--Ads--

ಶ್ರೀ ಬ್ಯಾಟರಾಯಸ್ವಾಮಿ ದೇವಾಲಯದ ಗುಡ್ಡದಲ್ಲಿ ಬೀಜದ ಉಂಡೆ ತಯಾರಿ ಹಾಗು ಬಿತ್ತನೆ ಕಾರ್ಯ

On: June 24, 2026 2:32 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ಶ್ರೀ ಬ್ಯಾಟರಾಯಸ್ವಾಮಿ ದೇವಾಲಯದ ಗುಡ್ಡದಲ್ಲಿ ಬೀಜದ ಉಂಡೆ ತಯಾರಿ ಹಾಗು ಬಿತ್ತನೆ ಕಾರ್ಯ

ಶಿಡ್ಲಘಟ್ಟ : ಪರಿಸರ ಬಿತ್ತನೆ ಬೀಜಗಳ ಸಮತೋಲನದಲ್ಲಿ ಪಾತ್ರ ಹಾಗೂ ಉಂಡೆ ಬೀಜಗಳನ್ನು ತಯಾರಿಸಿ ಬಿತ್ತುವ ವಿಧಾನದ ಬಗ್ಗೆ ಸಾರ್ವಜನಿಕರಿಗೆ ಮತ್ತು ಸ್ವಯಂ ಸೇವಕರಿಗೆ ವಿಜಯಪುರ ದಿನೇಶ್ ಮಾಹಿತಿಯನ್ನು ಸವಿಸ್ತಾರವಾಗಿ ವಿವರಿಸಿದರು.

ತಾಲ್ಲೂಕಿನ ಚಿಕ್ಕದಾಸರಹಳ್ಳಿಯ ಶ್ರೀ ಬ್ಯಾಟರಾಯಸ್ವಾಮಿ ದೇವಾಲಯದ ಆವರಣದಲ್ಲಿ ಸಾವಯುವ ಸಂತೆ ವಿಜಯಪುರ, ಮಾತೃ ಮಡಿಲು ಸೇವಾ ಸಂಸ್ಥೆ, ಆಸ್ವಾದಂ ಆತ್ಮಜ್ಯೋತಿ ಸ್ವಾಧ್ಯಾಯ ಮಿಷನ್ ಹಾಗೂ ವಿಶೇಷ ಚೇತನ ಮಕ್ಕಳ ಚಂದನವನ ಇಕೋ ಕ್ಲಬ್‌ಗಳ ಸಹಯೋಗದಲ್ಲಿ ಪರಿಸರ ಹಾಗೂ ಯೋಗ ದಿನಾಚರಣೆ ಅಂಗವಾಗಿ ಬ್ಯಾಟರಾಯಸ್ವಾಮಿ ದೇವರಿಗೆ ಪೂಜೆ ಸಲ್ಲಿಸಿ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ಸಾವಯವ ಕೃಷಿಕ ಬೋದಗೂರು ವೆಂಕಟಸ್ವಾಮಿರೆಡ್ಡಿ ಅವರು ಮಾತನಾಡಿ, ಸಮಾಜಕ್ಕೆ ಉತ್ತಮವಾದ ಉತ್ಕೃಷ್ಟ ಆಹಾರ ನೀಡುವ ಉದ್ದೇಶದಿಂದ ಸಾವಯವ ಕೃಷಿ ಸಂತೆಯನ್ನು ನಡೆಸಿಕೊಂಡು ಬರುತ್ತಿದ್ದು, ಇದರಲ್ಲಿ ಸಾವಯವ ಗೊಬ್ಬರ ಬಳಸಿ ಬೆಳೆದ ಹಣ್ಣು, ತರಕಾರಿಗಳನ್ನು ಮಾತ್ರ ಮಾರಾಟ ಮಾಡುತ್ತಿದ್ದೇವೆ ಎಂದು ಹೇಳಿದರು.

ಕೃಷಿಕ ರಮೇಶ್ ಮಾತನಾಡಿ, ನಾವು ಸಾವಯವ ಕೃಷಿ ಮಾಡುತ್ತಿದ್ದು, ನಮ್ಮ ತೋಟದಲ್ಲಿ 185ಕ್ಕೂ ಹೆಚ್ಚಿನ ಹಣ್ಣಿನ ಗಿಡಗಳನ್ನು ಬೆಳೆಯುತ್ತಿದೇನೆ ಯೋಗ ದಿನಾಚರಣೆ ಅಂಗವಾಗಿ ಸ್ವಯಂ ಪ್ರೇರಿತರಾಗಿ ಬಂದು ಇಲ್ಲಿ ಬಂದು ಬೀಜ ಉಂಡೆಗಳನ್ನು ನೆಡುತ್ತಿದ್ದೇವೆ ಎಂದರು.

ಈ ವೇಳೆ ದೇವಾಲಯದ ಸುತ್ತ ಮುತ್ತಲಿನ ಗುಡ್ಡದ ಬಯಲು ಪ್ರದೇಶದಲ್ಲಿ ಹಸಿರನ್ನು ವೃದ್ಧಿಸಲು ವಿವಿಧ ಸಂಸ್ಥೆಗಳ ಸ್ವಯಂ ಸೇವಕರು ಒಟ್ಟಾಗಿ “500ಕ್ಕೂ ಹೆಚ್ಚು ಉಂಡೆ ಬೀಜ” ಗಳನ್ನು ಬಿತ್ತಿದರು.

ಈ ಸಂದರ್ಭದಲ್ಲಿ ಶ್ರೀ ಬ್ಯಾಟರಾಯಸ್ವಾಮಿ ದೇವಾಲಯ ಸಮಿತಿ ಅದ್ಯಕ್ಷ ಬ್ಯಾಟರಾಯಶೆಟ್ಟಿ , ರಜನಿ,
ಧರ್ಮಪುರ ವೀರಭದ್ರಪ್ಪ, ನಡಿಪಿನಾಯಕನಹಳ್ಳಿ ಶ್ರೀಧರ್, ನಾರಾಯಣಸ್ವಾಮಿ, ಹಾರೋಹಳ್ಳಿ ಕೃಷ್ಣಮೂರ್ತಿ,ಅಂಗಾಟ ನರಸಾರೆಡ್ಡಿ, ನಕ್ಕನಹಳ್ಳಿ ಪ್ರಸಾದ್‌, ಮಾತೃ ಮಡಿಲು ಸಂಸ್ಥೆಯ ಜಗದೀಶ್, ವಂದನಾ ಜಗದೀಶ್,ಆವತಿ ಅನಿಲ್ ಹಾಗು ಚೆನ್ನಕೇಶವ ಮತ್ತಿತರರು ಪಾಲ್ಗೊಂಡಿದ್ದರು.

WhatsApp

Join Now

Telegram

Join Now

Instagram

Join Now