ವಿಜಯ ದರ್ಪಣ ನ್ಯೂಸ್…..
ನೇಣುಬಿಗಿದ ಸ್ಥಿತಿಯಲ್ಲಿ ಯುವತಿ ಮೃತದೇಹ ಪತ್ತೆ: ಕೊಲೆ ಶಂಕೆ
ಚನ್ನರಾಯಪಟ್ಟಣದ ಅಂಬಿಕಾ ಬಡಾವಣೆಯಲ್ಲಿ ವಾಸವಿರುವ ಬಿ.ಎ.ರಚಿತಾ (19) ನೇಣಿಗೆ ಶರಣಾಗಿರುವ ಯುವತಿಯಾಗಿದ್ದು, ಇಂದು ಸಂಜೆ ತನ್ನ ಮನೆಯಲ್ಲಿಯೇ ನೇಣುಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.
ಪ್ರಕರಣ ಹಿನ್ನಲೆ : ಮೃತಳಾದ ಬಿ.ಎ.ರಚಿತಾ ಮತ್ತು ನವೀನ್ ಎಂಬ ಯುವಕ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು ಎನ್ನಲಾಗಿದೆ. ನವೀನ್ ಚನ್ನರಾಯಪಟ್ಟಣ ರೇಣುಕಾಬ ರಸ್ತೆಯಲ್ಲಿರುವ ಐಡಿಯಲ್ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಒಂದುವರೆ ವರ್ಷದಿಂದ ಪ್ರೀತಿ ಮಾಡುತ್ತಿದ್ದರು ಎನ್ನಲಾಗಿದೆ. ಇಂದು ವರಮಹಾಲಕ್ಷ್ಮಿ ಹಬ್ಬದ ದಿನವಾದ ಕಾರಣ ಪ್ರಿಯಕರ ನವೀನ್ ರಚಿತಾಳಿಗೆ ಶುಭಾಶಯ ಹೇಳುವುದಕ್ಕಾಗಿ ಆಕೆಯ ಮನೆಗೆ ಬಂದಿದ್ದು, ನಂತರ ಆಕೆಯ ಸಲುಗೆಯನ್ನು ದುರುಪಯೋಗಿಸಿಕೊಂಡು ಆಕೆಯ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಮುಂದಾಗಿದ್ದಾನೆ.
ಇದಕ್ಕೆ ಒಪ್ಪದ ರಚಿತಾಳ ಮೇಲೆ ಬಲವಂತದ ಲೈಂಗಿಕ ದೌರ್ಜನ್ಯವನ್ನು ಎಸಗಿ ತನ್ನ ಕಾಮತೃಷೆಯನ್ನು ತೀರಿಸಿಕೊಂಡು, ಆಕೆಯನ್ನು ಕೊಲೆ ಮಾಡಿ ಆಕೆಯೇ ನೇಣು ಬಿಗಿದು ಸಾವನ್ನಪ್ಪಿದ್ದಾಳೆ ಎಂದು ಬಿಂಬಿಸಲು ನೇಣುಹಾಕಿದ್ದು, ಆರೋಪಿ ಪ್ರಿಯಕರ ಅಲ್ಲಿಂದ ಪರಾರಿಯಾಗಿದ್ದಾನೆ ಎಂಬುದು ಪೋಷಕರ ಗಂಭೀರವಾದ ಆರೋಪ.
ಇನ್ನು ಪೋಷಕರು ಆರೋಪ ಮಾಡುತ್ತಿರುವ ನವೀನ್ ಮತ್ತು ಮೃತ ರಚಿತಾ ತಾಯಿ ಪಟ್ಟಣದ ರೇಣುಕಾಂಬ ರಸ್ತೆಯಲ್ಲಿರುವ ಐಡಿಯಲ್ಲಿ ಬೇಕರಿಯಲ್ಲಿಯೇ ಕೆಲಸ ಮಾಡುತ್ತಿದ್ದು, ಇಂದು ನಾನು ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ನವೀನ್ ನನ್ನ ಮನೆಗೆ ಹೋಗಿ ಈ ಕೃತ್ಯವೆಸಗಿದ್ದಾನೆ. ಹಿಂದೆ ಇವರುಗಳ ಮಧ್ಯೆ ಜಗಳವಾಗಿದ್ದು, ನನ್ನ ಮಗಳು ನವೀನ್ ನನ್ನು ಮದುವೆಯಾಗುವುದಿಲ್ಲ. ನೀನು ತೋರಿಸಿದ ಹುಡುಗನನ್ನೆ ಮದುವೆಯಾಗುತ್ತೇನೆ ಎಂದು ಹೇಳಿದ್ದಳು. ನಾನು ಸರಿ ಎಂದು ಆಕೆಯನ್ನು ಸಮಾಧಾನ ಮಾಡಿದೆ.
ಆದರೇ ಇಂದು ನವೀನ್ ನನ್ನ ಮನೆಗೆ ಹೋಗಿ ಆಕೆಯೊಂದಿಗೆ ಜಗಳವಾಗಿ ಆಕೆಯನ್ನು ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಿ ಬಳಿಕ ನೇಣುಹಾಕಿ ಕೊಲೆ ಮಾಡಿರಬಹುದು. ನನಗೆ ನನ್ನ ಮಗಳ ಸಾವಿನ ಬಗ್ಗೆ ಸತ್ಯಾಂಶ ಹೊರಬರಬೇಕು ಮತ್ತು ನ್ಯಾಯ ಸಿಗಬೇಕು. ಕಾರಣ ನನ್ನ ಮಗಳು ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಹೇಡಿಯಲ್ಲ. ಆಕೆಯನ್ನು ನಾನು ಮಗನಂತೆ ಬೆಳೆಸಿದ್ದೇನೆ ಎನ್ನುತ್ತಾರೆ ಮೃತ ರಚಿತಾ ತಾಯಿ.
ಇನ್ನು ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು, ಮೃತದೇಹವನ್ನು ಕೆಳಗಿಳಿಸಿದ್ದು, ಮರಣೋತ್ತರ ಪರೀಕ್ಷೆಗಾಗಿ ಚನ್ನರಾಯಪಟ್ಟಣದ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದು, ತನಿಖೆ ಮುಂದುವರೆಸಿದ್ದಾರೆ.
ಆದರೇ, ಪಟ್ಟಣದ ಪೊಲೀಸ್ ಠಾಣೆಯಲ್ಲಿ ನನ್ನ ಮಗಳ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕೊಲೆ ಪ್ರಕರಣವೆಂದು ದಾಖಲಿಸಲು ಮುಂದಾಗುತ್ತಿಲ್ಲ ಎಂದು ಪೋಷಕರ ಆರೋಪವಾಗಿದೆ. ಈ ಸಂಬಂಧ ಪಟ್ಟಣದ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಸಾರ್ವಜನಿಕರು ಮತ್ತು ವಿವಿಧಪರ ಸಂಘಟನೆಯ ಮುಖಂಡರುಗಳು ಜಮಾಯಿಸಿದ್ದು, ಕೂಡಲೇ ದೂರು ದಾಖಲಿಸಬೇಕೆಂಬುದು ಆಗ್ರಹಿಸುತ್ತಿದ್ದು, ಪ್ರತಿಭಟನೆ ನಡೆಸುತ್ತಿದ್ದಾರೆ.












