ವಿಜಯ ದರ್ಪಣ ನ್ಯೂಸ್…..
ಶ್ರೀ ರಾಮನ ನಾಮವನ್ನು ಪಟನೆ ಮಾಡಿದರೆ ಸ್ವರ್ಗದಲ್ಲಿ ಮೋಕ್ಷ ಆನಂದ ಸ್ವಾಮಿಗಳು

ದೇವನಹಳ್ಳಿ ತಾಲ್ಲೂಕು: ಶ್ರೀರಂಗನಾಥ ಸ್ವಾಮಿ ದೇವಾಲಯದಲ್ಲಿ ವೈಭವದಿಂದ ಗುರುಪಾದುಕ ಪೂಜೆ ಮೂಡಿಬರುತ್ತಿದೆ. ಭಕ್ತಿ ಮಾರ್ಗದಲ್ಲಿ ಕೈವಾರನಾರೇಯಣ ತಾತಯ್ಯ ವೀರ ಬ್ರಹ್ಮೇಂದ್ರ ಸ್ವಾಮಿಗಳು ರವರ ಕಾಲಜ್ಞಾನವನ್ನು ಅರಿತು ಜೀವನದಲ್ಲಿ ರೂಪಿಸಿ ಕೊಳ್ಳಬೇಕೆಂದು ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವಿಜಯಪುರ ಲೀಜನ್ ಅಧ್ಯಕ್ಷ ಮಾರ್ಕೆಟ್ ವೆಂಕಟೇಶ್ ತಿಳಿಸಿದರು
ವಿಜಯಪುರ ಪಟ್ಟಣದ ಚಿಕ್ಕಬಳ್ಳಾಪುರ ರಸ್ತೆಯಲ್ಲಿರುವ ಶ್ರೀರಂಗ ಕ್ಷೇತ್ರ ರಂಗನಾಥ ಸ್ವಾಮಿ ಸನ್ನಿಧಿಯಲ್ಲಿ ಶ್ರೀ ಕೃಷ್ಣ ಸತ್ಸಂಗ ಯತೀಂದ್ರ ಸೇವಾ ಟ್ರಸ್ಟ್ ಸಹಕಾರದೊಂದಿಗೆ ಶ್ರೀರಂಗ ಗೀತಾ ಸತ್ಸಂಗ ಸೇವಾ ಬಳಗ ವತಿಯಿಂದ 6ನೆಯ ಕಾರ್ಯಕ್ರಮ ಹಾಗೂ ಶ್ರೀ ಕೈವಾರ ತಾತಯ್ಯನವರ 31ನೆಯ ಪಾದಕ ಪೂಜೆಯಲ್ಲಿ ಶ್ರೀ ಕ್ಷೇತ್ರ *ಕೈವಾರ ನಾರೇಯಣ ಯತೀಂದ್ರರ ಧರ್ಮ ಪ್ರಚಾರಕ ಶ್ರೀ ಆನಂದ ಗುರೂಜಿ ರವರು *ಭಕ್ತ ಅಂಬರೀಶ* ಬಗ್ಗೆ ಮಾತನಾಡುತ್ತಾಭಗವತ ಪುರಾಣದ 9ನೇ ಸ್ಕಂದದ ಉಲ್ಲೇಖದಂತೆ, ವಿಷ್ಣು ಭಕ್ತನಾದ ಅಂಬರೀಷ, ಸದಾ ಸತ್ಯವನ್ನು ನುಡಿಯುವ ಗುಣ ಹೊಂದಿರುತ್ತಾನೆ.
ಪರಮಭಾಗವತನಾದ ಅಂಬರೀಷನು ಏಳು ದ್ವೀಪಗಳಿಂದ ಕೂಡಿದ ಅಖಂಡಭೂಮಂಡಲಕ್ಕೂ ಅವನು ಒಡೆಯನಾಗಿದ್ದನು. ಎಷ್ಟು ವೆಚ್ಚ ಮಾಡಿದರೂ ಮುಗಿಯದಿದ್ದ ಅಪಾರವಾದ ಐಶ್ವರ್ಯವನ್ನೂ ಎಣೆಯಿಲ್ಲದ ವೈಭವವನ್ನೂ ಅಂಬರೀಷನು ಹೊಂದಿದ್ದನು.
ಸಾಮಾನ್ಯ ಮನುಷ್ಯರಿಗೆ ಅತಿದುರ್ಲಭವೆನಿಸಿದ್ದ ಅತುಲೈಶ್ವರ್ಯವನ್ನೂ ಅಪಾರವಾದ ಭೋಗಸಾಮಗ್ರಿಗಳನ್ನೂ ಹೊಂದಿದ್ದರೂ ಕೂಡ ರಾಜನು ಅವೆಲ್ಲವನ್ನೂ ಕನಸಿನಂತೆ ಭಾವಿಸಿದ್ದನು. ಯಾವ ವೈಭವದಿಂದ ಮತ್ತು ಸಂಪತ್ತಿನಿಂದ ಮನುಷ್ಯನು ತಮೋಗುಣದಲ್ಲಿ ಮುಳುಗಿ ಅಹಂಕಾರ-ಮಮಕಾರಗಳನ್ನು ಹೊಂದುವನೋ ಅಂತಹ ವೈಭವವೂ ಒಂದು ದಿನ ನಾಶವಾಗುವುದೆಂಬುದನ್ನು ಅಂಬರೀಷನು ತಿಳಿದಿದ್ದನು.
ಭಗವಂತನಾದ ವಾಸುದೇವನಲ್ಲಿಯೂ ಮತ್ತು ಅವನ ಭಕ್ತರಲ್ಲಿಯೂ ಅಂಬರೀಷನಿಗೆ ಅತ್ಯಾದರವಿದ್ದಿತು. ಭಗವಂತನಲ್ಲಿ ಅನನ್ಯ ಭಕ್ತಿಯನ್ನೂ ಅವನ ಭಕ್ತರಲ್ಲಿ ಅತ್ಯಾದರವನ್ನೂ ಅಂಬರೀಷನು ಹೊಂದಿದ ನಂತರ ಅತುಲೈಶ್ವರ್ಯಗಳಿಂದಲೂ ಭೋಗವೈಭವಗಳಿಂದಲೂ ಕೂಡಿರುವ ಈ ವಿಶ್ವವನ್ನು ಒಂದು ಮಣ್ಣು ಹೆಂಟೆಗೆ ಸಮಾನವಾಗಿ ಕಂಡನು. ದಿನನಿತ್ಯ ರಾಮ ನಾಮವನ್ನು ಜಪಿಸಿದ್ದಾರೆ ಸ್ವರ್ಗದಲ್ಲಿ ನಮಗೆ ಮೋಕ್ಷ ಸಿಗುತ್ತದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ರಮೇಶ್ ಸ್ವಾಮಿಗಳು ವಹಿಸಿದರು. ಮುಖ್ಯಅತಿಥಿಗಳಾಗಿ ಪುರ ಗ್ರಾಮದ ಸಮಾಜ ಸೇವಕ ಕೃಷ್ಣಪ್ಪ, ಪಟ್ಟಣ ಬಲಿಜ ಸಂಘದ ಅಧ್ಯಕ್ಷ ಎಂ ಮುನಿರಾಜು, ಗೋಪಾಲಪ್ಪ , ಸಮಾಜಸೇವಕರಾದ ಎಂ ಕೇಶವಪ್ಪ, ರತ್ನಮ್ಮ, ರಾಮದಾಸ್, ಅನಿತಾ, ವಿಎನ್ ವೆಂಕಟೇಶ್ ತಿಗಳ ವೈಭವ ಪತ್ರಿಕೆಯ ಸಂಪಾದಕ ಜೆ ಆರ್ ಮುನಿವೀರಣ್ಣ ಸೌದೆ ವ್ಯಾಪಾರಿ ಆಂಜೀನಪ್ಪ ಮತ್ತು ಪದಾಧಿಕಾರಿಗಳು ಭಕ್ತಾದಿಗಳು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ ಎಂ ವಿ ನಾಯ್ಡು ಮತ್ತು ಮುನಿರಾಜು ರವರ ವಾದ್ಯಗೋಷ್ಠಿ ಯೊಂದಿಗೆ ನಾಗರತ್ನ ಮುನಿರಾಜು ಮತ್ತು ಸಂಗಡಿಗರು ಶ್ರೀ ರಾಮ ನಾಮ ಸ್ಮರಣೆ ಮಾಡಿದರು.
ಈ ಕಾರ್ಯಕ್ರಮದ ಭಕ್ತಿ ಸೇವೆಯನ್ನು ವಿ ವೆಂಕಟೇಶ್ ಮತ್ತು ಕುಟುಂಬದವರು ನೆರವೇರಿಸಿದರು.
.










