ವಿಜಯ ದರ್ಪಣ ನ್ಯೂಸ್…
ಅಪೋಲೋ ಹಾಸ್ಪಿಟಲ್ಸ್ ನಿಂದ ‘ಆಲ್ವೇಸ್ ಓಪನ್. ಆಲ್ವೇಸ್ ಹಿಯರ್’ ಭಾರತದಿಂದ ಜಾಗತಿಕ ಆರೋಗ್ಯಸೇವೆಯಲ್ಲಿ ಪ್ರಥಮ ಉಪಕ್ರಮ ಅಪೋಲೋ ಹಾಸ್ಪಿಟಲ್ಸ್ ಗಳಾದ್ಯಂತ ಭಾನುವಾರದಂದೂ ವೈದ್ಯಕೀಯ ಸಮಾಲೋಚನೆಗಳು, ರೋಗನಿರ್ಣಯ ಪರೀಕ್ಷೆಗಳು, ರೋಗತಡೆಯ ಆರೋಗ್ಯ ತಪಾಸಣೆಗಳು ಮತ್ತು ನಿಗದಿತ ಚಿಕಿತ್ಸಾ ಸೇವೆಗಳನ್ನು ವಿಸ್ತರಿಸುವ ತನ್ನ ಮೊದಲ ಉಪಕ್ರಮ ಪ್ರಾರಂಭಿಸಿದೆ

ನವದೆಹಲಿ, ಆಗಸ್ಟ್ 18, 2026: ಅಪೋಲೋ ಹಾಸ್ಪಿಟಲ್ಸ್ ಇಂದು ‘ಆಲ್ವೇಸ್ ಓಪನ್. ಆಲ್ವೇಸ್ ಹಿಯರ್(ಸದಾ ತೆರೆದಿರುತ್ತೇವೆ, ಸದಾ ಇಲ್ಲಿರುತ್ತೇವೆ’ ಎಂಬ ವಿನೂತನ ಉಪಕ್ರಮವನ್ನು ಪ್ರಾರಂಭಿಸಿದೆ. ಇದು ಭಾನುವಾರ ಸೇರಿದಂತೆ ವಾರದ ಎಲ್ಲಾ ಏಳು ದಿನಗಳಲ್ಲೂ ದಿನನಿತ್ಯದ ಮತ್ತು ಯೋಜಿತ ಆರೋಗ್ಯ ಸೇವೆಗಳನ್ನು ಲಭ್ಯವಾಗುವಂತೆ ಮಾಡುತ್ತದೆ.
ಅಪೋಲೋ ಸಂಸ್ಥೆಯ ತುರ್ತು ಚಿಕಿತ್ಸೆ, ಮತ್ತು ರೋಗಿಗಳ ದಾಖಲಾತಿ ಸೇವೆಗಳು ಯಾವಾಗಲೂ 24×7 ಲಭ್ಯವಿರುತ್ತವೆ. ಈ ಹೊಸ ಉಪಕ್ರಮವು ಹೊರರೋಗಿ ಸಮಾಲೋಚನೆಗಳು, ರೋಗನಿರ್ಣಯ ಪರೀಕ್ಷೆಗಳು, ರೋಗತಡೆಯ ಆರೋಗ್ಯ ತಪಾಸಣೆಗಳು, ಫಾಲೋ-ಅಪ್ ಸಲಹೆಗಳು ಮತ್ತು ನಿಗದಿತ ಚಿಕಿತ್ಸೆಗಳನ್ನು ಭಾನುವಾರವೂ ವಿಸ್ತರಿಸುತ್ತದೆ. ಇದು ರೋಗಿಗಳು ಮತ್ತು ಅವರ ಕುಟುಂಬದವರು ಕೆಲಸದ ದಿನಗಳಿಗಾಗಿ ಕಾಯದೆ ಸಮಯಕ್ಕೆ ಸರಿಯಾಗಿ ಆರೈಕೆ ಪಡೆಯಲು ನೆರವಾಗುತ್ತದೆ.
ಅನೇಕ ಉದ್ಯೋಗನಿರತ ಭಾರತೀಯರಿಗೆ ಕಾಲಕ್ಕೆ ತಕ್ಕಂತೆ ಆರೋಗ್ಯಸೇವೆ ಪಡೆಯಲು ಸಮಯವೇ ದೊಡ್ಡ ತಡೆಯಾಗಿದೆ. ಬಿಡುವಿಲ್ಲದ ಕೆಲಸದ ವೇಳಾಪಟ್ಟಿಗಳು, ಕೌಟುಂಬಿಕ ಜವಾಬ್ದಾರಿಗಳು ಮತ್ತು ಕೆಲಸದ ದಿನಗಳ ಬದ್ಧತೆಗಳು ಜನರನ್ನು ವೈದ್ಯಕೀಯ ಸಮಾಲೋಚನೆಗಳು, ಪರೀಕ್ಷೆಗಳು ಮತ್ತು ಆರೋಗ್ಯ ತಪಾಸಣೆಗಳನ್ನು ಮುಂದೂಡುವಂತೆ ಮಾಡುತ್ತವೆ. ಅಪೋಲೋ ಸಂಸ್ಥೆಯ ‘ಹೆಲ್ತ್ ಆಫ್ ದಿ ನೇಷನ್ 2026’ ವರದಿಯು ಸ್ಥೂಲಕಾಯತೆ, ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಚಯಾಪಚಯ ಅಸ್ವಸ್ಥತೆಗಳಂತಹ ಜೀವನಶೈಲಿ ಕಾಯಿಲೆಗಳ ಹೆಚ್ಚುತ್ತಿರುವ ಹೊರೆಯನ್ನು ತೋರಿಸಿದೆ. ಇವು ತಮ್ಮ ಅತ್ಯಂತ ಉತ್ಪಾದನಾ ವರ್ಷಗಳಲ್ಲಿರುವ ಭಾರತೀಯರ ಮೇಲೆ ಹೆಚ್ಚಾಗಿ ಪರಿಣಾಮ ಬೀರುತ್ತಿವೆ. ಈ ವರದಿಯು ಮತ್ತಷ್ಟು ಸ್ಪಷ್ಟಪಡಿಸುವುದೇನೆಂದರೆ, ಭಾರತದ ಅಪೋಲೋ ಸಂಸ್ಥೆಯ ಜಾಲದಾದ್ಯಂತ 2.5 ಮಿಲಿಯನ್ಗಿಂತಲೂ ಹೆಚ್ಚು ವ್ಯಕ್ತಿಗಳಲ್ಲಿ ನಡೆಸಿದ ಪರೀಕ್ಷೆಗಳ ಅನ್ವಯ ಒಂದು ಮೌನ ಸಾಂಕ್ರಾಮಿಕ ಹೆಚ್ಚಾಗುತ್ತಿದೆ. ಇಲ್ಲಿ ಲಕ್ಷಾಂತರ ಜನರು ಯಾವುದೇ ಬಾಹ್ಯ ರೋಗಲಕ್ಷಣಗಳನ್ನು ತೋರಿಸದಿದ್ದರೂ, ರೋಗ ಪತ್ತೆಯಾಗದೆ ದೀರ್ಘಕಾಲದ ಕಾಯಿಲೆಗಳೊಂದಿಗೆ ಬದುಕುತ್ತಿದ್ದಾರೆ. ಯಾವುದೇ ಲಕ್ಷಣಗಳಿಲ್ಲದಿದ್ದರೂ ಸುಮಾರು ಶೇ.26 ರಷ್ಟು ಜನರು ಅಧಿಕ ರಕ್ತದೊತ್ತಡ ಮತ್ತು ಶೇ.23 ರಷ್ಟು ಜನರು ಮಧುಮೇಹವನ್ನು ಹೊಂದಿರುವುದು ಕಂಡುಬಂದಿದೆ. ಇದು ರೋಗಲಕ್ಷಣಗಳು ಕಾಣಿಸಿಕೊಂಡಾಗಷ್ಟೇ ಚಿಕಿತ್ಸೆ ಪಡೆಯುವ ಆರೋಗ್ಯ ರಕ್ಷಣಾ ಮಾದರಿಯು ಇನ್ನು ಮುಂದೆ ಸೂಕ್ತವಲ್ಲ ಎನ್ನುವುದನ್ನು ದೃಢೀಕರಿಸುತ್ತದೆ.
‘ಆಲ್ವೇಸ್ ಓಪನ್. ಆಲ್ವೇಸ್ ಹಿಯರ್.’ ಉಪಕ್ರಮವು, ವಿಳಂಬವು ಅಪಾಯವಾಗಿ ಮಾರ್ಪಡುವ ಮೊದಲು ರೋಗಿಗಳಿಗೆ ತಮ್ಮ ಆರೋಗ್ಯದ ಕಡೆಗೆ ಗಮನಹರಿಸಲು ಇನ್ನೂ ಒಂದು ದಿನವನ್ನು ನೀಡುವ ಮೂಲಕ ಈ ಕೊರತೆಯನ್ನು ನಿವಾರಿಸುತ್ತದೆ.
ಅಪೋಲೋ ಹಾಸ್ಪಿಟಲ್ಸ್ ಗ್ರೂಪ್ ನ ಸಂಸ್ಥಾಪಕ ಮತ್ತು ಅಧ್ಯಕ್ಷ ಡಾ. ಪ್ರತಾಪ್ ಸಿ. ರೆಡ್ಡಿ ಅವರು, “ನಾಲ್ಕು ದಶಕಗಳಿಗೂ ಹೆಚ್ಚು ಕಾಲದಿಂದ ಅಪೋಲೋ ಸಂಸ್ಥೆಯು ಆರೋಗ್ಯ ಸೇವೆ ಎಂದರೆ ಕೇವಲ ಕಾಯಿಲೆಗಳಿಗೆ ಚಿಕಿತ್ಸೆ ನೀಡುವುದಷ್ಟೇ ಅಲ್ಲ, ಆರೋಗ್ಯವನ್ನು ಕಾಪಾಡುವುದು ಮತ್ತು ರೋಗಗಳನ್ನು ತಡೆಗಟ್ಟುವುದು ಎಂದು ನಂಬಿದೆ. ‘ಆಲ್ವೇಸ್ ಓಪನ್. ಆಲ್ವೇಸ್ ಹಿಯರ್.’ ಎಂಬುದು ಆ ಭರವಸೆಯ ಮುಂದುವರಿದ ಭಾಗವಾಗಿದೆ. ನಾವು ತುರ್ತು ಮತ್ತು ಕ್ರಿಟಿಕಲ್ ಕೇರ್ ಸೇವೆಗಳಿಗೆ ಯಾವಾಗಲೂ ಲಭ್ಯವಿದ್ದೇವೆ. ಈಗ ನಾವು ಅದೇ ಬದ್ಧತೆಯನ್ನು ವಾರದ ಎಲ್ಲಾ ಏಳು ದಿನಗಳಲ್ಲೂ ದಿನನಿತ್ಯದ ಮತ್ತು ರೋಗತಡೆಯ ಆರೈಕೆಗೆ ವಿಸ್ತರಿಸುತ್ತಿದ್ದೇವೆ. ಇದು ಪ್ರತಿಯೊಬ್ಬ ಭಾರತೀಯನಿಗೂ ನಾವು ನೀಡುವ ಸೇವೆಯ ಮುದ್ರೆಯಾಗಿದ” ಎಂದರು.
ಅವರು, “ಈ ಉಪಕ್ರಮವು ಅಪೋಲೋದ ಪ್ರತಿಯೊಬ್ಬ ವೈದ್ಯರು, ಶುಶ್ರೂಷಕರು, ತಂತ್ರಜ್ಞರು ಮತ್ತು ಆರೋಗ್ಯ ಕಾರ್ಯಕರ್ತರಿಗೆ ಹಾಗೂ ಅವರ ಕುಟುಂಬಗಳಿಗೆ ಸಲ್ಲಿಸುವ ಗೌರವವೂ ಆಗಿದೆ. ಆರೋಗ್ಯ ರಕ್ಷಣೆಯು ಸ್ವಾರ್ಥಕ್ಕಿಂತ ಸೇವೆಯನ್ನು ಎತ್ತಿ ಹಿಡಿಯುವ ವೃತ್ತಿಯಾಗಿದೆ. ಅವರ ಬದ್ಧತೆಯೇ ಭಾರತದಾದ್ಯಂತ ಇರುವ ರೋಗಿಗಳು ಮತ್ತು ಕುಟುಂಬಗಳಿಗಾಗಿ ಈ ಹೆಜ್ಜೆಯನ್ನು ಇಡಲು ನಮಗೆ ಸಾಧ್ಯವಾಗಿಸಿದೆ.
ಸಮಯೋಚಿತವಾಗಿ ಮಾಡುವ ಒಂದು ಸಮಾಲೋಚನೆಯು ರೋಗವನ್ನು ಆರಂಭದಲ್ಲೇ ಪತ್ತೆಹಚ್ಚಲು ಅಥವಾ ದೊಡ್ಡ ಅಪಾಯವನ್ನು ತಡೆಯಲು ನೆರವಾದರೆ, ನಾವು ಒಂದು ಜೀವವನ್ನು ಬದಲಾಯಿಸಿದಂತೆ. ಕಷ್ಟ ಬರುವ ಮುನ್ನವೇ ಆರೋಗ್ಯ ರಕ್ಷಣೆಯನ್ನು ಆಯ್ಕೆ ಮಾಡಿಕೊಳ್ಳಲು ನಾವು ಕೋಟ್ಯಂತರ ಜನರಿಗೆ ಪ್ರೇರಣೆ ನೀಡಿದರೆ, ನಾವು ದೇಶದ ಭವಿಷ್ಯವನ್ನೇ ಬದಲಾಯಿಸಿದಂತೆ” ಎನ್ನುತ್ತಾರೆ.
ಹಲವು ಪ್ರಥಮಗಳ ಪರಂಪರೆ, ಈಗ ಸಮಯದ ಅಡೆತಡೆ ನಿವಾರಿಸಿದೆ
ಹಾಸ್ಪಿಟಲ್ಸ್ ಯಾವಾಗಲೂ ಆಸ್ಪತ್ರೆಗಳ ಕ್ಷೇತ್ರದಲ್ಲಿ
ಆರೋಗ್ಯ ಸೇವೆಯ ಬದಲಾವಣೆಯು ಸಮಾಜವು ಸಹಜವೆಂದು ಒಪ್ಪಿಕೊಂಡಿರುವುದನ್ನು ಪ್ರಶ್ನಿಸುವುದರಿಂದಲೇ ಪ್ರಾರಂಭವಾಗುತ್ತದೆ ಎಂದು ಅಪೋಲೋ ನಂಬಿಕೊಂಡು ಬಂದಿದೆ. ಜೀವ ಉಳಿಸುವ ಸ್ಥಳವನ್ನು ‘ಕ್ಯಾಶುವಲ್ಟಿ’ ಎಂದು ಏಕೆ ಕರೆಯಬೇಕು ಎಂದು ಡಾ. ರೆಡ್ಡಿಯವರು ಪ್ರಶ್ನಿಸಿದರು ಮತ್ತು ಎಲ್ಲಾ ಆಸ್ಪತ್ರೆಗಳಲ್ಲೂ ಅದನ್ನು ‘ಎಮರ್ಜೆನ್ಸಿ’ ಎಂದು ಮರುನಾಮಕರಣ ಮಾಡಲು ನೆರವಾದರು. ವಿಮಾನಗಳಲ್ಲಿ ಧೂಮಪಾನ ಮಾಡುವುದು ಸಾಮಾನ್ಯವೆಂದಿದ್ದ ಕಾಲದಲ್ಲಿ, ಅದನ್ನು ಕೊನೆಗೊಳಿಸಲು ಅವರು ಧ್ವನಿಯೆತ್ತಿದರು ಮತ್ತು ಇಂದು ನಾವೆಲ್ಲರೂ ಗುರುತಿಸುವ ಫಾರ್ಮಸಿಗಳ ಹಸಿರು ಬಣ್ಣದ ಗುರುತನ್ನು ನೀಡಲು ಶ್ರಮಿಸಿದರು.
ಇವು ಜನರ ನಡವಳಿಕೆಯನ್ನು ಬದಲಾಯಿಸಿದ ಸರಳ ಬದಲಾವಣೆಗಳಾಗಿದ್ದವು ಮತ್ತು ಅವರ ಇಡೀ ಪ್ರಯಾಣದ ಮುಖ್ಯ ಹೆಗ್ಗುರುತಾಗಿವೆ: ಇತರರು ಸಹಜವೆಂದು ಭಾವಿಸುವುದನ್ನು ಸೂಕ್ಷ್ಮವಾಗಿ ಗಮನಿಸುವುದು, ಅದನ್ನು ಏಕೆ ಬದಲಾಯಿಸಲು ಸಾಧ್ಯವಿಲ್ಲ ಎಂದು ಪ್ರಶ್ನಿಸುವುದು ಮತ್ತು ನಂತರ ಲಕ್ಷಾಂತರ ಜನರಿಗಾಗಿ ಅದನ್ನು ಬದಲಾಯಿಸುವುದು.
1983 ರಿಂದ ಅಪೋಲೋ ಭಾರತೀಯ ಆರೋಗ್ಯ ಸೇವಾ ಕ್ಷೇತ್ರದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದೆ: ಭಾರತದ ಮಣ್ಣಿನಲ್ಲಿ ಈ ಮೊದಲು ಎಂದೂ ನಡೆದಿರದ ಹೃದಯ ಶಸ್ತ್ರಚಿಕಿತ್ಸೆಗಳು; ದಕ್ಷಿಣ ಏಷ್ಯಾದ ಮೊದಲ ಪ್ರೋಟಾನ್ ಕ್ಯಾನ್ಸರ್ ಸೆಂಟರ್; 3 ಕೋಟಿಗೂ ಹೆಚ್ಚು ಜನರನ್ನು ತಲುಪಿರುವ ‘ಮಾಸ್ಟರ್ ಹೆಲ್ತ್ ಚೆಕ್’ ಮೂಲಕ ಚಾಲನೆ ನೀಡಿದ ರೋಗತಡೆಯ ಆರೈಕೆ; ಮತ್ತು ವಿಶ್ವದ ಅತ್ಯಂತ ಬ್ಯುಸಿಯಾದ ಘನ-ಅಂಗಾಂಗ ಕಸಿ (ಸಾಲಿಡ್-ಆರ್ಗನ್ ಟ್ರಾನ್ಸ್ಪ್ಲಾಂಟ್) ಕಾರ್ಯಕ್ರಮಗಳಲ್ಲಿ ಒಂದಾಗಿದೆ. ಅಪೋಲೋ ಪ್ರೋಹೆಲ್ತ್ ಎಂಬುದು ಮೊದಲ ಎಐ-ಸನ್ನದ್ಧ ಅಪಾಯದ ಮುನ್ಸೂಚನೆ ಮತ್ತು ವಿಶ್ಲೇಷಣಾ ವ್ಯವಸ್ಥೆಯಾಗಿದ್ದು, ಇದು ವ್ಯಕ್ತಿಗಳು ಆರೋಗ್ಯ ಅಪಾಯಗಳನ್ನು ಮೊದಲೇ ಗುರುತಿಸಲು ಮತ್ತು ಸಮಸ್ಯೆ ಉಲ್ಬಣಗೊಳ್ಳುವ ಮೊದಲು ಸೂಕ್ತ ಕ್ರಮ ತೆಗೆದುಕೊಳ್ಳಲು ಸಹಾಯ ಮಾಡುತ್ತದೆ. ಇಂದು 150 ಕ್ಕೂ ಹೆಚ್ಚು ದೇಶಗಳ ರೋಗಿಗಳು ಅಪೋಲೋದ ಸೇವೆ ಪಡೆಯುತ್ತಿದ್ದಾರೆ.
‘ಆಲ್ವೇಸ್ ಓಪನ್. ಆಲ್ವೇಸ್ ಹಿಯರ್.’ ಉಪಕ್ರಮದ ಮೂಲಕ, ಅಪೋಲೋ ಮತ್ತೊಂದು ಪ್ರಥಮ ಸಾಧನೆಯನ್ನು ತನ್ನದಾಗಿಸಿಕೊಂಡಿದೆ: ದಿನನಿತ್ಯದ ಆರೋಗ್ಯ ರಕ್ಷಣೆಯಲ್ಲಿ ಸಮಯದ ಅಡಚಣೆಯನ್ನು ನಿವಾರಿಸುವುದು.
ಅಪೋಲೋ ಹಾಸ್ಪಿಟಲ್ಸ್ನ ಎಕ್ಸಿಕ್ಯೂಟಿವ್ ಚೇರ್ ಪರ್ಸನ್ ಡಾ. ಪ್ರೀತಾ ರೆಡ್ಡಿ, “ಜನರು ತಮ್ಮ ಜೀವನದ ಶೈಲಿಗೆ ಹಾಗೂ ಸಮಯಕ್ಕೆ ಸೂಕ್ತವಾಗಿ ಹೊಂದುವಂತೆ ವೈದ್ಯಕೀಯ ಆರೈಕೆಯನ್ನು ಪಡೆಯಲು ಸಾಧ್ಯವಾಗಬೇಕು. ಉದ್ಯೋಗಿಗಳು, ಆರೈಕೆದಾರರು ಮತ್ತು ಹಲವು ಜವಾಬ್ದಾರಿಗಳನ್ನು ಸರಿದೂಗಿಸುವ ಕುಟುಂಬಗಳಿಗೆ—ವಿಶೇಷವಾಗಿ ಭಾನುವಾರದಂದು ವೈದ್ಯರನ್ನು ಸಂಪರ್ಕಿಸಲು, ಆರೋಗ್ಯ ತಪಾಸಣೆ ಪೂರ್ಣಗೊಳಿಸಲು ಅಥವಾ ತಡೆರಹಿತವಾಗಿ ಫಾಲೋ-ಅಪ್ ಆರೈಕೆಯನ್ನು ಮುಂದುವರಿಸಲು ಅವಕಾಶ ನೀಡುವುದು ಅರ್ಥಪೂರ್ಣ ಬದಲಾವಣೆಯನ್ನು ತರಬಲ್ಲದು. ‘ಆಲ್ವೇಸ್ ಓಪನ್. ಆಲ್ವೇಸ್ ಹಿಯರ್.’ (ಯಾವಾಗಲೂ ತೆರೆದಿರುತ್ತದೆ. ಯಾವಾಗಲೂ ಇಲ್ಲಿದೆ.) ಎಂಬುದು ಜನರು ಅಪೋಲೋದಿಂದ ನಿರೀಕ್ಷಿಸುವ ವಿಶ್ವಾಸಾರ್ಹ ಆರೈಕೆಯು ವಾರದ ಪ್ರತಿದಿನವೂ, ಅವರಿಗೆ ಅಗತ್ಯವಿರುವಾಗಲೆಲ್ಲಾ ಲಭ್ಯವಿರುವಂತೆ ಮಾಡುವ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ” ಎಂದರು.
ರೋಗಿಗಳಿಗೆ ಏನು ಬದಲಾವಣೆಯಾಗಲಿದೆ?
ಆಸ್ಪತ್ರೆಗಳ ನಿರ್ದಿಷ್ಟ ವೇಳಾಪಟ್ಟಿಗಳು ಮತ್ತು ಸೇವೆಗಳ ಲಭ್ಯತೆಗೆ ಒಳಪಟ್ಟು, ರೋಗಿಗಳು ಭಾನುವಾರದಂದೂ ಸಹ ತಜ್ಞ ವೈದ್ಯರ ಸಮಾಲೋಚನೆಗಳು, ರೋಗತಡೆಯ ಆರೋಗ್ಯ ತಪಾಸಣೆಗಳು, ರೋಗನಿರ್ಣಯ ಪರೀಕ್ಷೆಗಳು, ಫಾಲೋ-ಅಪ್ ಸಮಾಲೋಚನೆಗಳು ಮತ್ತು ನಿಗದಿತ ಚಿಕಿತ್ಸಾ ಪ್ರಕ್ರಿಯೆಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಇದರರ್ಥ ಉದ್ಯೋಗಿಯೊಬ್ಬರು ಕೆಲಸದ ದಿನಗಳಲ್ಲಿ ರಜೆ ತೆಗೆದುಕೊಳ್ಳದೆ ಆರೋಗ್ಯ ತಪಾಸಣೆ ಪೂರ್ಣಗೊಳಿಸಬಹುದು, ಕುಟುಂಬದವರು ವಯಸ್ಸಾದ ಪೋಷಕರನ್ನು ಯೋಜಿತ ರೋಗನಿರ್ಣಯ ಪರೀಕ್ಷೆಗೆ ಕರೆದುಕೊಂಡು ಬರಬಹುದು ಮತ್ತು ಫಾಲೋ-ಅಪ್ ಸಮಾಲೋಚನೆಗಾಗಿ ಕಾಯುತ್ತಿರುವ ರೋಗಿಯು ಸೋಮವಾರದವರೆಗೆ ಕಾಯಬೇಕಾಗಿಲ್ಲ.
ಭಾನುವಾರದ ಸೇವೆಗಳನ್ನು ಹೆಚ್ಚು ವ್ಯವಸ್ಥಿತವಾಗಿ ಮತ್ತು ರೋಗಿಗಳಿಗೆ ಅನುಕೂಲಕರವಾಗಿ ಮಾಡಲು ಈ ಉಪಕ್ರಮವು ಅಪೋಲೋದ ಪ್ರಸ್ತುತ ಇರುವ ಕ್ಲಿನಿಕಲ್ ಮೂಲಸೌಕರ್ಯ, ವೈದ್ಯರು, ರೋಗನಿರ್ಣಯ ಕೇಂದ್ರಗಳು, ಶಸ್ತ್ರಚಿಕಿತ್ಸಾ ಕೊಠಡಿಗಳು ಮತ್ತು ಸಮನ್ವಯದ ಆರೈಕೆ ತಂಡಗಳನ್ನು ಬಳಸಿಕೊಳ್ಳುತ್ತದೆ.
ಅಪೋಲೋ ಸಂಸ್ಥೆಗೆ ಇದು ಗುಣಮಟ್ಟದ ಆರೋಗ್ಯ ರಕ್ಷಣೆಯನ್ನು ಹೆಚ್ಚು ಸಮಯೋಚಿತ, ಸುಲಭ ಲಭ್ಯ ಮತ್ತು ರೋಗಿ-ಕೇಂದ್ರಿತವಾಗಿಸುವ ತನ್ನ ದೀರ್ಘಕಾಲದ ಬದ್ಧತೆಯ ಸಹಜ ವಿಸ್ತರಣೆಯಾಗಿದೆ.
About Apollo Hospitals Enterprise Ltd.
Apollo revolutionised healthcare when Dr. Prathap C. Reddy opened its first hospital in Chennai in 1983. Today, Apollo is the world’s largest integrated healthcare platform, with over 10,400 beds across 76 hospitals, 7,113+ pharmacies, 308 clinics, 2,457 diagnostic centres and 800+ telemedicine centres. It is one of the world’s leading cardiac centres, having performed over 300,000 angioplasties and 200,000 cardiac surgeries. Apollo continues to invest in research and innovation to bring advanced technologies, equipment and treatment options closer to patients across India and the world.
For further information, please contact:
[Media contact details]









