--Ads--

ಬಣ್ಣಾರಿ ಅಮ್ಮನ ಸಕ್ಕರೆ ಕಾರ್ಖಾನೆಗೆ ಭೂಮಿ ನೀಡಿದ ರೈತರಿಗೆ ಕಾಯಂ ನೌಕರಿ: ರೈತರ 32 ವರ್ಷಗಳ  ಹೋರಾಟಕ್ಕೆ ಸಂದ ಜಯ

On: July 9, 2026 3:24 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಬಣ್ಣಾರಿ ಅಮ್ಮನ ಸಕ್ಕರೆ ಕಾರ್ಖಾನೆಗೆ ಭೂಮಿ ನೀಡಿದ ರೈತರಿಗೆ ಕಾಯಂ ನೌಕರಿ: ರೈತರ 32 ವರ್ಷಗಳ  ಹೋರಾಟಕ್ಕೆ ಸಂದ ಜಯ

ತಾಂಡವಪುರ ಜುಲೈ 9 ಮೈಸೂರ ಜಿಲ್ಲೆ ನಂಜನಗೂಡು ತಾಲ್ಲೂಕು ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಅಳಗಂಚಿ ಗ್ರಾಮದ ಬಳಿ ಇರುವ ಬಂಡಾರಿ ಅಮ್ಮನ್ ಸಕ್ಕರೆ ಕಾರ್ಖಾನೆಗೆ ಭೂಮಿ ನೀಡಿದ ರೈತ ಕುಟುಂಬಗಳಿಗೆ ಕಾರ್ಖಾನೆಯಲ್ಲಿ ಕಾಯಂ ನೌಕರಿ ನೀಡುವುದಾಗಿ ಕಂಪನಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಭೂಮಿ ನೀಡಿದ ರೈತರು ಹಾಗೂ ರೈತ ಸಂಘದ ಹೋರಾಟಗಾರರು ಸಂತಸ ವ್ಯಕ್ತಪಡಿಸಿದರು

ಈ ವೇಳೆ ಮಾತನಾಡಿದ ರೈತ ಸಂಘದ ಹೋರಾಟಗಾರರು ಹಲವು ವರುಷಗಳ‌ ಹೋರಾಟಕ್ಕೆ ಜಯ ಸಿಕ್ಕಿದೆ.ರಾಜ್ಯ ರೈತ ಕಲ್ಯಾಣ ಸಂಘದ ದಿಟ್ಟ ನಿಲುವಿಗೆ ಅನ್ನದಾತರಿಗೆ ನ್ಯಾಯ ದೊರಕಿದೆ.
ನೌಕರಿಗಾಗಿ ನಡೆದ ಮುಷ್ಕರದಲ್ಲಿ ಪಾಲ್ಗೊಂಡ ರೈತರಿಗೆ ಕಾಯಂ ನೌಕರಿ ಖಾತರಿಯಾಗಿದೆ.

ಹೌದು ಬಣ್ಣಾರಿ ಅಮ್ಮನ್ ಶುಗರ್ ಫ್ಯಾಕ್ಟರಿ‌ ನಿರ್ಮಾಣಕ್ಕಾಗಿ ಭೂಮಿ ಕೊಟ್ಟು, ಕಾರ್ಖಾನೆಯವರ ಭರವಸೆಯಂತೆ ಕಾಯಂ ನೌಕರಿಗಾಗಿ ಹಗಲಿರುಳು ನೊಂದು- ಬೆಂದು ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಪ್ರತಿಭಟಿಸಿ ಅಂತಿಮ ಕ್ಷಣದಲ್ಲಿ ಬೇಸತ್ತಿದ್ದ ನಂಜನಗೂಡಿನ ಅಳಗಂಜಿ ಗ್ರಾಮದ ರೈತ ಬಾಂಧವರ ಮೊಗದಲ್ಲಿ ಮಂದಹಾಸದ‌ ವಿಜಯೋತ್ಸವ ಮೂಡಿಸುವಲ್ಲಿ ರೈತ ಕಲ್ಯಾಣ ಸಂಘದ ರಾಜ್ಯಾಧ್ಯಕ್ಷ ಭೂಮಿಪುತ್ರ ಯಶಸ್ವಿಯಾಗಿದ್ದಾರೆ.

1991 ರಲ್ಲಿ ಬಣ್ಣಾರಿ ಅಮ್ಮನ್ ಶುಗರ್ ಫ್ಯಾಕ್ಟರಿಗಾಗಿ ಸುಮಾರು 500 ಎಕರೆಯಷ್ಟು ಭೂಮಿಯನ್ನು ಸ್ಥಳೀಯ ರೈತರಿಂದ ಸ್ವಾಧೀನ ಪಡಿಸಿಕೊಳ್ಳಲಾಗಿತ್ತು.ಈ ವೇಳೆ ಸೂಕ್ತ ಪರಿಹಾರ ಹಾಗೂ ಕಾರ್ಖಾನೆಯಲ್ಲಿ ಕಾಯಂ ನೌಕರಿಯ ಭರವಸೆ‌ ನೀಡಲಾಗಿತ್ತು. ಆದರೆ ದಿನ ಕಳೆದಂತೆ ಇತ್ತ ಪರಿಹಾರವೂ ಇಲ್ಲ.ನೌಕರಿಯೂ ಇಲ್ಲದಂತಾಗಿ ರೈತರು ಪರಿತಪಿಸುವಂತಾಗಿತ್ತು.ಕಾರ್ಖಾನೆ ಎದುರು ಕಳೆದ ಎರಡು ವರ್ಷಗಳಿಂದ ನ್ಯಾಯಕ್ಕಾಗಿ ಹಗಲಿರುಳು ರೈತರು ಪ್ರತಿಭಟನೆ ನಡೆಸುತ್ತಿದ್ದರು.

ಹಲವು ರಾಜಕಾರಣಿಗಳು,ನಾಯಕರು, ಮುಖಂಡರುಗಳು ಸ್ಥಳಕ್ಕಾಗಮಿಸಿದ ವೇಳೆ ಕಾರ್ಖಾನೆ ಆಡಳಿತ ಮಂಡಳಿಯವರು ಕೇವಲ ಭರವಸೆಯ ಮಾತುಗಳನ್ನಾಡಿ ಅವರನ್ನು ಸಾಗಾಕುತ್ತಿದ್ದರೇ ಹೊರತು, ಈ ವಿಚಾರವಾಗಿ ಯಾವುದೇ ಕ್ರಮ‌ಕೈಗೊಳ್ಳದೇ ಮತ್ತೆ ಅದೇ ನಿರಾಸಕ್ತಿ ಮುಂದುವರೆಸುತ್ತಿದ್ದರು.

ಬಣ್ಣಾರಿ ಅಮ್ಮನ್ ಕಾರ್ಖಾನೆಗಾಗಿ ತಮ್ಮ ಅಮೂಲ್ಯ ಭೂಮಿಯನ್ನು ತ್ಯಾಗ ಮಾಡಿದ ರೈತರಿಗೆ ಕಾಯಂ ಉದ್ಯೋಗ ನೀಡದೇ ಅನ್ಯಾಯವಾಗುತ್ತಿದ್ದ ಸಂದರ್ಭದಲ್ಲಿ, ರೈತರು ತಮ್ಮ ಹಕ್ಕಿಗಾಗಿ ಹೋರಾಟಕ್ಕೆ ಮುಂದಾಗಿದ್ದರು.

ಈ ವಿಷಯ ತಿಳಿದ ತಕ್ಷಣ ರೈತ ಕಲ್ಯಾಣ ಸಂಘದ‌ ರಾಜ್ಯಾಧ್ಯಕ್ಷ ಸಿ.ಚಂದನ್ ಗೌಡ ಹಾಗೂ ಪದಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ರೈತರ ಧ್ವನಿಯಾಗಿ ನಿಂತು ಕಾರ್ಖಾನೆ ಆಡಳಿತ ಮಂಡಳಿಯೊಂದಿಗೆ ನಿರಂತರ ಮಾತುಕತೆ ನಡೆಸಿದರು.

ಭೂ ಸ್ವಾಧೀನ ಕುರಿತ ಕಾನೂನಿನ ಪ್ರಕ್ರಿಯೆ ಹಾಗೂ ಪರಿಹಾರ ಸಂಬಂಧಿತ ಇಂಚಿಂಚೂ ವಿವರಗಳನ್ನು ಮತ್ತೊಮ್ಮೆ ಮನದಟ್ಟು ಮಾಡಿಕೊಟ್ಟು ಕೂಡಲೇ ಇಂದೇ ಸಮಸ್ಯೆ‌ ನೀಗಿಸಬೇಕೆಂಬ ಒತ್ತಡ ಹೇರಿದರು.ಇಲ್ಲದಿದ್ದಲ್ಲಿ ಸರ್ಕಾರಕ್ಕೆ ಬಲವಾದ ಮನವಿ ಸಲ್ಲಿಸಿ, ಕಾನೂನಾತ್ಮಕ ಹೋರಾಟಕ್ಕೆ ಮುಂದಾಗುವುದಾಗಿ ಎಚ್ಚರಿಸಿದರು.
ಸುಧೀರ್ಘ ಮಾತುಕತೆಯ ಬಳಿಕ ಇದಕ್ಕೆ ಮಣಿದ ಕಾರ್ಖಾನೆಯವರು ನೌಕರಿ ಕಾಯಂಗೆ ಸಮ್ಮತಿ ಸೂಚಿಸಿದರು.

ಈ ಹೋರಾಟದ ಫಲವಾಗಿ, ಭೂಮಿ ಕಳೆದುಕೊಂಡ ರೈತರಿಗೆ ಕಾಯಂ ಉದ್ಯೋಗ ನೀಡುವ ಗ್ಯಾರಂಟಿ ಪತ್ರವನ್ನು ಸ್ಥಳದಲ್ಲೇ ಪಡೆದು ಕೊಡಿಸುವಲ್ಲಿ ಚಂದನ್ ಗೌಡ ಅವರು ಯಶಸ್ವಿಯಾದರು.

ಈ ಸಂದರ್ಭದಲ್ಲಿ ಚಂದನ್ ಗೌಡ ಅವರು ಮಾತನಾಡಿ, ಸತ್ಯಕ್ಕೆ ಎಂದಿಗೂ ಸಾವಿಲ್ಲ.ಇದು ಇಡೀ ರೈತ ಕುಲಕ್ಕೆ ದೊರೆತ ಜಯವಾಗಿದೆ ಇದು ಒಬ್ಬ ವ್ಯಕ್ತಿಯ ಗೆಲುವಲ್ಲ, ರೈತರ ಏಕತೆ, ಧೈರ್ಯ ಮತ್ತು ನ್ಯಾಯದ ಪರವಾಗಿ ನಡೆದ ಹೋರಾಟದ ವಿಜಯವಾಗಿದೆ ಎಂದರು.

ನಮ್ಮ ರೈತ ಕಲ್ಯಾಣದ ಸಂಕಲ್ಪ ಒಂದೇ. ರೈತರ ಹಕ್ಕು, ರೈತರ ಗೌರವ ಮತ್ತು ರೈತರ ಭವಿಷ್ಯ. ಅನ್ಯಾಯದ ವಿರುದ್ಧ ನಮ್ಮ ಹೋರಾಟ ನಿರಂತರ. ನ್ಯಾಯ ಸಿಗುವವರೆಗೆ ನಮ್ಮ ಧ್ವನಿ ನಿಲ್ಲುವುದಿಲ್ಲ ಎಂದು‌ ಘೋಷಿಸಿದರು.

ಈ ಹೋರಾಟಕ್ಕೆ ಮುನ್ನಡೆ ನೀಡಿ, ರೈತರ ನ್ಯಾಯಯುತ ಬೇಡಿಕೆಗೆ ಬಲವಾಗಿ ನಿಂತು ಯಶಸ್ಸಿನ ದಾರಿ ತೋರಿಸಿದ ಭೂಮಿಪುತ್ರ ಚಂದನ್ ಗೌಡರಿಗೆ ರೈತರು ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು.

ಹಾಗೆಯೇ ಹೋರಾಟದ ಪ್ರತಿಯೊಂದು ಹಂತದಲ್ಲೂ ರೈತರೊಂದಿಗೆ ಹೆಗಲಿಗೆ ಹೆಗಲು ನೀಡಿ ನಿಂತು ಶ್ರಮಿಸಿದ ನಮ್ಮ ರೈತಕಲ್ಯಾಣ ಸಂಘದ ಎಲ್ಲಾ ಜಿಲ್ಲಾ, ತಾಲ್ಲೂಕು ಹಾಗೂ ಗ್ರಾಮ ಮಟ್ಟದ ಪದಾಧಿಕಾರಿಗಳಿಗೆ, ಕಾರ್ಯಕರ್ತರಿಗೆ ಮತ್ತು ಹೋರಾಟಕ್ಕೆ ಕೈಜೋಡಿಸಿದ ಪ್ರತಿಯೊಬ್ಬ ರೈತ ಬಾಂಧವರಿಗೆ ಕೃತಜ್ಞತೆ ತಿಳಿಸಿದರು.

ಈ ಸಂದರ್ಭದಲ್ಲಿ ಡಿವೈಎಸ್ಪಿ ಧರ್ಮೇಂದ್ರ , ನಂಜನಗೂಡು ವೃತ ನಿರೀಕ್ಷಕರು, ಆಳಗಂಚಿ, ಅಳಗಂಚಿಪುರ ಹಾಗೂ ಮಲ್ಲುಪುರ ಗ್ರಾಮಸ್ಥರು, ಕಾರ್ಮಿಕರು, ರೈತ ಕಲ್ಯಾಣ ಸಂಘದ ಕಾರ್ಯಾಧ್ಯಕ್ಷ ಜಗದೀಶ್ ಕಣೆಣೂರು, ರಾಜ್ಯ ಪತ್ರಿಕಾ ಕಾರ್ಯದರ್ಶಿ ಹರೀಶ್, ಜಿಲ್ಲಾ ಯುವ ಅಧ್ಯಕ್ಷ ಪುನೀತ್, ತಾಲ್ಲೂಕು ಅಧ್ಯಕ್ಷ ರವಿಕುಮಾರ್, ಉಪಾಧ್ಯಕ್ಷ ಮಲ್ಲೇಶ್, ಕಾರ್ಯದರ್ಶಿ ಮಂಜು,ಹರ್ಷ, ಬಣ್ಣಾರಿಯಮ್ಮನ್ ಶುಗರ್ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರು ಮುಖ್ಯ ಆಡಳಿತ ಅಧಿಕಾರಿ ವೇಲು ಸ್ವಾಮಿ ಹಾಗೂ ಶರವಣ ಸೇರಿದಂತೆ ಹಲವರು ಉಪಸ್ಥಿತರಿದ್ದರು

1)ಕಳೆದ ಹಲವು ವರ್ಷಗಳಿಂದ ನ್ಯಾಯಕ್ಕಾಗಿ ನೊಂದಿದ್ದೇವು.ನಮಗೆ ಸಿಕ್ಕಿದ್ದು ಕೇವಲ ಭರವಸೆಗಳಷ್ಟೇ.ಆದರೆ ಇಂದು ರೈತ ಕಲ್ಯಾಣ ಸಂಘದಿಂದ ನಮ್ಮೆಲ್ಲರ‌ ಕನಸು ನನಸಾಗಿದೆ.ಸುಮಾರು 42 ಮಂದಿ ರೈತರಿಗೆ ಬಣ್ಣಾರಿ ಅಮ್ಮನ್ ಶುಗರ್ ಫ್ಯಾಕ್ಟರಿಯಲ್ಲಿ ನೌಕರಿ ಕಾಯಂ ಆಗಿದೆ.ಇದಕ್ಕೆ‌ಕಾರಣರಾದ ಚಂದನ್ ಗೌಡರಿಗೆ ನಾವೆಲ್ಲರೂ ಎಂದೆಂದಿಗೂ ಚಿರ ಋಣಿಯಾಗಿರುತ್ತೇವೆ.
ಹೋರಾಟ‌ ನಿರತ ರೈತರು

2) ಹಗಲಿರುಳು ಪ್ರತಿಭಟಿಸಿದ್ದೇವೆ.ನ್ಯಾಯಕ್ಕಾಗಿ‌ಮೊರೆ ಇಟ್ಟಿದ್ದೇವೆ.ಆದರೆ ಆಡಳಿತ ಮಂಡಳಿ ಇದಾವುದಕ್ಕೂ ಮನ್ನಣೆ ನೀಡಲಿಲ್ಲ.ಹಿರಿಯರು, ರಾಜಕಾರಣಿಗಳು, ಮುಖಂಡರುಗಳು ಬಂದು ಭರವಸೆ ನೀಡಿದರು.ಆದರೆ ಪ್ರಯೋಜನವಾಗಲಿಲ್ಲ.ಇಂದು ಭೂಮಿಪುತ್ರ ಚಂದನ್ ಗೌಡರ ವಿಶೇಷಾಸಕ್ಕಿ, ಅನ್ನದಾತರ ಪರ ಇರವ ಮಮಕಾರದಿಂದಾಗಿ ನ್ಯಾಯ ದೊರೆತಿದೆ.ನೌಕರಿ ಕಾಯಂ ಆಗಿದೆ.
ಕುಮಾರ್,
ಪ್ರತಿಭಟನಾಕಾರ ರೈತ

WhatsApp

Join Now

Telegram

Join Now

Instagram

Join Now