--Ads--

ರಾಜ್ಯಮಟ್ಟದ ಇಂಫ್ರೆಶನ್ ಮಾಧ್ಯಮ ಹಬ್ಬ: ಮೈಸೂರು ವಿ.ವಿ ಪತ್ರಿಕೋದ್ಯಮ ವಿದ್ಯಾರ್ಥಿಗಳು ಚಾಂಪಿಯನ್

On: May 21, 2026 3:51 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…

ರಾಜ್ಯಮಟ್ಟದ ಇಂಫ್ರೆಶನ್ ಮಾಧ್ಯಮ ಹಬ್ಬ: ಮೈಸೂರು ವಿ.ವಿ ಪತ್ರಿಕೋದ್ಯಮ ವಿದ್ಯಾರ್ಥಿಗಳು ಚಾಂಪಿಯನ್

ಕರ್ನಾಟಕದ ಅತಿದೊಡ್ಡ ಅಂತರ್-ವಿಶ್ವವಿದ್ಯಾಲಯ ಪತ್ರಿಕೋದ್ಯಮ ಉತ್ಸವಗಳಲ್ಲಿ ಒಂದೆಂದು ವಿವರಿಸಲಾದ ತುಮಕೂರು ವಿಶ್ವವಿದ್ಯಾಲಯ ಆಯೋಜಿಸಿದ್ದ ಇಂಪ್ರೆಷನ್ 2026 ಮಾಧ್ಯಮಹಬ್ಬದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

ಉತ್ಸವದಲ್ಲಿ ರಾಜ್ಯಾದ್ಯಂತ ಸುಮಾರು 15 ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳನ್ನು ಪ್ರತಿನಿಧಿಸುವ 300 ಕ್ಕೂ ಹೆಚ್ಚು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿದ್ಯಾರ್ಥಿಗಳು ಭಾಗವಹಿಸಿದ್ದರು .

ಮೈಸೂರು, ಧಾರವಾಡ, ವಿಜಯಪುರ, ಬಾಗಲಕೋಟೆ, ಹಾವೇರಿ, ಬೆಂಗಳೂರು ಮತ್ತು ತುಮಕೂರು ಸೇರಿದಂತೆ ವಿವಿಧ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವು.

ಚರ್ಚಾಸ್ಪರ್ಧೆಯಲ್ಲಿ ಬಸವರಾಜ್ ಬಿಂಗಿ ಮತ್ತು ಹಿತೇಶ್ ಪ್ರಥಮ ಸ್ಥಾನ, ರೇಡಿಯೋ ಜಾಕಿ ರೂಪ ದಿತ್ವೀಯ ಸ್ಥಾನ, ಫೋಟೋಗ್ರಫಿ ಹಿತೇಶ್ ಮತ್ತು ರಕ್ಷಿತಾ ಪ್ರಥಮ ಸ್ಥಾನ, ಪುಟ್ಟಕಥೆ ಮತ್ತು ಪಿ.ಟಿ.ಸಿ ಯಲ್ಲಿ ಇಂಚರ, ಗುಂಪು ಸ್ಪರ್ಧೆ ಮ್ಯಾಡ್ ಆಡ್ ನಲ್ಲಿ ಸ್ಪಂದನಾ, ರಮೇಶ್,ಶಶಿ, ರಾಹುಲ್, ಚರಣ್ ಪ್ರಥಮ ಸ್ಥಾನ ಪಡೆದು ಒಟ್ಟಾರೆಯಾಗಿ ಮೈಸೂರು ವಿಶ್ವವಿದ್ಯಾನಿಲಯ ಚಾಂಪಿಯನ್ ಆಗಿ ಹೊರಹೊಮ್ಮಿದರು.

ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಮತ್ತು ಸಂಯೋಜಕ ಡಾ.ಸಂಜಯ್ .ಬಿ.ಸಿ, ಸಂಶೋಧಕ ಅಭಿಷೇಕ್ ಪಾಳ್ಯಗಾರ್ ಅವರನ್ನು ವಿಭಾಗದ ಮುಖ್ಯಸ್ಥೆ ಪ್ರೊ.ಎನ್ ಮಮತ ,ಪ್ರಾಧ್ಯಾಪಕ ಪ್ರೊ.ಎಂ.ಎಸ್ ಸಪ್ನ ಅಭಿನಂದಿಸಿದರು.

Photo- ಇಂಪ್ರೆಷನ್ -2026 ಮಾಧ್ಯಮಹಬ್ಬದಲ್ಲಿ ಚಾಂಪಿಯನ್ ಆದ ಮೈಸೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿದ್ಯಾರ್ಥಿಗಳನ್ನು ವಿಭಾಗದ ಮುಖ್ಯಸ್ಥೆ ಪ್ರೊ.ಎನ್ ಮಮತ, ಪ್ರಾಧ್ಯಾಪಕ ಪ್ರೊ.ಎಂ.ಎಸ್ ಸಪ್ನ ಅಭಿನಂದಿಸಿದರು.

WhatsApp

Join Now

Telegram

Join Now

Instagram

Join Now

ಇದನ್ನೂ ಓದಿ

ಮೈಸೂರು ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಉದ್ಘಾಟನೆ ಕಾರ್ಯಕ್ರಮಕ್ಕೆ ಆಗಮಿಸಿರುವ ಕೊಪ್ಪಳದ ಶ್ರೀಗಳು ಸುತ್ತೂರು ಮಠಕ್ಕೆ ಭೇಟಿ

ಸುತ್ತೂರು ಮಠದ ಶ್ರೀ ಶಿವರಾತ್ರಿಶ್ವರ ಮಾಧ್ಯಮ ಪ್ರಶಸ್ತಿ ಪುರಸ್ಕೃತ  ಪತ್ರಕರ್ತ ಟಿಕೆ ಬಸವರಾಜು ರವರಿಗೆ ರೈತ ಸಂಘದಿಂದ ಸನ್ಮಾನ

ಮೈಸೂರು ದಸರಾ ಮಹೋತ್ಸವದ ಅಂಗವಾಗಿ ನಡೆಯುತ್ತಿರುವ ಕಾಮಗಾರಿಗಳನ್ನು ಪರಿಶೀಲಿಸಿದ ಮೈಸೂರು ಜಿಲ್ಲೆ ಉಸ್ತುವಾರಿ ಸಚಿವರು, ಶಾಸಕರುಗಳು

ಗ್ರಾಮೀಣ ಪತ್ರಕರ್ತ ತಾಂಡವಪುರ ಟಿಕೆ ಬಸವರಾಜು ಅವರಿಗೆ 2025 ನೇ ಸಾಲಿನ ಸುತ್ತೂರು ಮಠದ ಶ್ರೀ ಶಿವರಾತ್ರಿಶ್ವರ ಮಾಧ್ಯಮ ಪ್ರಶಸ್ತಿ ಪ್ರಧಾನ

ಶಿವ ಆಟೋಮೋಬೈಲ್ ಟ್ರ್ಯಾಕ್ಟರ್ ಶೋ ರೂಮ್ ಉದ್ಘಾಟಿಸಿದ ಸಚಿವ ಯತೀಂದ್ರ ಸಿದ್ದರಾಮಯ್ಯ ,ಶಾಸಕ ದರ್ಶನ್ ಧ್ರುವನಾರಾಯಣ್ 

ಚಾಮರಾಜ ಕ್ಷೇತ್ರದಲ್ಲಿ 300 ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಣೆ : ಮಹಿಳಾ ಸಬಲೀಕರಣಕ್ಕೆ ಮೊದಲ ಆದ್ಯತೆ – ಶಾಸಕ ಕೆ. ಹರೀಶ್ ಗೌಡ