--Ads--

ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ಜಯಂತಿ ಕಾರ್ಯಕ್ರಮದಲ್ಲಿ  ಸಚಿವರಿಂದ  ನಮನಗಳು 

On: August 22, 2026 5:19 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ಜಯಂತಿ ಕಾರ್ಯಕ್ರಮದಲ್ಲಿ  ಸಚಿವರಿಂದ  ನಮನಗಳು 

ತಾಂಡವಪುರ ಆಗಸ್ಟ್ 22 ಸಮಾನತೆ ಸಾಮಾಜಿಕ ನ್ಯಾಯದ ಹರಿಕಾರ ದಿವಂಗತ ಡಿ ದೇವರಾಜ್ ಅರಸು ರವರು ಸರ್ವರ ಅಭಿವೃದ್ಧಿಯ ಆಶಯಗಳನ್ನು ಆಡಳಿತದ ಭಾಗವಾಗಿಸಿದ ಅವರ ದೂರದೃಷ್ಟಿ ಇಂದಿಗೂ ನಮಗೆ ದಾರಿದೀಪ. ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ನಗರಾಭಿವೃದ್ಧಿ ಸಚಿವ ಡಾ ಯತೀಂದ್ರ ಸಿದ್ದರಾಮಯ್ಯನವರು ಹೇಳಿದರು

ಅವರು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಆಯೋಜಿಸಿದ್ದ ದೇವರಾಜ್ ಅರಸುರವರ ಜಯಂತಿಯ ಕಾರ್ಯಕ್ರಮದಲ್ಲಿ ಮಹಾತ್ಮರಿಗೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿ ಮಾತಾಡುತ್ತಾ “ಉಳುವವನೇ ಭೂಮಿಯ ಒಡೆಯ” ಎಂಬ ಐತಿಹಾಸಿಕ ಆಶಯದೊಂದಿಗೆ ಭೂ ಸುಧಾರಣೆಗಳನ್ನು ಜಾರಿಗೆ ತಂದು, ಜೀತ ಪದ್ಧತಿಯ ನಿರ್ಮೂಲನೆಗೆ ಕ್ರಮ ಕೈಗೊಂಡು, ಭೂಮಿಯ ಹಕ್ಕು ಹಾಗೂ ಗೌರವಯುತ ಬದುಕಿನ ಅವಕಾಶವನ್ನು ದುಡಿಯುವ ವರ್ಗಗಳಿಗೆ ಕಲ್ಪಿಸಿದ ಮಹಾನ್ ಸುಧಾರಕರಾಗಿದ್ದರು. ಹಿಂದುಳಿದ ವರ್ಗಗಳ ಸಬಲೀಕರಣ, ಮೀಸಲಾತಿ, ಶಿಕ್ಷಣದ ವಿಸ್ತರಣೆ ಹಾಗೂ ಗ್ರಾಮೀಣ ಅಭಿವೃದ್ಧಿಗೆ ಅವರು ನೀಡಿದ ಆದ್ಯತೆ ಸಾಮಾಜಿಕ ಪರಿವರ್ತನೆಗೆ ಹೊಸ ದಿಕ್ಕು ನೀಡಿತು. ಎಂದು ಹೇಳಿದರು

ಬಡವರು, ಭೂರಹಿತರು, ಹಿಂದುಳಿದವರು ಹಾಗೂ ಗ್ರಾಮೀಣ ಜನರ ಬದುಕಿನಲ್ಲಿ ಆಶಾಕಿರಣ ಮೂಡಿಸಿದ ದೇವರಾಜ ಅರಸು ಅವರ ಸಾಮಾಜಿಕ ನ್ಯಾಯದ ಪರಂಪರೆ ಸದಾ ಸ್ಮರಣೀಯ. ಎಂದು ಸ್ಮರಿಸಿಕೊಂಡರು
ಅವರ ಸಮಾನತೆ ಮತ್ತು ಸರ್ವರಿಗೂ ಅವಕಾಶ ಎಂಬ ಆಶಯಗಳನ್ನು ಮುಂದುವರಿಸುವುದೇ ಅವರಿಗೆ ಸಲ್ಲಿಸುವ ನಿಜವಾದ ಗೌರವ. ಅವರ ಜನಪರ ಚಿಂತನೆಗಳು ಹಾಗೂ ಸಮಾಜಮುಖಿ ಆಡಳಿತ ನಮಗೆ ಸದಾ ಪ್ರೇರಣೆಯಾಗಲಿ ಎಂದರು.

ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಸಭಾಪತಿ ಸಲೀಂ ಅಹ್ಮದ್, ಸಚಿವರಾದ ಶಿವರಾಜ್ ತಂಗಡಗಿ, ಬಸವಂತಪ್ಪ, ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಹೆಚ್.ಎಂ.ರೇವಣ್ಣ, ಇತಿಹಾಸ ತಜ್ಞ ನಂಜರಾಜೇ ಅರಸ್ ಹಾಗೂ ಶಾಸಕರುಗಳು ಮುಖಂಡರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು

WhatsApp

Join Now

Telegram

Join Now

Instagram

Join Now

ಇದನ್ನೂ ಓದಿ

ಸಿಎಂ ಡಿ.ಕೆ.ಶಿವಕುಮಾರ್ ಅವರಿಂದ KEO AI PC – 2026 ಲೋಕಾರ್ಪಣೆ

ವಿಕಾಸ ಸೌಧದಲ್ಲಿ  ನಡೆದ ಕೆ ಆರ್ ಎಸ್ ಜಲಾಶಯದ ನೀರಾವರಿ ಸಲಹಾ ಸಮಿತಿಯ ಸಭೆ 

ಅಪೋಲೋ ಹಾಸ್ಪಿಟಲ್ಸ್‌ ನಿಂದ ‘ಆಲ್ವೇಸ್ ಓಪನ್. ಆಲ್ವೇಸ್ ಹಿಯರ್’ ಭಾರತದಿಂದ ಜಾಗತಿಕ ಆರೋಗ್ಯಸೇವೆಯಲ್ಲಿ ಪ್ರಥಮ ಉಪಕ್ರಮ ಅಪೋಲೋ ಹಾಸ್ಪಿಟಲ್ಸ್‌ ಗಳಾದ್ಯಂತ ಭಾನುವಾರದಂದೂ ವೈದ್ಯಕೀಯ ಸಮಾಲೋಚನೆಗಳು, ರೋಗನಿರ್ಣಯ ಪರೀಕ್ಷೆಗಳು, ರೋಗತಡೆಯ ಆರೋಗ್ಯ ತಪಾಸಣೆಗಳು ಮತ್ತು ನಿಗದಿತ ಚಿಕಿತ್ಸಾ ಸೇವೆಗಳನ್ನು ವಿಸ್ತರಿಸುವ ತನ್ನ ಮೊದಲ ಉಪಕ್ರಮ ಪ್ರಾರಂಭಿಸಿದೆ

ನಂಜನಗೂಡು ವಿಧಾನಸಭಾ ಕ್ಷೇತ್ರದ  ಹುರ ಗ್ರಾಮದಲ್ಲಿ ಪೋಲಿಸ್ ಔಟ್ ಪೋಸ್ಟ್ ಮಂಜೂರು ಮಾಡುವಂತೆ ಸರ್ಕಾರಕ್ಕೆ ಮನವಿ

ಸದ್ಗುರು ಸನ್ನಿಧಿ ಬೆಂಗಳೂರಿನಲ್ಲಿ ವಿಜೃಂಭಣೆಯ ನಾಗರ ಪಂಚಮಿಯ ಆಚರಣೆ

ವಿಪ್ರೋ ಕನ್ಸ್ಯೂಮರ್ ಕೇರ್ ಡರ್ಮಟಚ್ ಅನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ ಡಿಜಿಟಲ್ ಬ್ರಾಂಡ್ ಪ್ರವೇಶವನ್ನು ಆರಂಭಿಸಿದೆ