--Ads--

ವೈದ್ಯರ ದಿನಾಚರಣೆ, ಸಾಧಕ ವೈದ್ಯರುಗಳಿಗೆ ಸನ್ಮಾನ-ವಿಸಿಎನ್ ಡಾಕ್ಟರ್ಸ್ ಅಸೋಸಿಯೇಷನ್

On: August 23, 2026 6:01 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ವೈದ್ಯರ ದಿನಾಚರಣೆ, ಸಾಧಕ ವೈದ್ಯರುಗಳಿಗೆ ಸನ್ಮಾನ-ವಿಸಿಎನ್ ಡಾಕ್ಟರ್ಸ್ ಅಸೋಸಿಯೇಷನ್

ಬೆಂಗಳೂರು: ಮಲ್ಲತ್ತಹಳ್ಳಿ, ನಾಗರಭಾವಿಯಲ್ಲಿ ಕೊಡಗು ಗೌಡ ಸಮಾಜ ಸಭಾಂಗಣದಲ್ಲಿ ವಿಸಿಎನ್ ಡಾಕ್ಟರ್ಸ್ ವೆಲ್‌ಫೇರ್ ಅಸೋಸಿಯೇಷನ್ ​​ವತಿಯಿಂದ
“ವೈದ್ಯರ ದಿನಾಚರಣೆ” (Doctor’s Day Celebration) ಮತ್ತು ಸಾಧಕ ವೈದ್ಯರಿಗೆ ಡಾ.ಎಂ.ಸುನಿಲ್ ಬಾಬು ಪ್ರಶಸ್ತಿ ಪ್ರಧಾನ ಕಾರ್ಯಕ್ರಮ. ನಡೆಯಿತು.

ಖ್ಯಾತ ವಿಜ್ಞಾನಿ ಪ್ರೊ.ಡಾ||ಎಂ.ಕೆ.ಸುದರ್ಶನ್, ಆರ್.ವಿ.ಡೆಂಟಲ್ ಕಾಲೇಜು ಮಾಜಿ ಡೀನ್ ಡಾ||ನಾಗೇಶ್, ವಿ.ಸಿ.ಎನ್.ಡಾಕ್ಟರ್ಸ್ ವೆಲ್‌ಫೇರ್ ಅಸೋಸಿಯೇಷನ್ ಅಧ್ಯಕ್ಷ ಡಾ||ಭೋಜಮ್ಮ
ನಿಕಟಪೂರ್ವ ಬಿಬಿಎಂಪಿ ಸದಸ್ಯ ಡಾ|| ರಾಜು ಎಸ್.ರವರು ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು.

ಖ್ಯಾತ ವಿಜ್ಞಾನಿ ಡಾ||ಸುದರ್ಶನ್ ನವರು ಮತಾನಾಡಿ ರೋಗಿಗಳ ಸೇವೆಯೆ ಮೂಲ ಉದ್ದೇಶ ಅದರ ಜೊತೆಯಲ್ಲಿ ವೈದ್ಯರುಗಳ ಸುರಕ್ಷತೆ ಮುಖ್ಯ. ವೈದ್ಯಕೀಯ ಸೇವೆ ಜೊತೆಯಲ್ಲಿ ಸಮಾಜ ಸೇವೆಯಲ್ಲಿಯೂ ನಿರತರಾಗಿದ್ದಾರೆ ವಿಸಿಎನ್ ಅಸೋಸಿಯೇಷನ್ ರವರು. ವೈದ್ಯರು ಜನರ ಆರೋಗ್ಯ ರಕ್ಷಣೆಗೆ ಮುಖ್ಯ ಆದ್ಯತೆ ನೀಡಬೇಕು. ಮೂರು ವರ್ಷ ಕೊವಿಡ್ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಆರೋಗ್ಯ ವಿಭಾಗದಲ್ಲಿ ವೈದ್ಯಕೀಯ ಸಲಹಾ ಸಮಿತಿಯಲ್ಲಿ ಸೇವೆ ಸಲ್ಲಿಸಿದೆ.
ವೈದ್ಯವೃತ್ತಿಯಲ್ಲಿ ಹಲವಾರು ನೋವು, ಕಷ್ಟ ಎದುರಿಸಬೇಕಾಗುತ್ತದೆ. ತಾಳ್ಮೆ, ಧೈರ್ಯದಿಂದ ವೈದ್ಯ ವೃತ್ತಿಯಲ್ಲಿ ತೊಡಗಿ ಎಂದು ಹೇಳಿದರು.

ಡಾ||ನಾಗೇಶ್ ರವರು ಮಾತನಾಡಿ ದೇವರ ನಂತರ ವೈದ್ಯರುಗಳನ್ನ ದೇವರ ಸಮಾನವಾಗಿ ಜನರು ನೋಡುತ್ತಾರೆ. ಕೊವಿಡ್ ಸಂದರ್ಭದಲ್ಲಿ ವೈದ್ಯರು, ಸಿಬ್ಬಂದಿಗಳು ಪ್ರಾಣದ ಹಂಗು ತೊರೆದು ಜನರ ಜೀವ ರಕ್ಷಣೆಗಾಗಿ ಹೋರಾಡಿದರು.

ಆರೋಗ್ಯ ಕ್ಷೇತ್ರದಲ್ಲಿ ದೇಶ ಮುಂದುವರೆದಿದೆ. ಶೇಕಡ 80ರಷ್ಟು ಜನರು ಖಾಸಗಿ ಆಸ್ಪತ್ರೆಗಳಿಗೆ ಹೋಗುತ್ತಾರೆ.
ಎಐ ತಂತ್ರಜ್ಞಾನ ಬಂದಿದೆ ವೈದ್ಯರುಗಳು ಬಳಸಿಕೊಳ್ಳಬೇಕು ಎಂದು ಹೇಳಿದರು.

ಡಾ||ಎಸ್.ರಾಜುರವರು ಮಾತನಾಡಿ ವಿಸಿಎನ್ ಡಾಕ್ಟರ್ಸ್ ಅಸೋಸಿಯೇಷನ್ ಸಂಸ್ಥೆಯಲ್ಲಿ 400ಕ್ಕೂ ಹೆಚ್ಚು ವೈದ್ಯರುಗಳು ಸದಸ್ಯರಿದ್ದಾರೆ. ಹಿರಿಯ ವೈದ್ಯರುಗಳು ಕಿರಿಯ ವೈದ್ಯರುಗಳಿಗೆ ಸಲಹೆ, ಮಾರ್ಗದರ್ಶನ ವೈದ್ಯಕೀಯ ಕ್ಷೇತ್ರದ ಹೊಸ ಅನುಭವಗಳ ಹಂಚಿಕೆ ಮಾಡುವ ಸಂಸ್ಥೆಯಾಗಿದೆ.

ವೈದ್ಯರು ಮತ್ತು ರೋಗಿಗಳ ನಡುವೆ ಅಂತರ ಕಡಿಮೆಯಾಗಿದೆ. ವೈದ್ಯರುಗಳ ಮೇಲೆ ಜನರ ನಂಬಿಕೆ ಇಲ್ಲದಂತೆ ಆಗಿದೆ ಇದೆಲ್ಲ ಹೋಗಲಾಡಿಸಲು ವಿಸಿಎನ್ ಡಾಕ್ಟರ್ಸ್ ಅಸೋಸಿಯೇಷನ್ ಶ್ರಮಿಸುತ್ತಿದೆ.ಕೆಲಸದ ಒತ್ತಡದ ನಡುವೆ ವೈದ್ಯರುಗಳು ಕುಟುಂಬದ ಕಡೆ ಗಮನಹರಿಸುತ್ತಿಲ್ಲ.

ವೈದ್ಯ ವೃತ್ತಿಯ ಜೊತೆಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ, ವೃದ್ದಶ್ರಾಮ, ಆನಾಥಶ್ರಮ ಸಹಾಯಹಸ್ತ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಪ್ರತಿ ತಿಂಗಳು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

ಅಧ್ಯಕ್ಷ ಡಾ||ಭೋಜಮ್ಮರವರು ಮಾತನಾಡಿ ಜನರ ಸೇವೆಗಾಗಿಯೆ ವಿಸಿಎನ್ ಡಾಕ್ಟರ್ಸ್ ಅಸೋಸಿಯೇಷನ್ ಪ್ರಾರಂಭಿಸಲಾಗಿದೆ. ಸಾಮಾಜಿಕ ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ. ವೈದ್ಯಕೀಯ ಕ್ಷೇತ್ರದ ಆಧುನಿಕ ತಂತ್ರಜ್ಞಾನದ ಮೂಲಕ ರೋಗಿಗಳ ಚಿಕಿತ್ಸೆ ನೀಡುವುದು ಮತ್ತು ವೈದ್ಯರುಗಳ ಜೊತೆಯಲ್ಲಿ ಸಮಾಲೋಚನೆ ಮಾಡಿ ಮೊಬೈಲ್ ಗೀಳು, ಮತ್ತು ಬರೆಸುವ ಪದಾರ್ಥ ಮಕ್ಕಳು ಅರಿವು ಮೂಡಿಸುವುದು. ಉಚಿತ ಆರೋಗ್ಯ ತಪಾಸಣೆ ಸರ್ಕಾರಿ ಶಾಲೆಗಳಲ್ಲಿ ಆಯೋಜಿಸಲಾಗುತ್ತಿದೆ ಎಂದು ಹೇಳಿದರು.

ಸಾಧಕ ವೈದ್ಯರುಗಳಾದ ಡಾ||ಎಸ್.ರಾಜು, ಡಾ||ಹರೀಶ್, ಡಾ||ಜಲಜಾ, ಡಾ.ಜೀವೆಂದರ್ ಬಸ್ತಿ , ಡಾ.ಕೇಶವಮೂರ್ತಿ, ಡಾ.ಶ್ರೀನಿವಾಸ್ ರವರು ಪ್ರಶಸ್ತಿ ಪ್ರಧಾನ ಮಾಡಲಾಯಿತು

ಡಾ||ಚಂದ್ರಶೇಖರ್, ಡಾ||.ರಮೇಶ್ ಬಿ.ಟಿ, ಡಾ||ಚಂದ್ರಕಲಾ, ಡಾ||ಶಂಕರಲಿಂಗಯ್ಯ, ಡಾ||ಮಂಜುನಾಥ್ ಕೋಡಿಹಳ್ಳಿ, ಡಾ||ಶ್ರೇಯಸ್ ರವರು ಮತ್ತು ವಿಸಿನ್ ಡಾಕ್ಟರ್ ವೇಲ್ ಫೇರ್ ಅಸೋಸಿಯೇಷನ್ ಸದಸ್ಯರುಗಳು ಭಾಗವಹಿಸಿದ್ದರು.

WhatsApp

Join Now

Telegram

Join Now

Instagram

Join Now