--Ads--

ಶಶಿಕುಮಾರ್ ವಿರುದ್ಧ ಸುಳ್ಳು ಆರೋಪ.ತೇಜೋವಧೆಗೆ ಯತ್ನ: ಯಳಚಹಳ್ಳಿ ಗ್ರಾಮಸ್ಥರ ಆರೋಪ

On: August 31, 2026 5:43 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ಶಶಿಕುಮಾರ್ ವಿರುದ್ಧ ಸುಳ್ಳು ಆರೋಪ,ತೇಜೋವಧೆಗೆ ಯತ್ನ: ಯಳಚಹಳ್ಳಿ ಗ್ರಾಮಸ್ಥರ ಆರೋಪ

ಹೊಸಕೋಟೆ – ಸ್ವಂತ ದುಡಿಮೆಯಿಂದ ಜೀವನ ಕಟ್ಟಿಕೊಂಡು, ತಮ್ಮ ಗ್ರಾಮದ ಬಡ ಹಾಗೂ ಅಗತ್ಯವಿರುವ ಜನರಿಗೆ ನಿರಂತರವಾಗಿ ನೆರವು ನೀಡುತ್ತಿರುವ ಯಳಚಹಳ್ಳಿಯ ವೈ. ಶಶಿಕುಮಾರ್ ಅವರ ವಿರುದ್ಧ ಕೆಲವರು ಸುಳ್ಳು ಆರೋಪಗಳನ್ನು ಮಾಡುತ್ತಿದ್ದು, ಅವರ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಯಳಚಹಳ್ಳಿ ಗ್ರಾಮಸ್ಥರು ಆರೋಪಿಸಿದ್ದಾರೆ.

ನಂದಗುಡಿ ಹೋಬಳಿಯ ಯಳಚಹಳ್ಳಿ ಗ್ರಾಮದಲ್ಲಿ ಗ್ರಾಮಸ್ಥರು ಅಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಶಶಿಕುಮಾರ್ ಅವರು ತಮ್ಮ ದುಡಿಮೆಯ ಹಣದಿಂದ ಗ್ರಾಮದ ಹಲವು ಬಡ ಕುಟುಂಬಗಳಿಗೆ ವೈದ್ಯಕೀಯ ನೆರವು ನೀಡಿದ್ದು, ಆರ್ಥಿಕವಾಗಿ ಹಿಂದುಳಿದ ಮಕ್ಕಳ ಶೈಕ್ಷಣಿಕ ವೆಚ್ಚಕ್ಕೂ ನೆರವಿನ ಹಸ್ತ ಚಾಚಿದ್ದಾರೆ. ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಅಗತ್ಯವಿರುವವರಿಗೆ ಸಾಧ್ಯವಾದಷ್ಟು ಸಹಾಯ ಮಾಡುತ್ತಾ ಬಂದಿದ್ದಾರೆ ಆದರೆ ಶಶಿಕುಮಾರ್ ರವರ ಕಾರು ಚಾಲಕ ಹಾಗು ಅವರ ಜೊತೆಯಲ್ಲೇ ಇದ್ದು ಅವರಿಗೆ ದ್ರೋಹ ಬಗೆದು ಈಗ ಸುಳ್ಳು ಆರಫಗಳನ್ನು ಮಾಡುತ್ತಿರುವುದು ಸರಿಯಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಶಶಿಕುಮಾರ್ ಅವರ ತಂದೆ-ತಾಯಿ ಪ್ರಾಮಾಣಿಕತೆ ಹಾಗೂ ಉತ್ತಮ ಮೌಲ್ಯಗಳೊಂದಿಗೆ ಜೀವನ ನಡೆಸಿ, ತಮ್ಮ ಮಗನನ್ನು ಸುಸಂಸ್ಕೃತವಾಗಿ ಬೆಳೆಸಿದ್ದಾರೆ. ಕುಟುಂಬದಿAದ ಪಡೆದ ಉತ್ತಮ ಸಂಸ್ಕಾರ ಹಾಗೂ ಸ್ವಂತ ಪರಿಶ್ರಮದಿಂದ ಶಶಿಕುಮಾರ್ ಅವರು ಸಮಾಜದಲ್ಲಿ ತಮ್ಮದೇ ಆದ ಸ್ಥಾನವನ್ನು ರೂಪಿಸಿಕೊಂಡಿದ್ದಾರೆ , ಇತ್ತೀಚಿನ ದಿನಗಳಲ್ಲಿ ಶಶಿಕುಮಾರ್ ಅವರ ಬೆಳವಣಿಗೆಯನ್ನು ಸಹಿಸದ ಕೆಲವರು, ಹಿಂದೆ ಅವರೊಂದಿಗೆ ಆತ್ಮೀಯವಾಗಿ ಇದ್ದವರೇ ಇದೀಗ ಅವರ ವಿರುದ್ಧ ತಿರುಗಿ ಬಿದ್ದು ವಿವಿಧ ರೀತಿಯ ಆರೋಪಗಳನ್ನು ಮಾಡುತ್ತಿದ್ದಾರೆ. ಇದರಿಂದ ಅವರ ಸಾಮಾಜಿಕ ಗೌರವಕ್ಕೆ ಧಕ್ಕೆ ಉಂಟಾಗುತ್ತಿದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆರೋಪಗಳಿಗೆ ಆಧಾರವೇನು?
ಶಶಿಕುಮಾರ್ ಅವರ ವಿರುದ್ಧ ಮಾಡಲಾಗುತ್ತಿರುವ ಆರೋಪಗಳಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈಯಕ್ತಿಕ ದ್ವೇಷ ಅಥವಾ ಅಸೂಯೆಯಿಂದ ಆರೋಪಗಳನ್ನು ಮಾಡಲಾಗುತ್ತಿದೆಯೇ ಎಂಬುದನ್ನು ಸಂಬಂಧಪಟ್ಟವರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಯಾವುದೇ ವ್ಯಕ್ತಿಯ ವಿರುದ್ಧ ಆರೋಪ ಮಾಡುವ ಮೊದಲು ಅದಕ್ಕೆ ಸೂಕ್ತ ದಾಖಲೆ ಹಾಗೂ ಪುರಾವೆ ಇರಬೇಕು.

ಶಶಿಕುಮಾರ್ ಅವರು ತಮ್ಮ ಸಾಮಾಜಿಕ ಸೇವೆಯ ಮೂಲಕ ಗ್ರಾಮದ ಜನರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದು, ಅವರ ಪರವಾಗಿ ನಾವೆಲ್ಲರೂ ನಿಲ್ಲುತ್ತೇವೆ. ವೈಯಕ್ತಿಕ ವಿಚಾರಗಳನ್ನು ಮುಂದಿಟ್ಟುಕೊಂಡು ಸಾರ್ವಜನಿಕವಾಗಿ ಒಬ್ಬರ ತೇಜೋವಧೆ ಮಾಡುವುದು ಸರಿಯಲ್ಲ. ಸತ್ಯಾಸತ್ಯತೆ ಪರಿಶೀಲಿಸದೆ ಆರೋಪಗಳನ್ನು ಹರಡುವುದನ್ನು ನಿಲ್ಲಿಸಬೇಕು ಎಂದು ಗ್ರಾಮ ಪಂಚಾಯ್ತಿ ಮಾಜಿ ಸದಸ್ಯ ಯಳಚಹಳ್ಳಿ ನಾಗೇಶ್ ಆಗ್ರಹಿಸಿದ್ದಾರೆ.

WhatsApp

Join Now

Telegram

Join Now

Instagram

Join Now