ವಿಜಯ ದರ್ಪಣ ನ್ಯೂಸ್….
ನನ್ನ ವಿರುದ್ಧದ ಆರೋಪ ಸತ್ಯಕ್ಕೆ ದೂರ: ಬದ್ರುದ್ಧಿನ್ ಷಾ ವೆಲ್ಫೇರ್ ಅಸೋಸಿಯೇಷನ್ ರಾಷ್ಟ್ರೀಯ ಅಧ್ಯಕ್ಷ ವೈ. ಶಶಿಕುಮಾರ್ ಸ್ಪಷ್ಟನೆ….!

ತಾವರೆಕೆರೆ : ಬದ್ರುದ್ಧಿನ್ ಷಾ ವೆಲ್ಫೇರ್ ಅಸೋಸಿಯೇಷನ್ ಸಂಸ್ಥೆ ಹಾಗೂ ನನ್ನ ವಿರುದ್ಧ ಮಾಡಿರುವ ಎಲ್ಲಾ ಆರೋಪಗಳು ಸತ್ಯಕ್ಕೆ ದೂರವಾದವು. ನನ್ನ ಕಡೆಯಿಂದ ಯಾವುದೇ ರೀತಿಯ ವಂಚನೆ ನಡೆದಿಲ್ಲ ಎಂದು ಬದ್ರುದ್ಧಿನ್ ಷಾ ವೆಲ್ಫೇರ್ ಅಸೋಸಿಯೇಷನ್ ರಾಷ್ಟ್ರೀಯ ಅಧ್ಯಕ್ಷ ಯಳಚಹಳ್ಳಿ ವೈ. ಶಶಿಕುಮಾರ್ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಸ್ಪಷ್ಟನೆ ನೀಡಿದ ಅವರು, ಹಣ ಡಬಲ್ ಮಾಡುವ ವಿಚಾರ ಹಾಗೂ ನಿವೇಶನಗಳನ್ನು ಕೊಡಿಸುವ ವಿಚಾರದಲ್ಲಿ ನನ್ನಿಂದ ಯಾವ ಕುಟುಂಬಗಳಿಗೂ ವಂಚನೆಯಾಗಿಲ್ಲ. ಈ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಾಗಿದ್ದು, ವಿಚಾರಣೆ ಹಂತದಲ್ಲಿದೆ. ವಿಷಯ ಕೋರ್ಟ್ನಲ್ಲಿ ಇರುವಾಗ ಈ ರೀತಿ ಇಲ್ಲಸಲ್ಲದ ಆರೋಪ ಮಾಡುವುದು ಸರಿಯಲ್ಲ ಶಂಕರ್ ಹಾಗೂ ಅಂಬೇಡ್ಕರ್ ಸೇವಾ ಸಮಿತಿ ಕರ್ನಾಟಕ ಸಂಘಟನೆಯ ಕೋಲಾರ ಸಂದೇಶ್ ಅವರು ನನ್ನ ವಿರುದ್ಧ ಮಾಡುತ್ತಿರುವ ಎಲ್ಲಾ ಆರೋಪಗಳು ಸಂಪೂರ್ಣ ಸುಳ್ಳು ಮತ್ತು ಆಧಾರರಹಿತ. ಸಂಘಟನೆಗಳಿಗೆ ಸೂಕ್ತ ದಾಖಲೆಗಳನ್ನು ನೀಡದೆ ವಿನಾ ಕಾರಣ ನನ್ನ ಸಂಸ್ಥೆ ಹಾಗೂ ನನ್ನ ವಿರುದ್ಧ ಪಿತೂರಿ ಮಾಡಿ ಸಮಾಜದಲ್ಲಿ ನನ್ನನು ತೇಜೋವಧೆ ಮಾಡುವ ಹುನ್ನಾರ ನಡೆದಿದೆ. ಸಂಸ್ಥೆಯ ಘನತೆಗೆ ಕುಂದು ತರಲು ಮತ್ತು ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸಲು ಈ ರೀತಿ ಅಪಪ್ರಚಾರ ಮಾಡಲಾಗುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೋರ್ಟ್ನಲ್ಲಿ ಪ್ರಕರಣ ನಡೆಯುತ್ತಿರುವುದರಿಂದ ಸತ್ಯಾಸತ್ಯತೆ ಶೀಘ್ರದಲ್ಲೇ ಹೊರಬರಲಿದ್ದು, ಸಾರ್ವಜನಿಕರು ಹಾಗೂ ಸಂಘಟನೆಯ ಫಲಾನುಭವಿಗಳು ಯಾವುದೇ ಸುಳ್ಳು ವದಂತಿಗಳಿಗೆ ಕಿವಿಗೊಡಬಾರದು ಈಗಾಗಲೆ ಶಂಕರ್ ಹಾಗು ಅವರ ಕುಟುಂಬದರವರ ವಿರುದ್ದ ಜಾತಿ ನಿಂದನೆ ಪ್ರಕರಣ ದಾಖಲಾಗಿದೆ ಹಾಗು ಅವರೇ ನನಗೆ ಹಣ ಕೊಡದೆ ಮೋಸ ಮಾಡಿರುವ ಕುರಿತು ಚೆಕ್ ಬೋನ್ಸ್ ಕೇಕ್ ಪ್ರಕರಣ ನ್ಯಾಯಾಲಯದಲ್ಲಿ ನಡೆಯುತ್ತಿದ್ದೆ ಆದರೆ ಸುಖಾ ಸಿಮ್ಮನೆ ನನ್ನ ಮೇಲೆ ಇಲ್ಲ ಸಲ್ಲದ ಸುಳ್ಳು ಆರೋಗಳನ್ನು ಮಾಡುತ್ತಿದ್ದಾರೆ ನಾನು ಈ ಕೂಡಲೆ ಮಾನ ನಷ್ಟ ಮೊಕದ್ದಮೆಯನ್ನು ದಾಖಲಿಸುತ್ತೇನೆ ಎಂದರು
ಬಳಿಕ ಉದ್ಯಮಿ ಇ ಹೊಸೂರು ವೆಂಕಟೇಶ್ ಮಾತನಾಡಿ ಶಂಕರ್ ಎಂಬ ವ್ಯಕ್ತಿ ನನ್ನ ಸಂಬAಧಿಯೊಬ್ಬರಿಗೆ ಕೆಲಸ ಕೊಡಿಸುವುದಾಗಿ ನಂಬಿಸಿ ನನ್ನ ಬಳಿ ಹತ್ತು ಲಕ್ಷ ಹಣ ಪಡೆದು ವಂಚನೆ ಮಾಡಿದ್ದಾರೆ. ಇದೇ ರೀತಿ ಸಾಕಷ್ಟು ಜನರಿಗೆ ನಂಬಿಸಿ ಹಣ ವಸೂಲಿ ಮಾಡುತ್ತಿದ್ದಾರೆ. ಈ ಪ್ರಕರಣ ಕೋರ್ಟ್ ನಲ್ಲಿ ಮೊಕದ್ದಮೆ ದಾಖಲಿಸಿದ್ದೇನೆ ಶಂಕರ್ ಹಾಗು ಅವರ ಕುಟುಂಬದವರು ಹೆದರಿಸಿ ಬೆದರಿಸಿ ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಕೋಲಾರ ನಾರಾಯಣಸ್ವಾಮಿ, ಉದ್ಯಮಿ ಇ ಹೊಸೂರು ವೆಂಕಟೇಶ್. ವೈ.ಎನ್.ಪುರ. ಸಿ.ಪ್ರಸಾದ್ ಜಡಿಗೇನಹಳ್ಳಿ ಪುಷ್ಪಾವತಿ , ಸೇರಿದಂತೆ ನೂರಾರು ಜನ ಹಾಜರಿದ್ದರು.









