--Ads--

ತಮಿಳುನಾಡಿಗಾಗಿ ನೀರು ಬಿಟ್ಟಿಲ್ಲ : ಸಚಿವ ಚಲುವರಾಯಸ್ವಾಮಿ ಸ್ಪಷ್ಟನೆ”

On: August 16, 2026 11:18 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ಮುಂದಿನ ಆಗಸ್ಟ್ ಒಳಗೆ ಮೇಕೆದಾಟುಗೆ ಶಂಕುಸ್ಥಾಪನೆ

ತಮಿಳುನಾಡಿಗಾಗಿ ನೀರು ಬಿಟ್ಟಿಲ್ಲ : ಸಚಿವ ಚಲುವರಾಯಸ್ವಾಮಿ ಸ್ಪಷ್ಟನೆ”

ಮಂಡ್ಯ, ಆಗಸ್ಟ್ 15,
ಬೃಹತ್ ಮತ್ತು ಮಧ್ಯಮ ಜಲಸಂಪನ್ಮೂಲ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ* ಅವರು ಇಂದು ಮಂಡ್ಯದಲ್ಲಿ ಸುದ್ದಿಗೋಷ್ಟಿ ನಡೆಸಿ ರಾಜ್ಯದ ನೀರಾವರಿ ಯೋಜನೆಗಳು ಮತ್ತು ಕಾವೇರಿ ವಿವಾದದ ಕುರಿತು ಪ್ರಮುಖ ಘೋಷಣೆಗಳನ್ನು ಮಾಡಿದರು.

ಮೇಕೆದಾಟು ಯೋಜನೆಗೆ ವೇಗ
ಮುಂದಿನ ಆಗಸ್ಟ್ ಒಳಗೆ ಮೇಕೆದಾಟು ಯೋಜನೆಗೆ ಶಂಕುಸ್ಥಾಪನೆ*ಮಾಡುವುದೇ ನಮ್ಮ ಗುರಿ” ಎಂದು ಸಚಿವರು ಹೇಳಿದರು. ಜಲಸಂಪನ್ಮೂಲ ಸಚಿವನಾಗಿ ಅಧಿಕಾರ ವಹಿಸಿಕೊಂಡ ತಕ್ಷಣವೇ ಮೇಕೆದಾಟು ಯೋಜನೆಗೆ ವೇಗ ನೀಡಲಾಗಿದೆ. ಕೇಂದ್ರಕ್ಕೆ ಮತ್ತೆ DPR ಕಳುಹಿಸಲಾಗಿದೆ. ಯೋಜನೆಗೆ 12,500 ಎಕರೆ ಜಮೀನು ಅವಶ್ಯಕವಿದ್ದು, 20,000 ಎಕರೆ ಗುರುತಿಸಲಾಗಿದೆ. ಅರಣ್ಯ ಪ್ರದೇಶಕ್ಕೆ ಬದಲಾಗಿ ಸೂಕ್ತ ಜಾಗ ನೀಡಿ ಅರಣ್ಯ ಜಾಗದಲ್ಲಿ ಯೋಜನೆ ಜಾರಿಗೆ ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.

“ಕಾವೇರಿ ಕೊಳ್ಳದ ಜನರ ಹಿತ ಕಾಯುವ ದೃಷ್ಟಿಯಿಂದಲೇ ಸರ್ಕಾರ ಈ ತೀರ್ಮಾನ ತೆಗೆದುಕೊಂಡಿದೆ. ಕಾವೇರಿ ನದಿ ನೀರು ವಿವಾದಕ್ಕೆ ಮೇಕೆದಾಟು ಯೋಜನೆಯೇ ಶಾಶ್ವತ ಪರಿಹಾರ” ಎಂದು ಹೇಳಿದರು. ಯೋಜನೆ ಸಂಬಂಧ ತಾಂತ್ರಿಕ ಮತ್ತು ಕಾನೂನು ತಂಡಗಳು ವೇಗವಾಗಿ ಕಾರ್ಯ ನಿರ್ವಹಿಸಲಿವೆ. ಪ್ರತಿನಿತ್ಯ ಫಾಲೋಅಪ್ ಮಾಡಲು ದೆಹಲಿಯಲ್ಲಿ ಇಬ್ಬರು ನೀರಾವರಿ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.ಸಚಿವರು ತಿಳಿಸಿದರು

ತಮಿಳುನಾಡಿಗಾಗಿ ನೀರು ಬಿಟ್ಟಿಲ್ಲ”
ಕೆಆರ್‌ಎಸ್ ಜಲಾಶಯದಿಂದ ತಮಿಳುನಾಡಿಗೆ ನೀರು ಬಿಡುಗಡೆ ವಿಚಾರವಾಗಿ ಮಾತನಾಡಿದ ಸಚಿವರು, “ತಮಿಳುನಾಡಿಗಾಗಿ ನೀರು ಬಿಟ್ಟಿಲ್ಲ*. ನನ್ನ ಮೇಲೆ ನಂಬಿಕೆ ಇಡಿ” ಎಂದು ಸ್ಪಷ್ಟಪಡಿಸಿದರು.

“ಜೂನ್ ತಿಂಗಳಿನಿಂದಲೇ ತಮಿಳುನಾಡಿಗೆ ನೀರು ಬಿಡಬೇಕು. ಆದರೆ ಜೂನ್, ಜುಲೈನಲ್ಲಿ ನಾವು ನೀರು ಬಿಡಲಿಲ್ಲ. 3500 ಕ್ಯೂಸೆಕ್ ನೀರು ಬಿಡಲು ಆದೇಶವಿದ್ದಾಗ ಹೆಚ್ಚಿಗೆ ನೀರು ಹೋಗ್ತಿತ್ತು. ಈಗ 12 ಸಾವಿರ ಕ್ಯೂಸೆಕ್ ನೀರು ಬಿಡಲು ಹೇಳಿದ್ದಾರೆ. ಕಬಿನಿಯಿಂದ 10 ಸಾವಿರ ಕ್ಯೂಸೆಕ್ ಹೋಗ್ತಿದೆ. ಸೀಪೇಜ್ ವಾಟರ್ ಸಹ ತಮಿಳುನಾಡು ಸೇರುತ್ತಿದೆ” ಎಂದು ಮಾಹಿತಿ ಮಾಹಿತಿ ನೀಡಿದರು.

ಒಳಹರಿವು, ಹೊರಹರಿವಿನ ಅಂಕಿಅಂಶಗಳನ್ನು ತಾಂತ್ರಿಕ ಕಾರಣಕ್ಕೆ ಈಗ ಘೋಷಣೆ ಮಾಡಲು ಆಗುವುದಿಲ್ಲ. ಸುಖಾಸುಮ್ಮನೆ ಗೊಂದಲ ಮಾಡಿಕೊಂಡು ತಮಿಳುನಾಡಿಗೆ ಲಾಭ ಮಾಡಿಕೊಡುವುದು ಬೇಡ ಎಂದು ಹೇಳಿದರು.

ಕೆಆರ್‌ಎಸ್ ಮತ್ತು ಹೇಮಾವತಿ ಬಗ್ಗೆ.                     ಎಲ್ಲಾ ಸರ್ಕಾರಗಳಲ್ಲೂ ಮಳೆ ಕೊರತೆಯಾಗಿದೆ. ಆಗಸ್ಟ್ ಕೊನೆಯವರೆಗೂ ಮಳೆ ನಿರೀಕ್ಷೆ ಇದೆ. ಸೆಪ್ಟೆಂಬರ್‌ನಲ್ಲಿ ಕೆಆರ್‌ಎಸ್ ಭರ್ತಿಯ ವಿಶ್ವಾಸವಿದೆ ಎಂದು ಹೇಳಿದರು. ಕಳೆದ 20 ದಿನಗಳಿಂದ ಕೆಆರ್‌ಎಸ್ ಜಲಾಶಯದಿಂದ ಕೆರೆ ಕಟ್ಟೆಗಳಿಗೆ, ಬೆಳೆಗಳಿಗೆ ನೀರು ಹರಿಸಲಾಗುತ್ತಿದೆ. ಹೇಮಾವತಿ ಜಲಾಶಯದಿಂದ ನಾಲೆಗಳಿಗೆ ನೀರು ಬಿಡಲು ಹೇಳಲಾಗಿದೆ. ಅಲ್ಪಾವಧಿ ಬೆಳೆಗೆ ನೀರು ಬಿಡುವ ಬಗ್ಗೆ ಬುಧವಾರ ತೀರ್ಮಾನ ಮಾಡಲಾಗುವುದು ಎಂದು ತಿಳಿಸಿದರು.

ಮಂಡ್ಯಕ್ಕೆ ಹೊಸ ಕೊಡುಗೆಗಳು.                        ಮಂಡ್ಯದಲ್ಲಿ ಕೃಷಿ ಮತ್ತು ಹೈನುಗಾರಿಕೆ ಕಾಲೇಜು ಸ್ಥಾಪಿಸಲಾಗುವುದು. ವಿದ್ಯಾರ್ಥಿಗಳು ಪದವೀಧರರಾಗಿ ಸ್ವತಂತ್ರ ಉದ್ಯಮಿಗಳಾಗಬೇಕು. ರಾಜ್ಯದ ಮೊದಲ ಹೈನುಗಾರಿಕೆ ಕಾಲೇಜು ಮಂಡ್ಯದ ಸಾತನೂರಲ್ಲಿ ನಿರ್ಮಾಣವಾಗಲಿದೆ. ಮಂಡ್ಯ ನಗರದ ಸಾರ್ವಜನಿಕ ಸ್ಥಳಗಳಲ್ಲಿ ಉಚಿತ ವೈ-ಫೈ ಸೌಲಭ್ಯ ನೀಡಲಾಗುವುದು.

ಸಿಎಂ ಡಿ.ಕೆ. ಶಿವಕುಮಾರ್ ಕಾವೇರಿ ಅಚ್ಚುಕಟ್ಟು ಪ್ರದೇಶದವರು. ನಿಮ್ಮ ಸಮಸ್ಯೆಗಳಿದ್ದರೆ ನಮ್ಮನ್ನು ನೇರವಾಗಿ ಸಂಪರ್ಕಿಸಿ. ಯಾವುದೇ ಪ್ರತಿಭಟನೆಗಳು ಬೇಡ. ನಿಮ್ಮ ಸಲಹೆಗಳನ್ನು ನೀಡಿ ಎಂದು ರೈತರಿಗೆ ಮನವಿ ಮಾಡಿದರು.

ಪತ್ರಿಕಾ ಗೋಷ್ಠಿಯಲ್ಲಿ ಶಾಸಕರಾದ ರವಿಕುಮಾರ್ ಗಣಿಗ, ದಿನೇಶ್ ಗೊಳಿಗೌಡ, ಮೈಶುಗರ್ ಅಧ್ಯಕ್ಷ ಸಿ ಡಿ ಗಂಗಾಧರ್, ಸಣ್ಣ ಕೈಗಾರಿಕಾ ಅಭಿವೃದ್ದಿ ನಿಗಮದ ಉಪಾಧ್ಯಕ್ಷೆ ವಿಜಯಲಕ್ಷ್ಮಿ ರಂಘುನಂದನ್ , ಸಿ ಎಂ ದ್ಯಾವಪ್ಪ ಇದ್ದರು

WhatsApp

Join Now

Telegram

Join Now

Instagram

Join Now