ವಿಜಯ ದರ್ಪಣ ನ್ಯೂಸ್….
ಕೆಂಪಯ್ಯನಹುಂಡಿ ಗ್ರಾಮದಲ್ಲಿ ಯುವಕನೂರೋನ ಕಿರುಕುಳಕ್ಕೆ ಹೆದರಿ
ಇತ್ತೀಚೆಗೆ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಮಾಜಿ ಮುಖ್ಯಮಂತ್ರಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಭೇಟಿ: ಕುಟುಂಬಸ್ಥರಿಗೆ ಸಾಂತ್ವನ ಹೇಳಿ 5 ಲಕ್ಷ ರೂ. ಪರಿಹಾರ ನೀಡಿದ ಕುಮಾರಸ್ವಾಮಿ

ತಾಂಡವಪುರ ಜುಲೈ 5 ಮೈಸೂರು ಜಿಲ್ಲೆ, ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಹಳೆ ಕೆಂಪಯ್ಯನಹುಂಡಿ ಗ್ರಾಮದಲ್ಲಿ ಯುವಕನೂರ್ವನ ಕಿರುಕುಳಕ್ಕೆ ಹೆದರಿ ಇತ್ತೀಚೆಗೆಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಮಾಜಿ ಮುಖ್ಯಮಂತ್ರಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ರವರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ 5 ಲಕ್ಷ ರೂ ಪರಿಹಾರ ಚಿಕ್ಕನ್ ನೀಡಿ ಕುಮಾರಸ್ವಾಮಿ ರವರು ಕುಟುಂಬಸ್ಥರಿಗೆ ಧೈರ್ಯ ತುಂಬಿದರು
ಮೃತ ಶಿವಣ್ಣ ಅವರ ಮನೆಗೆ ತೆರಳಿ ಅವರ ತಾಯಿ, ಹಿರಿಯ ಮಗಳಿಗೆ ಸಾಂತ್ವನ ಹೇಳಿದ HDK
ಘಟನೆಯ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿದ ಕೇಂದ್ರ ಸಚಿವರು
ಕುಟುಂಬಕ್ಕೆ ₹5 ಲಕ್ಷ ನೆರವು ನೀಡಿದ ಸಚಿವರು
ಮೈಸೂರು ತಾಲೂಕಿನ ಕೆಂಪಯ್ಯನಹುಂಡಿ ಗ್ರಾಮದಲ್ಲಿ ಕೆಲ ದಿನಗಳ ಹಿಂದೆ ರೈತ ಶಿವಣ್ಣ ಅವರು ತಮ್ಮ ಪತ್ನಿ ಮತ್ತು ಮಗಳೊಂದಿಗೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಿನ್ನೆಲೆಯಲ್ಲಿ ಅವರ ಮನೆಗೆ ಭಾನುವಾರ ಸಂಜೆ ಭೇಟಿ ನೀಡಿದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಕುಟುಂಬಕ್ಕೆ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಸಾ.ರಾ. ಮಹೇಶ್, ಶಾಸಕರಾದ ಹರೀಶ್ ಗೌಡ, ಸಿ.ಎನ್. ಮಂಜೇಗೌಡ, ಮಾಜಿ ಶಾಸಕ ಕೆ.ಮಹದೇವು, ಮಾಜಿ ಶಾಸಕ ಹಾಗೂ ಮೈಸೂರು ಗ್ರಾಮಾಂತರ ಜಿಲ್ಲೆ ಜೆಡಿಎಸ್ ಅಧ್ಯಕ್ಷ ಅಶ್ವಿನ್ ಕುಮಾರ್ ಮುಂತಾದವರೊಂದಿಗೆ ಶಿವಣ್ಣ ಅವರ ಮನೆಗೆ ಆಗಮಿಸಿದ ಸಚಿವರು ಅವರ ತಾಯಿ ಹಾಗೂ ಹಿರಿಯ ಪುತ್ರಿಗೆ ಸಾಂತ್ವನ ಹೇಳಿ 5 ಲಕ್ಷ ಮೊತ್ತದ ನೆರವಿನ ಚೆಕ್ ನೀಡಿದರು.
ಈ ಸಂದರ್ಭದಲ್ಲಿ ತೀವ್ರ ಭಾವೋದ್ವೇಗಕ್ಕೆ ಒಳಗಾದ ಸಚಿವರು, ಶಿವಣ್ಣ ಅವರ ವೃದ್ಧ ತಾಯಿಗೆ ಧೈರ್ಯ ಮತ್ತು ಸಾಂತ್ವನ ಹೇಳಿದರು. ಅಲ್ಲದೆ ಕುಟುಂಬಕ್ಕೆ ಅಗತ್ಯ ನೆರವು ನೀಡುವ ಭರವಸೆ ನೀಡಿದರು.
ಇಂತಹ ಘಟನೆಗಳು ಯಾವುದೇ ಗ್ರಾಮದಲ್ಲಿ ನಡೆಯಬಾರದು. ಮೂರು ಅಮೂಲ್ಯ ಜೀವಗಳು ಧಾರುಣ ಸಾವನ್ನು ಹೊಂದಿರುವುದು ನನಗೆ ಅತೀವ ನೋವು ಉಂಟು ಮಾಡಿದೆ. ಜನರು ಕಷ್ಟಗಳು ಬಂದಾಗ ಅಥವಾ ತಾಳ್ಮೆ ಮತ್ತು ಸಹನೆಯಿಂದ ಆಲೋಚನೆ ಮಾಡಿ ಪರಿಹಾರ ಕೊಂಡುಕೊಳ್ಳಬೇಕು. ಅದನ್ನು ಬಿಟ್ಟು ಸಾವನ್ನು ಆಯ್ಕೆ ಮಾಡಿಕೊಳ್ಳಬಾರದು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮೃತ ಶಿವಣ್ಣ ಅವರ ತಾಯಿ ಅವರಿಗೆ ಸಚಿವರು ₹5 ಲಕ್ಷ ಮೊತ್ತದ ಚೆಕ್ ನೀಡಿ ಸಹಾಯಹಸ್ತ ಚಾಚಿದರು.
ಘಟನೆಯ ಬಗ್ಗೆ ಗ್ರಾಮದ ಪ್ರಮುಖರೊಂದಿಗೆ ಇನ್ನೂ ಹೆಚ್ಚಿನ ಮಾಹಿತಿ ಪಡೆದುಕೊಂಡರಲ್ಲದೆ, ನೊಂದ ಕುಟುಂಬಕ್ಕೆ ಇಡೀ ಗ್ರಾಮ ಆಸರೆಯಾಗಿ ನಿಲ್ಲಬೇಕು ಎಂದು ಕೋರಿದರು.










