--Ads--

ಗೃಹಲಕ್ಷ್ಮಿ ಯೋಜನೆಗೆ ಹೊಸ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ : ಸಿಡಿಪಿಒ ವಿದ್ಯಾವಸ್ತ್ರದ್

On: July 20, 2026 3:07 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಗೃಹಲಕ್ಷ್ಮಿ ಯೋಜನೆಗೆ ಹೊಸ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ : ಸಿಡಿಪಿಒ ವಿದ್ಯಾವಸ್ತ್ರದ್

ಶಿಡ್ಲಘಟ್ಟ : ಗೃಹಲಕ್ಷ್ಮಿ ಯೋಜನೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುಳ್ಳು ಸಂದೇಶಗಳು ಹಾಗೂ ವದಂತಿಗಳಿಂದ ಫಲಾನುಭವಿಗಳು ಗೊಂದಲಕ್ಕೆ ಒಳಗಾಗಬಾರದು ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ (ಸಿಡಿಪಿಒ) ವಿದ್ಯಾವಸ್ತ್ರದ್ ತಿಳಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಅವರು ವಿವರಿಸಿದರು.ಗೃಹಲಕ್ಷ್ಮಿ ಯೋಜನೆಯಡಿ ಈಗಾಗಲೇ
ನೋಂದಾಯಿಸಿಕೊಂಡಿರುವ ಫಲಾನುಭವಿಗಳು ಮತ್ತೊಮ್ಮೆ ಹೊಸ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ ಎಂದು ಹೇಳಿದರು.

ಈ ಯೋಜನೆಯಡಿ ಈಗಾಗಲೇ ಹೆಸರು ನೋಂದಾಯಿಸಿರುವ ಮಹಿಳೆಯರು ಹೊಸ ಅರ್ಜಿ ಸಲ್ಲಿಸಬೇಕೆಂಬ ಸುದ್ದಿ ಸತ್ಯಕ್ಕೆ ದೂರವಾಗಿದೆ ಸರ್ಕಾರದಿಂದ ಇಂತಹ ಯಾವುದೇ ನಿರ್ದೇಶನ ನೀಡಲಾಗಿಲ್ಲ ಆದ್ದರಿಂದ ಯಾರೂ ಅನಗತ್ಯವಾಗಿ ಕಚೇರಿಗಳಿಗೆ ಅಲೆದಾಡುವ ಅಗತ್ಯವಿಲ್ಲ ಎಂದರು.
ಯೋಜನೆಯ ಹಣ ಖಾತೆಗೆ ಜಮೆಯಾಗದಿರುವುದು, ಬ್ಯಾಂಕ್ ಖಾತೆ-ಆಧಾರ್‌ಜೋಡಣೆ, ಇ-ಕೆವೈಸಿ ಅಥವಾ ಇತರೆ ತಾಂತ್ರಿಕ ಸಮಸ್ಯೆಗಳಿದ್ದಲ್ಲಿ ಮಾತ್ರ ಸಂಬಂಧಿತ ದಾಖಲೆಗಳೊಂದಿಗೆ ಸಿಡಿಪಿಒ ಕಚೇರಿಗೆ ಭೇಟಿ ನೀಡಬೇಕ ಅಂತಹ ಪ್ರಕರಣಗಳನ್ನು ಅಧಿಕಾರಿಗಳು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಿದ್ದು ಸಹಕರಿಸಬೇಕು ಎಂದುನವಿ ಮಾಡಿದರು.

ಫಲಾನುಭವಿಗಳು ಮಧ್ಯವರ್ತಿಗಳ ಅಥವಾ ಅನಧಿಕೃತ ಮೂಲಗಳ ಮಾಹಿತಿಯನ್ನು ನಂಬದೆ, ಇಲಾಖೆಯಿಂದ ದೊರೆಯುವ ಅಧಿಕೃತ ಮಾಹಿತಿಯನ್ನೇ ಅನುಸರಿಸಬೇಕು ಯಾವುದೇ ಅನುಮಾನಗಳಿದ್ದರೆ ನೇರವಾಗಿ ಇಲಾಖೆಯನ್ನು ಸಂಪರ್ಕಿಸಿ ಸಲಹೆ ಪಡೆಯುವಂತೆ ಅವರು ಕೋರಿದರು.

WhatsApp

Join Now

Telegram

Join Now

Instagram

Join Now