--Ads--

ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ಪರೀಕ್ಷೆ ವ್ಯವಸ್ಥಿತ ಪಾರದರ್ಶಕ ಪರೀಕ್ಷೆಗೆ ಆದ್ಯತೆ: ಜಿಲ್ಲಾಧಿಕಾರಿ ಡಾ. ಅನುರಾಧ

On: July 24, 2026 5:05 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ಪರೀಕ್ಷೆ ವ್ಯವಸ್ಥಿತ ಪಾರದರ್ಶಕ ಪರೀಕ್ಷೆಗೆ ಆದ್ಯತೆ: ಜಿಲ್ಲಾಧಿಕಾರಿ ಡಾ. ಅನುರಾಧ

ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ , ಜುಲೈ 24:

ಆಗಸ್ಟ್ 02 ರಂದು ನಡೆಯಲಿರುವ ಕರ್ನಾಟಕ ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷೆಗೆ‌ ಯಾವುದೇ ರೀತಿಯ ತೊಂದರೆ, ಅಡಚಣೆ ಉಂಟಾಗದಂತೆ ವ್ಯವಸ್ಥಿತ ಸಿದ್ಧತೆ ಕೈಗೊಳ್ಳಲು ಜಿಲ್ಲಾಧಿಕಾರಿ ಡಾ. ಕೆ.ಎನ್. ಅನುರಾಧ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಡಳಿತ ಭವನದ ನ್ಯಾಯಾಲಯ ಸಭಾಂಗಣದಲ್ಲಿ ನಡೆದ ಪೋಲಿಸ್ ಕಾನ್ಸ್ಟೇಬಲ್ ಪರೀಕ್ಷೆಯ ಪೂರ್ವ ಸಿದ್ದತೆ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಆಗಸ್ಟ್ 02 ರಂದು ನಡೆಯಲಿರುವ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿ ಪರಿಕ್ಷೆಗೆ ಜಿಲ್ಲೆಯಲ್ಲಿ 07 ಪರಿಕ್ಷಾ ಕೇಂದ್ರಗಳಲ್ಲಿ 3463 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ.

ಜಿಲ್ಲೆಯಲ್ಲಿ ಎಲ್ಲಾ ಪರೀಕ್ಷಾ ಕೇಂದ್ರಗಳ ಕೊಠಡಿಗಳಲ್ಲಿ ಪಾರದರ್ಶಕ ಹಾಗೂ ಸುವ್ಯವಸ್ಥಿತವಾಗಿ ಪರೀಕ್ಷೆ ನಡೆಸುವ ನಿಟ್ಟಿನಲ್ಲಿ ಸಿಸಿ ಕ್ಯಾಮರಾ ಕಣ್ಗಾವಲು ಕಡ್ಡಾಯವಾಗಿದ್ದು, ಅವುಗಳು ಸುಸ್ಥಿತಿಯಲ್ಲಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಡಿಸಿ ಸೂಚಿಸಿದರು.

ಪರೀಕ್ಷಾ ಕೇಂದ್ರಗಳು ಹಾಗೂ ಅಭ್ಯರ್ಥಿಗಳ ಸಂಖ್ಯೆ:

* ಶ್ರೀ ಕೊಂಗಾಡಿಯಪ್ಪ ಪದವಿ ಪೂರ್ವ ಕಾಲೇಜು(BB0009), ವಿವೇಕಾನಂದ ರಸ್ತೆ, ದೊಡ್ಡಬಳ್ಳಾಪುರ, ಕೇಂದ್ರ ಸಂಖ್ಯೆ: 101, ಅಭ್ಯರ್ಥಿಗಳ ಸಂಖ್ಯೆ: 751.
* ಸರ್ಕಾರಿ ಪದವಿ ಪೂರ್ವ ಕಾಲೇಜು(BB0010), ಗಂಗಾಧರಪುರ, ಮಾದಗೊಂಡನಹಳ್ಳಿ ರಸ್ತೆ, ದೊಡ್ಡಬಳ್ಳಾಪುರ ಕೇಂದ್ರ ಸಂಕೇತ: 102, ಅಭ್ಯರ್ಥಿಗಳ ಸಂಖ್ಯೆ: 432.
* ಸರ್ಕಾರಿ ಪದವಿ ಪೂರ್ವ ಕಾಲೇಜು(ಪ್ರೌಢಶಾಲೆ ವಿಭಾಗ) (BB0047), ಹೊಸ ಬಸ್ ನಿಲ್ದಾಣ(ಕೆಎಸ್ಆರ್ಟಿಸಿ), ದೊಡ್ಡಬಳ್ಳಾಪುರ ಕೇಂದ್ರ ಸಂಕೇತ: 103, ಅಭ್ಯರ್ಥಿಗಳ ಸಂಖ್ಯೆ: 504.
* ಶ್ರೀ ದೇವರಾಜ್ ಅರಸು ಪದವಿ ಪೂರ್ವ ಕಾಲೇಜು(BB0088), ಕೊಡಿಗೆಹಳ್ಳಿ, ದೊಡ್ಡಬಳ್ಳಾಪುರ, ಕೇಂದ್ರ ಸಂಕೇತ: 104, ಅಭ್ಯರ್ಥಿಗಳ ಸಂಖ್ಯೆ: 600.
* ವಿದ್ಯಾನಿಧಿ ಸ್ವತಂತ್ರ ಪದವಿ ಪೂರ್ವ ಕಾಲೇಜು(BB0162), ಗಂಗಾಧರಪುರ ದೊಡ್ಡಬಳ್ಳಾಪುರ, ಕೇಂದ್ರ ಸಂಕೇತ: 105, ಅಭ್ಯರ್ಥಿಗಳ ಸಂಖ್ಯೆ: 312.
* ಶ್ರೀ ವಾಣಿ ಪದವಿ ಪೂರ್ವ ಕಾಲೇಜು (BB0209) ಪಾಲನಜೋಗಿಹಳ್ಳಿ, ದೊಡ್ಡಬಳ್ಳಾಪುರ, ಕೇಂದ್ರ ಸಂಕೇತ: 106, ಅಭ್ಯರ್ಥಿಗಳ ಸಂಖ್ಯೆ: 384.
* ಸರ್ಕಾರಿ ಪ್ರಥಮ ದರ್ಜೆ ಕಾಲೇಜು, (BB3001), ಮಾದಗೊಂಡನಹಳ್ಳಿ, ಬಸವ ಭವನ ರಸ್ತೆ, ದೊಡ್ಡಬಳ್ಳಾಪುರ, ಕೇಂದ್ರ ಸಂಕೇತ: 107, ಅಭ್ಯರ್ಥಿಗಳ ಸಂಖ್ಯೆ: 480.

ಈ ಸಭೆಯಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಎಂ.ವಿ ಚಂದ್ರಕಾಂತ, ಅಪರ ಜಿಲ್ಲಾಧಿಕಾರಿ ಸೈಯಿದಾ ಆಯಿಷಾ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಮೋಹನ್ ಕುಮಾರ್ ಸೇರಿದಂತೆ ಹೊಸಕೋಟೆ, ದೊಡ್ಡಬಳ್ಳಾಪುರ ಹಾಗೂ ನೆಲಮಂಗಲ ತಾಲ್ಲೂಕು ತಹಶೀಲ್ದಾರ್ ರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪರೀಕ್ಷಾ ಕೇಂದ್ರಗಳ ಪ್ರಾಂಶುಪಾಲರು ಉಪಸ್ಥಿತರಿದ್ದರು.

WhatsApp

Join Now

Telegram

Join Now

Instagram

Join Now