--Ads--

ಭರವಸೆ” ತಂಡದ ಡಿಜಿಟಲ್ಅಲೆ ಹಾವೇರಿಯ ಶೀಗಿಹಳ್ಳಿಗೂ ತಲುಪಿತು.

On: June 1, 2026 2:33 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ಭರವಸೆ ” ತಂಡದ ಡಿಜಿಟಲ್ಅಲೆ ಹಾವೇರಿಯ ಶೀಗಿಹಳ್ಳಿಗೂ ತಲುಪಿತು.
————————————–

ಬೆಂಗಳೂರು : ಹಾವೇರಿ ಜಿಲ್ಲೆ, ಹಾನಗಲ್ಲ ತಾಲೂಕಿನ ಶೀಗಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ಕಣ್ಣಲ್ಲಿ ಖುಷಿಯ ಕಿರಣ ಮೂಡಿದೆ.

ಬೆಂಗಳೂರು ಮೂಲದ ‘ಭರವಸೆ’ ಸಂಸ್ಥೆಯು ಹಾವೇರಿ ಮೂಲದ ಸರ್ಕಾರಿ ಶಾಲೆಗೆ ೧೦ ಕಂಪ್ಯೂಟರ್ ವ್ಯವಸ್ಥೆಗಳನ್ನು ಮಾಡಿಕೊಟ್ಟಿದೆ,

ಉತ್ತರ ಕರ್ನಾಟಕ ಭಾಗದ ಮಕ್ಕಳಿಗೆ ಡಿಜಿಟಲ್ ಶಿಕ್ಷಣದ ಹೊಸ ದ್ವಾರ ಈ ಮೂಲಕ ತೆರೆದಂತಾಗಿದೆ. ಸಂಸ್ಥೆಯ ಸ್ಥಾಪಕ ಮತ್ತು ಅಧ್ಯಕ್ಷ ಶ್ರೀ ಸುನಿಲ್ ಗೌಡ ಅವರು ಮಕ್ಕಳ ಶಿಕ್ಷಕ್ಕೆ ಅನುಕೂಲವಾಗಲಿ ಮತ್ತು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಯುಗದಲ್ಲಿ ಸರ್ಕಾರಿ ಶಾಲೆಯ ಮಕ್ಕಳ ಶಿಕ್ಷಣದ ಗುಣಮಟ್ಟ ಕುಂಠಿತವಾಗದಿರಲಿ ಎಂಬ ಆಶಯದೊಂದಿಗೆ ಈ ಕಾರ್ಯವನ್ನು ಕರ್ನಾಟಕದ ಬಹು ಭಾಗಗಳಲ್ಲಿ ಮಾಡುತ್ತಿದ್ದಾರೆ.

ಅದರ ಭಾಗವಾಗಿ ಉತ್ತರ ಕರ್ನಾಟಕ ಭಾಗಕ್ಕೂ ಭರವಸೆಯ ಈ ಬೆಳಕು ಪಸರಿಸಿದೆ. ಉತ್ತರ ಕರ್ನಾಟಕದ ಹಲವು ಸರ್ಕಾರಿ ಶಾಲೆಗಳು ಇಂದಿಗೂ ಮೂಲ ಸೌಲಭ್ಯಗಳ ಕೊರತೆಯಿಂದ ಬಳಲುತ್ತಿವೆ. ಕಂಪ್ಯೂಟರ್, ಇಂಟರ್ನೆಟ್ ಎಂಬ ಮಾತು ಅಲ್ಲಿನ ಮಕ್ಕಳಿಗೆ ಕನಸಿನ ಮಾತಾಗಿದೆ.

ಇಂತಹ ಸಂದರ್ಭದಲ್ಲಿ ‘ಭರವಸೆ’ NGO ಯ ಈ ದಾನ ಶಾಲೆಯ ಮಕ್ಕಳ ಭವಿಷ್ಯ ರೂಪಿಸಲು ಮಹತ್ತರ ಕೊಡುಗೆ ನೀಡಿದೆ ಎಂದು ಸ್ಥಳೀಯ ಶಿಕ್ಷಕರು ಹೇಳಿದ್ದಾರೆ. ಭರವಸೆಯ “ಅಕ್ಷರ” ಯೋಜನೆಯಡಿ ಕರ್ನಾಟಕದ ಹಲವು ಭಾಗಗಳಲ್ಲಿ ಉಚಿತವಾಗಿ ಕಂಪ್ಯೂಟರ್ ವ್ಯವಸ್ಥೆ ಮಾಡುತ್ತಿರುವುದಾಗಿ ಸಂಸ್ಥೆಯ ಮಂಜೇಶ್ ಕುಮಾರ್ ತಿಳಿಸಿದ್ದಾರೆ.

“ಇಂದು ಮಕ್ಕಳು ಡಿಜಿಟಲ್ ಜ್ಞಾನ ಇಲ್ಲದೇ ಯಾವ ಕ್ಷೇತ್ರದಲ್ಲೂ ಮುಂದೆ ಹೋಗಲಾರರು. ಭರವಸೆ ಸಂಸ್ಥೆ ನಮ್ಮ ಮಕ್ಕಳ ಕನಸಿಗೆ ರೆಕ್ಕೆ ನೀಡಿದೆ. ಇಡೀ ಶಾಲಾ ಪರಿವಾರ ಈ ದಾನಕ್ಕೆ ಅತ್ಯಂತ ಕೃತಜ್ಞ” ಎಂದು ಶಾಲಾ ಬೋಧಕ ವರ್ಗ ತಿಳಿಸಿದೆ.

ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ‘ಭರವಸೆ’ ಸಂಸ್ಥೆ, ಕರ್ನಾಟಕದ ಗ್ರಾಮೀಣ ಮಕ್ಕಳ ಶಿಕ್ಷಣ ಮತ್ತು ಸರ್ವಾಂಗೀಣ ಅಭಿವೃದ್ಧಿಗಾಗಿ ನಿರಂತರ ಸೇವೆ ಸಲ್ಲಿಸುತ್ತಿದೆ. ಸ್ಥಾಪಕ ಸುನಿಲ್ ಗೌಡ ಅವರ ನೇತೃತ್ವದಲ್ಲಿ ಸಂಸ್ಥೆ ಮುಂದಿನ ದಿನಗಳಲ್ಲಿ ಇನ್ನಷ್ಟು ಶಾಲೆಗಳಿಗೆ ಈ ರೀತಿಯ ನೆರವು ವಿಸ್ತರಿಸುವ ಮಹತ್ವಾಕಾಂಕ್ಷೆ ಹೊಂದಿದ್ದಾರೆ. ಮುಂದಿನ ದಿನಗಳಲ್ಲಿ ಮಕ್ಕಳ ಶಿಕ್ಷಣಕ್ಕೆ ಪೂರಕವಾಗುವ ಮತ್ತಷ್ಟು ಸಹಾಯ ನೀಡಲು ಸಂಸ್ಥೆ ನಿರ್ಧರಿಸಿದೆ.

WhatsApp

Join Now

Telegram

Join Now

Instagram

Join Now