--Ads--

ಶೇಷಾದ್ರಿಪುರಂ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ವಾರ್ಷಿಕ ವಿಶೇಷ ಸಂಚಿಕೆ **ಅಂಕುರ ANKURA** ಬಿಡುಗಡೆ 

On: August 31, 2026 4:32 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಶೇಷಾದ್ರಿಪುರಂ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ವಾರ್ಷಿಕ ವಿಶೇಷ ಸಂಚಿಕೆ **ಅಂಕುರ ANKURA** ಬಿಡುಗಡೆ 

ಬೆಂಗಳೂರು ನಗರದ ಶೇಷಾದ್ರಿಪುರಂ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ವಾರ್ಷಿಕ ವಿಶೇಷ ಸಂಚಿಕೆ **ಅಂಕುರ ANKURA** ವನ್ನು ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷರು, ಶಿಕ್ಷಣ ತಜ್ಞರಾದ ನಾಡೋಜ ಡಾ.ವೂಡೇ‌ ಪಿ . ಕೃಷ್ಣ ಅವರು ಬಿಡುಗಡೆ ಮಾಡಿದರು.

ಪ್ರಾಂಶುಪಾಲರಾದ ಪ್ರೊ.ಪ್ರಶಾಂತ್,ಆರ್, ಸಂಚಿಕೆಯ ಸಂಪಾದಕ ಮಂಡಳಿಯ ಸಂಚಾಲಕ ಡಾ.ಎಸ್.ರಾಮಲಿಂಗೇಶ್ವರ್ , ಸದಸ್ಯರಾದ ಬಿ.ವಿ.ರಾಧಿಕಾ, ಡಾ.ಮುರುಳಿ ಮೋಹನ್. ವಿ. ಅರ್ಚನಾ.ಟಿ.ಜೆ. ಇದ್ದರು.

ಬೆಂಗಳೂರು : ಬೆಂಗಳೂರಿನ ಶೇಷಾದ್ರಿಪುರಂ ಸ್ವತಂತ್ರ ಪದವಿ ಪೂರ್ವ ಕಾಲೇಜಿನ *ವಾರ್ಷಿಕವಿಶೇಷ ಸಂಚಿಕೆ ಅಂಕುರ* ವನ್ನು ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷರು, ಶಿಕ್ಷಣ ತಜ್ಞರಾದ ನಾಡೋಜ ಡಾ.ವೂಡೇ ಪಿ. ಕೃಷ್ಣ ಅವರು ಬಿಡುಗಡೆ ಮಾಡಿ ಪ್ರತಿಯೊಂದು ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಲ್ಲಿನ ಸುಪ್ತ ಪ್ರತಿಭೆಗಳನ್ನು ಗುರುತಿಸಿ ಅವರಿಗೊಂದು ವೇದಿಕೆ ನೀಡುವ ಪಠ್ಯೇತರ ಚಟುವಟಿಕೆಗಳು ಅವರ ಬದುಕಿನ ಅನೇಕ ತಿರುವುಗಳಿಗೆ ಮಾರ್ಗದರ್ಶನ ನೀಡಿದಂತಾಗುತ್ತದೆ ಎಂದರು. ಅಂಕುರ ಸಂಚಿಕೆಯಲ್ಲಿ ವಿದ್ಯಾರ್ಥಿಗಳ ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಕಾಲೇಜಿಗೆ, ಪೋಷಕರಿಗೆ ಕೀರ್ತಿ ತಂದವರನ್ನು ಈ ಸಂಚಿಕೆಯು ನಿಜವಾಗಿಯೂ ಒಂದು ದೊಡ್ಡ ವೇದಿಕೆ ಎಂದರು. ಸಂಚಿಕೆಯು ತುಂಬಾ ಸುಂದರವಾಗಿ ಮೂಡಿ ಬಂದಿದ್ದು ಶೇಷಾದ್ರಿಪುರಂ ಕಾಲೇಜಿನ ವಿದ್ಯಾರ್ಥಿಗಳು ರಾಜ್ಯ, ರಾಷ್ಟ್ರ‌ಮಟ್ಟದಲ್ಲಷ್ಟೇ ಅಲ್ಲ ಪ್ರಪಂಚದಾದ್ಯಂತ ಹರಡಿಕೊಂಡು ಉತ್ತಮ ಕೆಲಸಗಳನ್ನು ಪಡೆದು ಕಾಲೇಜಿನ ಕೀರ್ತಿ ತಂದಿರುವುದನ್ನು ನೆನಪಿಸಿಕೊಂಡರು.

ರ್ಯಾಂಕ್ ಪಡೆದ ವಿದ್ಯಾರ್ಥಿಗಳ ಪಟ್ಟಿ ಜೊತೆಗೆ ಆಟೋಟಗಳಲ್ಲಿ ರಾಜ್ಯ, ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವವರ ಫೋಟೋ, ಪರಿಚಯ ಇರುವುದು ಸಂತೋಷ ತಂದಿದೆ ಎಂದರು.

ಪ್ರಾಂಶುಪಾಲ ಪ್ರೊ.ಆರ್. ಪ್ರಶಾಂತ್ ಅವರು ವಿದ್ಯಾರ್ಥಿಗಳ, ಪೋಷಕರು, ಶಿಕ್ಷಕರ ಸಭೆ ಆಯೋಜಿಸುವ ಮೂಲಕ ಓದುವ,ಬರೆಯುವ ಹಾಗೂ ವಿದ್ಯಾರ್ಥಿಗಳ ಮೊಬೈಲ್ ಬಳಕೆಯ ಅನಾನುಕೂಲಗಳನ್ನು ತಿಳಿಸಲಾಯಿತು, ಮೊಬೈಲ್ ಬಿಟ್ಟು, ಪೆನ್ನು ಪುಸ್ತಕ ಹಿಡಿಯಿರಿ ಎಂಬ ಧ್ಯೇಯವನ್ನು ತಿಳಿಸಿದರು. ಅಂಕುರ ಸಂಚಿಕೆಯು ಕನ್ನಡ, ಇಂಗ್ಲಿಷ್, ಹಿಂದಿ ಭಾಷೆಯಲ್ಲಿ ಲೇಖನಗಳನ್ನು ಒಳಗೊಂಡಿದ್ದು ಚಿತ್ರ ಸಂಪುಟದಂತಿದೆ ‌ಎಂದರು. ವಾರ್ಷಿಕ ಸಂಚಿಕೆಯ ಸಂಪಾದಕ ಮಂಡಳಿಯಲ್ಲಿ ಸಂಚಾಲಕರಾಗಿ ಡಾ.ಸಿಸಿರಾ, ಸದಸ್ಯರಾಗಿ ಡಾ.ವಿ.ಮುರುಳಿ ಮೋಹನ್, ಬಿ.ವಿ.ರಾಧಿಕಾ, ಟಿ.ಜೆ.ಅರ್ಚನಾ, . ಡಾ . ಕೃಷ್ಣ .ಕೆ.ವಿ, ಟಿ.ಎಸ್. ಆಶಾ ಅವರುಗಳು ಕೆಲಸ ನಿರ್ವಹಿಸಿದ್ದರು.

WhatsApp

Join Now

Telegram

Join Now

Instagram

Join Now