ವಿಜಯ ದರ್ಪಣ ನ್ಯೂಸ್……
ನನ್ನ ಅವಧಿಯಲ್ಲಿ ದೇವಾಲಯದಲ್ಲಿ ಅವ್ಯವಹಾರ ನಡೆದಿಲ್ಲ ಅವ್ಯವಾರ ನಡೆದಿದ್ದರೆ ತನಿಖೆ ನಡೆಸಿ ಕ್ರಮ ಕೈಗೊಳ್ಳಿ ಮಾಜಿ ಶಾಸಕ ಬಿ ಹರ್ಷವರ್ಧನ್

ತಾಂಡವಪುರ ಸೆಪ್ಟೆಂಬರ್ 4: ನನ್ನ ಅವಧಿಯಲ್ಲಿ ಮೈಸೂರು ಜಿಲ್ಲೆ ಇತಿಹಾಸ ಪ್ರಸಿದ್ಧಿ ಉಳ್ಳ ದಕ್ಷಿಣ ಕಾಶಿ ಶ್ರೀಕಂಠೇಶ್ವರ ದೇವಾಲಯದಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಅವ್ಯವಾರ ನಡೆದಿದ್ದರೆ ತಲೆಕೆಡಿಸಿ ಕ್ರಮ ಕೈಗೊಳ್ಳಿ ಇದಕ್ಕೆ ನನ್ನ ಸಹಮತ ಕೂಡ ಇದೆ ಎಂದು ಮಾಜಿ ಶಾಸಕ ಬಿ ಹರ್ಷವರ್ಧನ್ ಹೇಳಿದರು.
ನಂಜನಗೂಡು ತಾಲೂಕು ಪತ್ರಕರ್ತ ಸಂಘದ ಬಾಣದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ದೇವಾಲಯದ ವಿಚಾರದಲ್ಲಿ ಆರೋಪ ಮಾಡುವಾಗ ಎಲ್ಲರೂ ದೇವಾಲಯದ ಪವಿತ್ರ್ಯತೆಯನ್ನು ಇಟ್ಟುಕೊಂಡು ಮಾತನಾಡಬೇಕು ಎಂದು ಹಾಲಿ ಶಾಸಕರಿಗೆ ಸಲಹೆ ನೀಡಿದರು.ಯಾರೋ ನೀಡಿದ ಮಾಹಿತಿಯನ್ನು ನಂಬಿ ದೇವಾಲಯದ ಮೇಲೆ ಆರೋಪ ಮಾಡಿರುವುದು ಸತ್ಯಕ್ಕೆ ದೂರವಾದದ್ದು ಎಂದರು. ಅವ್ಯವಹಾರ ನಡೆದಿದೆ ಎಂದು ನಿಮಗೆ ತಿಳಿದಿದ್ದರೆ ತನಿಖೆ ಮಾಡಿಸಿ ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಳ್ಳಿ.ಅದನ್ನು ಬಿಟ್ಟು ನಂಜನಗೂಡಿನ ಆಸ್ಮಿತಿಯಾದ ಶ್ರೀಕಂಠೇಶ್ವರ ದೇವಾಲಯದ ಕುರಿತು ಮಿಥ್ಯಾರೂಪ ಮಾಡಿ ದೇವಾಲಯದ ಘನತೆ ಗೌರವಕ್ಕೆ ದಕ್ಕೆ ತಂದ ನೀವೇ ಆತ್ಮವಿಮರ್ಶೆ ಮಾಡಿಕೊಳ್ಳಿ ಎಂದರು.
ನಿಮ್ಮ ಸುಳ್ಳು ಆರೋಪದಿಂದಾಗಿ ನಂಜನಗೂಡಿಗೆ ಬರುವ ಭಕ್ತರು ಕಡಿಮೆಯಾದರೆ ಅದಕ್ಕೆ ನೀವೇ ನೆರ ಹೊಣೆಯಾಗುತ್ತಿರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕೋಟ್ಯಾಂತರ ಅವ್ಯವಹಾರ ನಡೆದಿದ್ದಲ್ಲಿ ಅದನ್ನು ರುಜುವಾತು ಪಡಿಸಿ ತನಿಖೆ ಮಾಡಿಸಲಿ ದೇವಾಲಯದ ಲೆಕ್ಕಪತ್ರಗಳ ದಾಖಲೆಗಳನ್ನು ಪರಿಶೀಲಿಸಿ ಎಂದರು.
ದೇವಾಲಯದ ಸ್ನಾನಘಟ್ಟದಲ್ಲಿ ಬಿಸಿ ನೀರಿನ ವ್ಯಾಪಾರ ನಮ್ಮ ಕಾಲದಲ್ಲಿ ಉಚಿತವಾಗಿತ್ತು. ಈಗ ವ್ಯಾಪಾರಿಕಾರಣಿಯಾಗಿರುವುದು ಬಹಿರಂಗವಾದ ಮೇಲೂ ಆ ವ್ಯಾಪಾರ ಸ್ಥಗೀತವಾಗದಿರಲು ಕಾರಣ ವೇನು ಎಂದು ಪ್ರಶ್ನಿಸಿದರು. ದೇವಾಲಯದಲ್ಲಿ ಶಿವರಾತ್ರಿ ಹಬ್ಬದಂದು ಖರ್ಚದ 50 ಲಕ್ಷ ರೂ ಗಳಿಗೆ ಮೊದಲು ಲೆಕ್ಕ ನೀಡಿ ಎಂದು ಹಾಲಿ ಶಾಸಸಕರನ್ನು ಒತ್ತಾಯಿಸಿದರು.
ಶೌಚಾಲಯವನ್ನು ಕಛೇರಿಯಾಗಿ ಪರಿವರ್ತನೆ ಮಾಡಲು 38 ಲಕ್ಷ ರೂ ಖರ್ಚು ಒಂದೇ ಕಟ್ಟಡ ಪರಿವರ್ತನೆ ಇಬ್ಬರಿಂದ ಏಕೆ? ಇದಕ್ಕೆ ಅರ್ಕಿಯಾಲಜಿ ಇರಲಿ ಜಿಲ್ಲಾಧಿಕಾರಿಗಳೇ ಒಪ್ಪಿಗೆ ನೀಡಿಲ್ಲ ಹಾಗಿದ್ದು ಪರಿವರ್ತನೆಯಾಗಿದ್ದು ಏಕೆ ಎಂದು ಪ್ರಶ್ನಿಸಿದರು.
ದಾಸೋಹ ಸಭ ಭವನದ ಎಸಿಗೆ 4.40 ಲಕ್ಷ ರೂ ತೊರಿಸಲಾಗಿದೆ ಆ ಎಸಿಗೆ ಅಂತಿಹ ಮಹತ್ವ ಏನಿದೇ ಅವರು ಉದ್ಯಾನವನಕ್ಕೆ 20 ಲಕ್ಷ ರೂ ಚೈನ್ ಗೆ 16 ಲಕ್ಷ ಲೆಕ್ಕ ಬಂದಿದ್ದು ಯಾರ ಕಾಲದಲ್ಲಿ ಎಂದರು.ಬೆಳ್ಳಿ ರಥಕ್ಕೆ ಬೆಳ್ಳೆ ಖರೀದಿಗೆ ಈ ಪ್ರಕ್ರಿಯೆ ಬೇಕೆ ಎಂದ ಅವರು ದೇವಾಲಯಕ್ಕೆ ಘನತೆ-ಗೌರವಕ್ಕೆ ದಕ್ಕೆ ತರುವ ಮಾತನಾಡದೆ ಕೈಲಾನಾದರೆ ಅಭಿವೃದ್ಧಿ ಪಡಿಸಿ ಎಂದು ಹಾಲಿ ಶಾಸಕರ ವಿರುದ್ಧ ಹರಿಹಾಯ್ದರು.
ಈ ವೇಳೆ ಜಿ ಪಂ ಮಾಜಿ ಸದಸ್ಯ ಚಿಕ್ಕರಂಗನಾಯಕ, ತಾಲ್ಲೂಕು ಅದ್ಯಕ್ಷ ಕೆಂಡಗಣ್ಣಪ್ಪ,ನಗರಾಧ್ಯಕ್ಷ ಸಿದ್ದರಾಜು, ಎಸ್ ಬಸವರಾಜ್, ಮಹದೇವು,ಸಿದ್ದರಾಜು ಸೇರಿದಂತೆ ಪ್ರಮುಖರು ಹಾಜರಿದ್ದರು











