ವಿಜಯ ದರ್ಪಣ ನ್ಯೂಸ್…
ಮೈಸೂರಿನಲ್ಲಿ ಪಬ್ ನಲ್ಲಿ ಅಗ್ನಿ ಅವಘಡ: ಇಬ್ಬರೂ ಬೆಂಕಿಗಾಹುತಿ

ತಾಂಡವಪುರ ಜೂನ್ 15 ಆಕಸ್ಮಿಕವಾಗಿ ವಿದ್ಯುತ್ ಅವಘಡ ಸಂಭವಿಸಿದ ಪರಿಣಾಮವಾಗಿ ಇಬ್ಬರೂ ಬೆಂಕಿಗಾಹುತಿ ಆಗಿ ಆರು ಮಂದಿ ಆಸ್ಪತ್ರೆಗೆ ದಾಖಲಾಗಿರುವ ದಾರುಣ ಘಟನೆ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಮೈಸೂರಿನ ದಟ್ಟಗಳ್ಳಿಯ “ಫಾಕ್ಸ್ ಡೆನ್” ಬಾರ್ ಅಂಡ್ ರೆಸ್ಟೋರೆಂಟ್ ಹೋಟೆಲ್ ನ ಪಬ್ ನಲ್ಲಿ ನಡೆದಿದೆ.
ಚೆಫ್ ಮಣಿಪುರದ ಸಾಹಿನ್(26), ನೇಪಾಳದ ಪ್ರಕಾಶ್(24) ಬೆಂಕಿಗೆ ಆಹುತಿಯಾದ ದುರ್ದೈವಿಗಳಾಗಿದ್ದಾರೆ. ಇನ್ನೂ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಅಗ್ನಿ ಶಾಮಕ ದಳ ಗಂಭೀರವಾಗಿ ಗಾಯಗೊಂಡಿದ್ದ 7 ಮಂದಿಯನ್ನು ರಕ್ಷಿಸಿ ಸ್ಥಳೀಯ ಅಪೋಲೊ ಹಾಗೂ ಸುಯೋಗ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಘಟನೆ ಹಿನ್ನಲೆ: ಮಧ್ಯಾಹ್ನ 3ಗಂಟೆ ಸುಮಾರಿಗೆ ಹೋಟೆಲ್ ಎಂದಿನಂತೆ ಕರ್ತವ್ಯ ನಿರ್ವಹಿಸುತ್ತಿದ್ದಾಗ ಎರಡನೇ ಮಹಡಿಯಲ್ಲಿ ಶಾಕ್ ಸರ್ಕ್ಯೂಟ್ ಸಂಭವಿಸಿದೆ. ಸಂಭವಿಸಿದ ರಭಸದಿಂದ ಇಡೀ ಹೋಟೆಲ್ ಮೇಲ್ಚಾವಣಿ ಸಂಪೂರ್ಣವಾಗಿ ಹೊತ್ತಿ ಉರಿಯಲಾರಂಭಿಸಿದೆ. ಈ ವೇಳೆ ವಿದ್ಯುತ್ ತಗುಲಿದ್ದ ಇಬ್ಬರೂ ಸ್ಥಳದಲ್ಲೇ ಬೆಂಕಿಯಲ್ಲಿ ನಂದಿ ಹೋಗಿದ್ದಾರೆ.












