ವಿಜಯ ದರ್ಪಣ ನ್ಯೂಸ್….
ಮತದಾರರ ಪಟ್ಟಿ ಪರಿಷ್ಕರಣೆಗೆ ಚಾಲನೆ ಎಲ್ಲಾ ಬಿ ಎಲ್ ಓ ಗಳಿಗೆ ಗ್ರಾಮ ಪಂಚಾಯತಿಯಿಂದ ಸಹಕಾರ ನೀಡಲು ಬದ್ಧ :ಪಿ ಡಿ ಓ ಪ್ರಕಾಶ್

ತಾಂಡವಪುರ ಜೂನ್ 30 ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ರಮ ಎಸ್ಐಆರ್ ಈ ಕಾರ್ಯಕ್ರಮಕ್ಕೆ ಕೇಂದ್ರ ಬಿಜೆಪಿ ಸರ್ಕಾರದ ವಿರೋಧ ಪಕ್ಷದವರು ವಿರೋಧ ವ್ಯಕ್ತಪಡಿಸಿ ಹೋರಾಟ ಮಾಡಿದರೂ ಸಹ ಕೇಂದ್ರ ಚುನಾವಣಾ ಆಯೋಗದ ಆದೇಶದವರಿಗೆ ರಾಜ್ಯ ಚುನಾವಣಾ ಆಯೋಗದ ಸೂಚನೆಯಂತೆ ಇಂದು ರಾಜ್ಯದ್ಯಂತ ಮತದಾರರ ಪಟ್ಟಿ ಪರಿಷ್ಕರಣೆಗೆ ಚಾಲನೆ ನೀಡಲಾಗಿದ್ದು ಅದೇ ರೀತಿ ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕು, ಚಿಕ್ಕಯ್ಯನ ಛತ್ರ ಹೋಬಳಿ ತಾಂಡವಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳ ಬಿ ಎಲ್ ಒ ಗಳಿಗೆ ಗ್ರಾಮ ಪಂಚಾಯತಿ ಕಚೇರಿಯಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಹಾಗೂ ಕಂದಾಯ ಇಲಾಖೆಯ ಚುನಾವಣಾ ಅಧಿಕಾರಿ ವೀರೇಶ್ ರವರ ನೇತೃತ್ವದಲ್ಲಿ ಸಭೆ ನಡೆಸಿ ಮತದಾರರ ಪಟ್ಟಿ ಪರಿಷ್ಕರಣೆ ಹೇಗೆ ನಡೆಯಬೇಕು ಎಂಬುವುದರ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿ ಪ್ರತಿಯೊಂದು ವಾರ್ಡಿನಲ್ಲೂ ಪ್ರತಿದಿನ ಒಬ್ಬೊಬ್ಬ ಬಿಎಲ್ಒ ಕನಿಷ್ಠ 50 ಮನೆಯನ್ನದರೂ ಸರ್ವೇ ಮಾಡಿ ಮತದಾರ ಪಟ್ಟಿ ಪರಿಸ್ಕಾರಣ ಕಾರ್ಯಕ್ರಮ ನಡೆಸಬೇಕು ಪ್ರತಿ ಮನೆಯ ಪ್ರತಿಯೊಬ್ಬ ಮತದಾರರಿಗೂ ಮದರಪಟ್ಟಿ ಪರಿಷ್ಕರಣೆಯ ಎರಡು ಫಾರಂ ಗಳನ್ನು ನೀಡಿ ಬರ್ತಿ
ಮಾಡಿ ಅವರಿಗೆ ಒಂದು ಪಾರಂ ಕೊಟ್ಟು ತಮಗೆ ಒಂದು ಪಾರಂ ಅನ್ನು ಮಾಡಿಕೊಳ್ಳಬೇಕು ಅಕಸ್ಮಾತ್ ಮನೆಯಲ್ಲಿ ಯಾರು ಇಲ್ಲದಿದ್ದರೂ ಅವರಿಗೆ ಈ ಬಗ್ಗೆ ಮಾಹಿತಿ ನೀಡಿ ತಿಳಿಸಬೇಕು ಜೊತೆಗೆ ಮತದಾರರ ಪಟ್ಟಿ ಫಾರಂ ಅಲ್ಲಿ ಮತದಾರರು ಏನಾದರೂ ಲೋಪ ದೋಷ ಕಂಡುಬಂದರೆ ಅದನ್ನು ಸರಿಪಡಿಸಲು ಸಹ ಅವಕಾಶವಿದ್ದು ಅವರಿಗೂ ಸಹ ಮತದಾರ ಪಟ್ಟಿಯಲ್ಲಿ ನೀವು ಸರಿಯಾಗಿ ದಾಖಲಾತಿ ನೀಡಿಲ್ಲ ಎಂದು ನೋಟಿಸ್ ನೀಡಿ ಮತ್ತೆ ಅವರಿಗೆ ಮತದಾರರ ಪಟ್ಟಿ ಸೇರ್ಪಡೆಗೆ ಅವಕಾಶ ಮಾಡಿಕೊಡಬೇಕು ಆ ದಿಕ್ಕಿನಲ್ಲಿ ಎಲ್ಲರೂ ಕಾರ್ಯಪ್ರವೃತ್ತರಾಗಬೇಕು ಎಂದು ವೀರೇಶ್ ರವರು ಸೂಚನೆ ನೀಡಿದರು
ಬಳಿಕ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ರವರು ಮಾತನಾಡಿ ನಮ್ಮ ಗ್ರಾಮ ಪಂಚಾಯತಿಯಿಂದ ನಿಮಗೆ ಎಲ್ಲಾ ರೀತಿಯ ಸಹಕಾರವನ್ನು ನೀಡುತ್ತೇವೆ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಎಂದು ಸಲಹೆ ನೀಡಿದರು
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಕಂದಾಯ ಇಲಾಖೆಯ ಚುನಾವಣಾಧಿಕಾರಿ ವೀರೇಶ್ ಕಾರ್ಯದರ್ಶಿ ಕೆಕೆ ಮರಯ್ಯ ಪಂಚಾಯಿತಿ ಲೆಕ್ಕ ಸಹಾಯಕ ಎಸ್ ಪುಟ್ಟರಾಜು ಹಾಗೂ ಬಿ ಎಲ್ ಓ ಗಳು ಪಂಚಾಯಿತಿ ಸಿಬ್ಬಂದಿ ವರ್ಗದವರು ಹಾಜರಿದ್ದರು











