ವಿಜಯ ದರ್ಪಣ ನ್ಯೂಸ್…..
ಚಿಮುಲ್ ನಿಂದ ವಿಶ್ವ ಹಾಲು ಹಾಗು ಕ್ಷೀರ ಕ್ರಾಂತಿಯ ಹರಿಕಾರ ಎಂ.ವಿ.ಕೃಷ್ಣಪ್ಪ ಜನ್ಮದಿನಾಚರಣೆ

ಶಿಡ್ಲಘಟ್ಟ : ಹಾಲು ಉತ್ಪಾದನೆ ಹೆಚ್ಚಿಸಲು ರೈತರಿಗೆ ಹಸುಗಳನ್ನು ವಿತರಿಸಿ ಉತ್ತೇಜನ ನೀಡಿದವರು ಎಂ.ವಿ.ಕೃಷ್ಣಪ್ಪ ಜತೆಗೆ ಒಕ್ಕೂಟದ ಮಾಜಿ ಅಧ್ಯಕ್ಷ ಕೆ.ಪಿ.ಪಿಳ್ಳಪ್ಪ ಅವರ ಸೇವೆಯನ್ನು ನೆನಪಿಸಿಕೋಳ್ಳಬೇಕು ಎಂದು ಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ ತಿಳಿಸಿದರು.
ವಿಶ್ವ ಹಾಲು ದಿನಾಚರಣೆ ಹಾಗೂ ರಾಜ್ಯದ ಕ್ಷೀರ ಕ್ರಾಂತಿಯ ಹರಿಕಾರರಾದ ಎಂ.ವಿ.ಕೃಷ್ಣಪ್ಪ ಅವರ ಜನ್ಮದಿನಾಚರಣೆ ಅಂಗವಾಗಿ ನಗರದ ಸಾರ್ವಜನಿಕ ಆಸ್ಪತ್ರೆಯ ಒಳರೋಗಿಗಳಿಗೆ ಚಿಮುಲ್ ವತಿಯಿಂದ ನಂದಿನಿ ಹಾಲು ಹಾಗು ಬ್ರೆಡ್ ವಿತರಿಸಿ ಅವರು ಮಾತನಾಡಿದರು.
ಕೋಲಾರದಿಂದ ಕೋಚಿಮುಲ್ ಬೇರ್ಪಟ್ಟ ನಂತರ ಚಿಕ್ಕಬಳ್ಳಾಪುರ ಚಿಮುಲ್ ಉತ್ತಮ ರೀತಿಯಲ್ಲಿ ಬೆಳವಣಿಗೆ ಕಂಡಿದೆ ರಾಜ್ಯದಲ್ಲಿ ಹಾಲು ಉತ್ಪಾದನೆ ಹಾಗೂ ಕ್ಷೀರಾಭಿವೃದ್ಧಿಗೆ ಎಂ.ವಿ.ಕೃಷ್ಣಪ್ಪ ಅವರ ಸೇವೆ ಸದಾ ಸ್ಮರಣೀಯವಾಗಿದೆ ಎಂದು ನೆನಪಿಸಿಕೊಂಡರು.
ರಾಜ್ಯದಲ್ಲಿ ಹಾಲು ಮತ್ತು ಕ್ಷೀರ ಕ್ಷೇತ್ರ ಇಂದು ಬೃಹತ್ ಮಟ್ಟದಲ್ಲಿ ಬೆಳೆಯಲು ಡಾ.ವರ್ಗೀಸ್ ಕುರಿಯನ್ ಕೂಡ ಶ್ರಮಿಸಿದ್ದಾರೆ ಎಂದರು.
ಚಿಮುಲ್ ನಿರ್ದೇಶಕ ಹುಜುಗೂರು ರಾಮಯ್ಯ ಮಾತನಾಡಿ, ವಿದೇಶಗಳಿಂದ ಉತ್ತಮ ತಳಿಯ ಹಸುಗಳನ್ನು ತಂದು ರಾಜ್ಯದಲ್ಲಿ ಹಾಲು ಉತ್ಪಾದನೆ ಹೆಚ್ಚಿಸಲು ಎಂ.ವಿ.ಕೃಷ್ಣಪ್ಪ ಅವರು ಶ್ರಮಿಸಿದ್ದಾರೆ ಎಂದರು.
ಪ್ರತಿಯೊಬ್ಬ ಮಗು ಹಾಗೂ ವೃದ್ಧರಿಗೂ ಪೌಷ್ಟಿಕ ಹಾಲು ದೊರೆಯಬೇಕು ಎಂಬ ಉದ್ದೇಶದಿಂದ ಅವರು ಕ್ಷೀರಾಭಿವೃದ್ಧಿಗೆ ಅಪಾರ ಸೇವೆ ಸಲ್ಲಿಸಿದ್ದಾರೆ ಎಂದು ನುಡಿದರು.
ಈ ವೇಳೆ ನಂದಿನಿ ಗುಡ್ ಲೈಫ್ ಹಾಲು, ಬಾದಾಮ್ ಸುವಾಸಿತ ಹಾಲು ಹಾಗು ಬ್ರೆಡ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಡಾ.ಮನೋಹರ್, ಚಿಮುಲ್ ಉಪ ವ್ಯವಸ್ಥಾಪಕ ರವಿಕಿರಣ್,ವಿಸ್ತರಣಾಧಿಕಾರಿಗಳಾದ ಜಯಚಂದ್ರ ,ಎಂ.ಆರ್.ಮಂಜುನಾಥ್,ನರಸಿಂಹಯ್ಯ,
ಡಿ.ಮಂಜುನಾಥ್,ಶಂಕರ್ ಕುಮಾರ್, ಸತ್ಯನಾರಾಯಣ, ಆಸ್ಪತ್ರೆ ಸಿಬ್ಬಂದಿ ಪಾಲ್ಗೊಂಡಿದ್ದರು.











