--Ads--

ಜೆಡಿಎಸ್‌ ಪಕ್ಷವನ್ನು ಬಲಪಡಿಸಲು ಕೋಮುಲ್ ನಿರ್ದೇಶಕ ಚೆಲುವನಹಳ್ಳಿ ನಾಗರಾಜ್‌ ಕರೆ

On: July 6, 2026 10:29 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ಜೆಡಿಎಸ್‌ ಪಕ್ಷವನ್ನು ಬಲಪಡಿಸಲು ಕೋಮುಲ್ ನಿರ್ದೇಶಕ ಚೆಲುವನಹಳ್ಳಿ ನಾಗರಾಜ್‌ ಕರೆ

ಕೋಲಾರ: ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷವು ಬಲಿಷ್ಠವಾಗಿದೆ. ಮುಂದಿನ 2028ರಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಸರ್ಕಾರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡುವುದೆ ನಮ್ಮಗುರಿಯಾಗಬೇಕು. ಚುನಾವಣೆಯಲ್ಲಿ ಪಕ್ಷಯಾರಿಗೆ ಟಿಕೆಟ್ ಕೊಡಲಿ ಅವರ ಪರವಾಗಿ ಕೆಲಸ ಮಾಡೋಣ. ಇಂದಿನಿಂದಲೇ ತಮ್ಮತಮ್ಮ ವ್ಯಾಪ್ತಿಯ ಹಳ್ಳಿಗಳಲ್ಲಿ ಪಕ್ಷವನ್ನು ಬಲಪಡಿಸುವ ಕೆಲಸವನ್ನು ಮಾಡಬೇಕೆಂದು ಎಂದುಕೋಮುಲ್ ನಿರ್ದೇಶಕ ಚೆಲುವನಹಳ್ಳಿ ನಾಗರಾಜ್‌ಕರೆ ನೀಡಿದರು.

ತಾಲೂಕಿನ ವಕ್ಕಲೇರಿಯಲ್ಲಿ ಭಾನುವಾರ ಜೆಡಿಎಸ್ ಪಕ್ಷದ ಹೋಬಳಿ ಮಟ್ಟದಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದಅವರು ಇನ್ನೂ ಎರಡು ವರ್ಣಗಳಲ್ಲಿ ವಿಧಾನಸಭಾಚುನಾವಣೆ ಬರಲಿದೆ. ಅದಕ್ಕೂ ಮುಂಚೆ ಗ್ರಾಮ ಪಂಚಾಯತಿ ಸೇರಿದಂತೆ ತಾಪಂ ಜಿಪಂ ಸ್ಥಳೀಯ ಸಂಸ್ಥೆಗಳ ಚುನಾವಣೆ ಬರಲಿದ್ದು ಪಕ್ಷದಕಾರ್ಯಕರ್ತರು ಮುಖಂಡರು ಈಗಿನಿಂದಲೇ ಜವಾಬ್ದಾರಿ ತೆಗೆದುಕೊಂಡು ಜೆಡಿಎಸ್ ಪಕ್ಷವನ್ನು ತಳಮಟ್ಟದಿಂದ ಗಟ್ಟಿಗೊಳಿಸಿ ಪಕ್ಷದ ಅಭ್ಯರ್ಥಿಗಳು ಗೆಲ್ಲುವಂತೆ ಮಾಡಬೇಕು ಅದಕ್ಕೆ ಬೇಕಾದ ಸಲಹೆ ಸೂಚನೆಗಳನ್ನು ತಾಲೂಕು ಮತ್ತು ಜಿಲ್ಲಾ ಮಟ್ಟದ ಮುಖಂಡರು ನೀಡಲಿದ್ದಾರೆ ಎಂದರು.

ಕೇಂದ್ರ ಚುನಾವಣಾ ಆಯೋಗ ಜಾರಿಗೆ ತಂದಿರುವ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯಕ್ಕೆ ಜೆಡಿಎಸ್ ಪಕ್ಷದಿಂದ ನೇಮಕವಾಗಿರುವ ಮತಗಟ್ಟೆ ಮುಖಂಡರು ಸಂಪೂರ್ಣ ಸಹಕಾರ ನೀಡಬೇಕು ಪರಿಷ್ಕರಣೆಯ ಸಂದರ್ಭದಲ್ಲಿ ಅರ್ಹ ಮತದಾರರು ಮತದಾನದ ಪ್ರಕ್ರಿಯೆಯಿಂದ ಹೊರುಳಿಯದಂತೆ ಎಚ್ಚರಿಕೆ ವಹಿಸಬೇಕಾಗಿದೆ ಇದಕ್ಕಾಗಿ ಹಳ್ಳಿಗಳಲ್ಲಿ ಜೆಡಿಎಸ್  ಮುಖಂಡರು ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದರು.

ವಕ್ಕಲೇರಿ ಸೊಸೈಟಿ ಅಧ್ಯಕ್ಷ ಎಂ.ಪಾಲಾಕ್ಷಗೌಡ ಮಾತನಾಡಿ ಜೆಡಿಎಸ್ ಪಕ್ಷವು ಸದಾ ರೈತರು ಮತ್ತು ಬಡವರ ಪರವಾಗಿ ನಿಲ್ಲುವ ಪಕ್ಷವಾಗಿದೆ ಕಳೆದ ವಾರ ಕೇಂದ್ರ ಸರ್ಕಾರದಿಂದ ಮಾವು ಬೆಂಬಲ ಬೆಲೆ ಘೋಷ ಣೆಗೆ ಕುಮಾರಸ್ವಾಮಿ ಕಾರಣವಾಗಿದ್ದಾರೆ ಹಿಂದೆ ಜೆಡಿಎಸ್‌ ಅಧಿಕಾರವಿದ್ದ ಸಂದರ್ಭದಲ್ಲಿಎರಡು ಬಾರಿ ರೈತರ ಸಾಲಮನ್ನಾ ಮಾಡಿದ್ದಾರೆ ಕಾಂಗ್ರೆಸ್ ಅಧಿಕಾರದಲ್ಲಿ ಇದ್ದರು ಯಾಕೆ ಮಾಡಿಲ್ಲ ಎಂದು ಪ್ರಶ್ನೆ ಮಾಡಿರೈತರ ಜಮೀನುಗಳಲ್ಲಿ ಟಿಸಿ ಬದಲಾವಣೆ ಮಾಡಲು ಎರಡೂವರೆ ಲಕ್ಷಕೊಡಬೇಕಾಗಿದ ‘ಇದೇನಾ ಕಾಂಗ್ರೆಸ್‌ ರೈತರಿಗೆ ಕೊಡುವ ಗೌರವ ಎಂದು ವಾಗ್ದಾಳಿ ನಡೆಸಿದರು. ಜೆಡಿಎಸ್ ಪಕ್ಷದ ವರಿಷ್ಠರಾದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಮಾಜಿ ಪ್ರಧಾನ ಮಂತ್ರಿ ದೇವೇಗೌಡರ ಆಡಳಿತ ಅವಧಿಯಲ್ಲಿ ಜನಪರ ಯೋಜನೆಗಳನ್ನು ಹಳ್ಳಿಗಳಲ್ಲಿ ಜನಕ್ಕೆ ಮನವರಿಕೆ ಮಾಡಿಕೊಟ್ಟು ಕಾಂಗ್ರೆಸ್ ದುರಾಡಳಿತದ ಬಗ್ಗೆ ಅರಿವು ಮೂಡಿಸಿ ನಾವೆಲ್ಲರೂ ಒಗ್ಗಟ್ಟಿನಿಂದ ಪಕ್ಷವನ್ನು ಕಟ್ಟಬೇಕು ಎಂದರು. ಸಭೆಯಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಟಮಕ ವೆಂಕಟೇಶ್, ಮಾಜಿ ಉಪಾಧ್ಯಕ್ಷ ರವಿ, ವಕ್ಕಲೇರಿಗ್ರಾಪಂ ಮಾಜಿ ಅಧ್ಯಕ್ಷೆ ರಾಧಿಕಾ, ಮುದವ ಗ್ರಾಪಂ ಮಾಜಿ ಅಧ್ಯಕ್ಷೆ ರತ್ನಮ್ಮ, ಮಾಜಿ ಸದಸ್ಯ ಅಶ್ವಥ್‌ರಾಮ್, ವಕ್ಕಲೇರಿ ಸೊಸೈಟಿ ನಿರ್ದೇಶಕ ಎಂ. ಆನಂದ್‌ ಕುಮಾರ್, ಮಾಜಿ ನಿರ್ದೇಶಕ ಮೈಲಾಂಡಹಳ್ಳಿ ರಮೇಶ್, ಬೆಳಮಾರನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಚಂದ್ರಶೇಖ‌ರ್, ಮುಖಂಡರಾದ ಖಾಜಿಕಲ್ಲಹಳ್ಳಿ ಹರೀಶ್, ಕಡಗಟ್ಟೂರು ವಿಜಿಕುಮಾ‌ರ್ ಭಾಗವಹಿಸಿದ್ದರು.

WhatsApp

Join Now

Telegram

Join Now

Instagram

Join Now