಡಲು ಬಿಡಲಿಲ್ಲ.
ಜತೆಗೆ ಕಬ್ಬಿಣದ ಸರಳು ಕಿತ್ತು ಬಂದಿದ್ದು, ರಸ್ತೆಯ
ಒಂದು ಬದಿ ಮರ ಕಲ್ಲುಗಳನ್ನು ಅಡ್ಡಲಾಗಿ ಇಟ್ಟು ರಸ್ತೆ ಸಂಚಾರ ಬಂದ್ ಮಾಡಿದರು. ಆಗ ಗ್ರಾಮಾಂತರ ಠಾಣೆಯ ಎಸ್ಐ ಸುನಿಲ್ ಕುಮಾರ್ ಕರೆ ಮಾಡಿ ಸದ್ಯಕ್ಕೆ ವೆಲ್ಡಿಂಗ್ ಮಾಡಿ ತಾತ್ಕಾಲಿಕ ದುರಸ್ತಿ ಕಾರ್ಯಕ್ಕೆ ಅವಕಾಶ ಮಾಡಿಕೊಡಿ ಎಂದು ಗ್ರಾಮಸ್ಥರ ಮನವೊಲಿಸಿದರು.
ಶೀಘ್ರವಾಗಿ ಕೆಲಸ ಮಾಡಿಸುವ ಭರವಸೆ ನೀಡಿ ಪೊಲೀಸರು ಮತ್ತು ಹೈವೇ ಪ್ರಾಧಿಕಾರದ ಅಧಿಕಾರಿಗಳ ಮನವಿ ಮೇರೆಗೆ ವೆಲ್ಡಿಂಗ್ ಮಾಡಲು ಅವಕಾಶ ಕೊಟ್ಟಿರುವ ಗ್ರಾಮಸ್ಥರು ವಾರದೊಳಗೆ ಶಾಶ್ವತ ದುರಸ್ತಿ ಕಾರ್ಯ ಮಾಡದಿದ್ದಲ್ಲಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದ್ದಾರೆ.
ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ವೀರಾಪುರ ಮುನಿನಂಜಪ್ಪ ಮಾತನಾಡಿ , ಐದಾರು ತಿಂಗಳಲ್ಲಿ
ಮತ್ತೆ ಮತ್ತೆ ಕಿತ್ತು ಬರುತ್ತಿದೆ, ಮೂರಾಲ್ಕು ಭಾರಿ ವೆಲ್ಡಿಂಗ್ ಮಾಡಿ ಹೋಗಿದ್ದು,ಶಾಶ್ವತವಾಗಿ ದುರಸ್ತಿ ಕಾರ್ಯ ಮಾಡಬೇಕೆಂಬುದು ನಮ್ಮ ಒತ್ತಾಯ ಪೊಲೀಸರು ಮತ್ತು ಹೈವೇ ಅಧಿಕಾರಿಗಳ ಮನವಿ ಮೇರೆಗೆ ಈ ಭಾರಿ ಬಿಟ್ಟಿದ್ದೇವೆ ಒಂದು ವಾರ ಅಥವಾ ಹತ್ತು ದಿನಗಳಲ್ಲಿ ಶಾಶ್ವತ ದುರಸ್ತಿ ಕಾರ್ಯ ಮಾಡದಿದ್ದಲ್ಲಿ ರಸ್ತೆ ಬಂದ್ ಮಾಡಿ ಪ್ರತಿಭಟಿಸಲಾಗುವುದು ಎಂದರು.
@@@@@@@@@@@@@@@@@@@@
ಹೆತ್ತು ಹೋತ್ತ ದೇವರು
”””’””””””””””””””””””””””””””””””””””””””””””””””””””””””””””””””””. ದೇವರ ಹುಡುಕಲು ತಮ್ಮಾ’
ಜಗವನ್ನು ಸುತ್ತಲುಬ್ಯಾಡಾ!
ಸುತ್ತಲಿರುವ ತಂದೆ ತಾಯಿಯ
ಪಾದವನ್ನು ನಿ ಮರಿಬೆಡಾ!!ಪ!!
ಮುರು ಕೋಟಿ ಲಿಂಗವ ಬಜೀಸಿ
ಸಾವಿರ ಗುಡಿ ಸುತ್ತಿದರೆನು!
ಎತ್ತಿ ಆಡಿಸಿ ಮುತ್ತನು ಕೊಡುವ
ದೇವ ನಿನಗೆ ಸಿಗುವನೆನೋ!
ಹಗಲು ಇರಳು ನೇರಳಿನಂತೆ
ಸಾಕಿದ ಜೀವವ ನಿ ಮರಿಬ್ಯಾಡಾ!!೧!!ಪ
ಕುಲಿ ನಾಲಿ ಮಾಡಿ ನಿನಗ
ಹೋಟ್ಟೇ ತುಂಬಾ ಉಣಿಸಿದವರು!
ಮುಸುರಿ ತಿಕ್ಕಿ ಕೇಸರ ಬಳಿದು
ನಿನ್ನ ಹಸನ ಮಾಡಿದವರು!
ಅಂದು ಇಂದು ಒಂದೆ ಪ್ರೀತಿಯ
ತೋರಿಸಿದವರ ನಿ ಬಿಡಬೇಡಾ!!೨!!
ತಮ್ಮ ನುವ್ವ ತೋರದಂತೆ
ನಿನಗೆ ವಿದ್ದೆ ಕಲಿಸಿದವರು!
ದೊಡ್ಡ ಮನುಜನಾಲೆಂದು
ಪುಜೆ ವೃತವ ಮಾಡಿದವರು!
ಸ್ವಾರ್ಥವೆ ಇಲ್ಲದ ತಂದೆ ತಾಯಿಯ
ಜೀವನದಲ್ಲಿ ನಿ ಮರಿಬ್ಯಾಡಾ!!೩!!
ಆಸೇಯಿಂದ ಹಿರಿಯ ಜೀವಾ!
ನಿನ್ನ ನಂಬಿ ಬದುಕ್ಯಾವು ನೋಡಾ!
ಮಡದಿ ಕೊಡುವ ಮುತ್ತಿನಲ್ಲಿ
ಮತ್ತೇರಿ ನಿ ಹೋಗಬ್ಯಾಡಾ!
ತಂದೆ ತಾಯಿಯ ಬಜೀಸಿದ ಮಕ್ಕಳು!
ಮುಕ್ತಿಯ ಮಾರ್ಗಾ ಕಂಡಾರ ನೋಡಾ!!೪!!
ಸಾಹಿತ್ಯ ರಚನೆ:
ಮಲ್ಲೇಶ ದಂಡಿನ ಸಾ!! ಸೋಮನಕಟ್ಟಿ
9972149612








