ವಿಜಯ ದರ್ಪಣ ನ್ಯೂಸ್…
ತಾಂಡವಪುರ ಗ್ರಾಮ ಪಂಚಾಯತಿ ಕಚೇರಿಯಲ್ಲಿ ವಿಕಲಚೇತನರ ಕುಂದು ಕೊರತೆ ಸಭೆ

ತಾಂಡವಪುರ ಆಗಸ್ಟ್ 8 ಮೈಸೂರು ಜಿಲ್ಲೆ, ನಂಜನಗೂಡು ತಾಲೂಕು ಚಿಕ್ಕಯ್ಯನ ಛತ್ರ ಹೋಬಳಿ ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ತಾಂಡವಪುರ ಗ್ರಾಮ ಪಂಚಾಯತಿ ಕಚೇರಿಯಲ್ಲಿ ಪಂಚಾಯಿತಿ ವ್ಯಾಪ್ತಿಯ ವಿಕಲಚೇತನರ ಕುಂದು ಕೊರತೆ ಸಭೆಯನ್ನು ನಡೆಸಲಾಯಿತು
ಸಭೆಯಲ್ಲಿ ಭಾಗವಹಿಸಿದ ವಿಕಲಚೇತನರು ಮತ್ತು ಪೋಷಕರು ಸರಕಾರದಿಂದ ವಿಕಲ ಚೇತನರಿಗೆ ಸಿಗುವಂತಹ ಪಿಂಚಣಿ ಮತ್ತು ಸರ್ಕಾರ ಸೌಲಭ್ಯಗಳು ಇನ್ನು ಹೆಚ್ಚಾಗಿ ಸಿಗಬೇಕು ಆಗಿದ್ದಾಗ ಮಾತ್ರ ವಿಕಲಚೇತನರಿಗೆ ತುಂಬಾ ಸಹಾಯವಾಗುತ್ತದೆ ಎಂದು ವಿಕಲಚೇತನ ಮತ್ತು ಪೋಷಕರು ತಮ್ಮ ಅಭಿಪ್ರಾಯವನ್ನು ಸಭೆಯಲ್ಲಿ ತಿಳಿಸಿದರು
ಸಭೆಯಲ್ಲಿ ಮಾತನಾಡಿದ ಗ್ರಾಮ ಪಂಚಾಯಿತಿಯ ಲೆಕ್ಕ ಸಹಾಯಕ ಎಸ್ ಪುಟ್ಟರಾಜು ನಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಗ್ರಾಮಗಳ ವಿಕಲಚೇತನರಿಗೆ ಸರ್ಕಾರದಿಂದ ಮತ್ತು ಪಂಚಾಯತಿಯಿಂದ ಹಲವಾರು ಸೌಲಭ್ಯಗಳಿವೆ ಅದನ್ನು ಪಡೆದುಕೊಳ್ಳಿ ಸೌಲಭ್ಯವನ್ನು ಪಡೆದುಕೊಳ್ಳುವ ಮೂಲಕ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಳ್ಳಿ ಎಂದು ವಿಕಲಚೇತನರಲ್ಲಿ ಹಾಗೂ ಅವರ ಪೋಷಕರಲ್ಲಿ ಮನವಿ ಮಾಡಿದರು
ವಿಕಲಚೇತನರ ಸಂಘದ ರಂಗಸ್ವಾಮಿ ಮಾತನಾಡಿ ವಿಕಲಚೇತನರಿಗೆ ಸರ್ಕಾರಿ ಸಿಗುವಂತ ಸೌಲಭ್ಯಗಳು ಸರಿಯಾಗಿ ಸಿಗುತ್ತಿದೆ ಅಥವಾ ಇಲ್ಲವೇ ಎಂಬುದನ್ನು ತಿಳಿದುಕೊಂಡು ಸರ್ಕಾರಕ್ಕೆ ವರದಿಗಳನ್ನು ಸಲ್ಲಿಸಲು ಈ ಕುಂದು ಕೊರತೆ ಸಭೆಯನ್ನು ಕರೆಯಲಾಗಿತ್ತು ಸಭೆಯಲ್ಲಿ ತಮ್ಮ ಅಭಿಪ್ರಾಯಗಳನ್ನು ಮತ್ತು ಕಷ್ಟ ಸುಖಗಳನ್ನ ಮತ್ತು ತೊಂದರೆಗಳನ್ನ ನಮ್ಮ ಗಮನಕ್ಕೆ ತಂದಿದ್ದೀರಿ ಈ ಎಲ್ಲಾ ಸಮಸ್ಯೆಗಳನ್ನು ಸರ್ಕಾರಕ್ಕೆ ತಿಳಿಸುವುದಾಗಿ ತಿಳಿಸಿದರು
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಕಾರ್ಯದರ್ಶಿ ಕೆಕೆ ಮಾರಯ್ಯ ಲೆಕ್ಕ ಸಹಾಯಕ ಎಸ್ ಪುಟ್ಟರಾಜು ವಿಕಲಚೇತನ ಸಂಘದ ರಂಗಸ್ವಾಮಿ ಮಂಜುಳಾ ಸೇರದಂತೆ ಪಂಚಾಯತಿ ವ್ಯಾಪ್ತಿಯ ವಿಕಲಚೇತನರು ಪೋಷಕರು ಸರ್ಕಾರದ ಅಧಿಕಾರಿಗಳು ಈ ಸಭೆಯಲ್ಲಿ ಭಾಗಿಯಾಗಿದ್ದರು











