ವಿಜಯ ದರ್ಪಣ ನ್ಯೂಸ್……
ಬಸವೇಶ್ವರರು ಮತ್ತು ಶ್ರೀ ಗುರುಮಲ್ಲೇಶ್ವರರ ಮೂರ್ತಿಗಳ ಅದ್ದೂರಿ ಮೆರವಣಿಗೆ

ತಾಂಡವಪುರ ಜುಲೈ 9 : ಬಸವೇಶ್ವರರು ಮತ್ತು ಶ್ರೀ ಗುರುಮಲ್ಲೇಶ್ವರರ ಮೂರ್ತಿಗಳ ಅದ್ದೂರಿ ಹಾಗೂ ಬಹಳ ವಿಜ್ರಮದಿಂದ ವೀರಗಾಸೆ ಕುಣಿತದ ಜೊತೆಗೆ ಮೆರವಣಿಗೆ ನಡೆಸಲಾಯಿತು
ಶ್ರೀ ಕುದೇರು ಮಠ,4ನೇ ಕ್ರಾಸ್ ಬಸವೇಶ್ವರ ರಸ್ತೆ,ಮೈಸೂರು ನಗರ ಇವರ ವತಿಯಿಂದ ಶ್ರೀಮನ್ನಿರಂಜನ ಮಹಾತ್ಮ ಶ್ರೀ ಗುರುಮಲ್ಲೇಶ್ವರ ಮಹಾಪ್ರಭುಗಳವರ 127ನೇ ಪ್ರಮಥರ ಗಣಾರಾಧನೆ ಮತ್ತು ಲಿಂಗೈಕ್ಯ ಶ್ರೀ ಗುರುಲಿಂಗ ಸ್ವಾಮಿಗಳವರ 35ನೇ ವಾರ್ಷಿಕ ಗಣರಾಧಾನ ಮಹೋತ್ಸವದ ಪ್ರಯುಕ್ತ ಜರುಗಿದ ಶ್ರೀ ಬಸವೇಶ್ವರರ ಮೂರ್ತಿ ಹಾಗೂ ಶ್ರೀ ಮಹಾತ್ಮ ಶ್ರೀ ಗುರು ಮಲ್ಲೇಶ್ವರರ ಮೂರ್ತಿಯ ಮೆರವಣಿಗೆಯಲ್ಲಿ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಶ್ರೀ ಎಂ.ಕೆ ಸೋಮಶೇಖರ್ ಅವರು ಭಾಗವಹಿಸಿ ಪುಷ್ಪಾರ್ಚನೆ ನೆರವೇರಿಸಿದರು.
ಸಾಲೂರು ಬೃಹನ್ಮಠ ಮಲೈಮಹದೇಶ್ವರ ಬೆಟ್ಟದ ಡಾ.ಶಾಂತ ಮಲ್ಲಿಕಾರ್ಜುನ ಸ್ವಾಮಿಗಳವರು ಮತ್ತು ಶ್ರೀ ಗುರು ಮಲ್ಲೇಶ್ವರ ಮಹಾಸಂಸ್ಥಾನ ದಾಸೋಹ ಮಠ ದೇವನೂರು ಶ್ರೀ ಮಹಾಂತಸ್ವಾಮಿಗಳು ಉದ್ಘಾಟನೆ ನೆರವೇರಿಸಿದರು.
ಕುದೇರು ಮಠದ ಶ್ರೀ ಗುರುಶಾಂತ ಮಹಾಸ್ವಾಮಿಗಳು ದಿವ್ಯ ಸಾನಿಧ್ಯವನ್ನು ವಹಿಸಿದ್ದರು.ಮುಖಂಡರಾದ ಶ್ರೀ ಅಂಬಳೆ ಶಿವಣ್ಣ,ಆಟೋ ಮಹೇಶ್ ಉಪಸ್ಥಿತರಿದ್ದರು.












