ವಿಜಯ ದರ್ಪಣ ನ್ಯೂಸ್….
“ಪ್ರೇರಣಾ ಪಿಯು ಕಾಲೇಜಿಗೆ ಸರ್ಕಾರದಿಂದ ಅನುಮತಿ ದೊರೆತಿದೆ “
ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಶೇ 90% ಅಂಕಪಡೆದವರಿಗೆ ಉಚಿತ ಶಿಕ್ಷಣ: ನಿವೃತ್ತ ಪ್ರಾಂಶುಪಾಲ ಪ್ರೊ. ಅಶ್ವತ್ಥ್ ನಾರಾಯಣ್

ತಾವರೆಕೆರೆ : ಹೊಸಕೋಟೆ ನಗರ ಭಾಗದ ವಿದ್ಯಾರ್ಥಿಗಳಿಗೆ ಸ್ಪರ್ದೆ ನೀಡುವ ಸಲುವಾಗಿ ಗ್ರಾಮೀಣಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಶೇ 90% ಕ್ಕಿಂತ ಹೆಚ್ಚು ಅಂಕಪಡೆದವರಿಗೆ ಉಚಿತ ಶಿಕ್ಷಣ ನೀಡಲಾಗುವುದು ಎಂದು ನಿವೃತ್ತ ಪ್ರಾಂಶುಪಾಲರಾದ ಪ್ರೊಪೆಸರ್ ಅಶ್ವಥ್ ನಾರಾಯಣ್ ರವರು ತಿಳಿಸಿದರು.
ನಗರದ ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ನಮ್ಮ ಮೇಧಶ್ರಿ ಎಜುಕೇಶನಲ್ ಟ್ರಸ್ಟ್ ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು ನಗರಭಾಗದ ವಿದ್ಯಾರ್ಥಿಗಳಿಗೆ ಸ್ಪರ್ಧೆಯೊಡ್ಡುವ ನಿಟ್ಟಿನಲ್ಲಿ ತಯಾರು ಮಾಡುತಿದ್ದು ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೆ ಹೆಚ್ಚಿನ ಒತ್ತು ನೀಡಿ ಕ್ರೀಡೆ, ಕರಾಟೆ, ಯೋಗ, ಸಂಗೀತ, ನೃತ್ಯ, ಪೌಂಡೇಷನ್ ಕೋರ್ಸ್, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ, ಸ್ಮಾರ್ಟ್ ಕ್ಲಾಸ್, ಕಂಪ್ಯೂಟರ್ ಲ್ಯಾಬ್ , ವಿಜ್ಞಾನ ಪ್ರಯೋಗಲಾಯ ನುರಿತ ಉಪನ್ಯಾಸಕರು, ಸುಸಜ್ಜಿತ ಕಟ್ಟಡ, ವಾಹನ ವ್ಯವಸ್ಥೆ, ಹೆಚ್ಚುವರಿ ತರಗತಿಗಳನ್ನೊಂದಿ ಮುಂದುವರೆಯುತಿದ್ದು, ಪ್ರೇರಣಾ ಪಿಯು ಕಾಲೇಜಿಗೆ ಸರ್ಕಾರದಿಂದ ಅನುಮತಿ ದೊರೆತಿದ್ದು ವಿಜ್ಞಾನ ವಾಣಿಜ್ಯ ವಿಭಾಗವಿದ್ದು ಶೇ ೯೦% ಕ್ಕಿಂತ ಹೆಚ್ಚು ಅಂಕ ಪಡೆದವರಿಗೆ ಸಂಪೂರ್ಣ ಉಚಿತ ಶಿಕ್ಷಣ ನೀಡುತ್ತೇವೆ, ಅಲ್ಲದೆ ಶಿಕ್ಷಣದ ಜೊತೆಗೆ ಸಂಸ್ಕಾರ, ದೈವಭಕ್ತಿ, ದೇಶಭಕ್ತಿ, ಪರಿಸರ ಕೆರೆಕುಂಟೆ ಜಲಮೂಲಗಳ ಅರಿವು, ದುಶ್ಚಟಮುಕ್ತ ಸಮಾಜ ಕಟ್ಟಲು ಅವಶ್ಯಕವಾದ ಎಲ್ಲಾ ಮಾರ್ಗದರ್ಶನವನ್ನು ನೀಡುತ್ತಾ ಬಂದಿದ್ದು ಪೋಷಕರು ಇದರಸದುಪಯೋಗ ಪಡಿಸಿಕೊಂಡು ಭವಿಷ್ಯ ಭಾರತದ ಪ್ರಜೆಗಳನ್ನಾಗಿಸಬಹುದು ಎಂದರು.
ಈ ಸಂದರ್ಭದಲ್ಲಿ ಪ್ರೇರಣಾ ಆಡಳಿತ ಮಂಡಳಿ ಕಾರ್ಯದರ್ಶಿ ಶಿವರಾಜ್, ಪ್ರಾಂಶುಪಾಲರಾದ, ರೂಪ ಶ್ರೀಧರ್






