--Ads--

ಅನ್ಯ ಭಾಷಿಕರು ಕನ್ನಡ ನಾಡು ನುಡಿ ಸಂಸ್ಕೃತಿಯ ಅರಿತು ಬಾಳುವಂತೆ ಸಾಹಿತಿ ಕೆ.ಎಂ.ರೇವಣ್ಣ ಆಗ್ರಹ

On: September 22, 2026 6:22 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯದರ್ಪಣ ನ್ಯೂಸ್……

ಅನ್ಯ ಭಾಷಿಕರು ಕನ್ನಡ ನಾಡು ನುಡಿ ಸಂಸ್ಕೃತಿಯ ಅರಿತು ಬಾಳುವಂತೆ ಸಾಹಿತಿ ಕೆ.ಎಂ.ರೇವಣ್ಣ ಆಗ್ರಹ

 

ಬೆಂಗಳೂರು : ಕಪರಭಾಷಿಕರಿಗೆ ನ್ನಡ ನಾಡಿನ ಸಾಹಿತ್ಯ, ಸಂಸ್ಕೃತಿ, ಭಾಷೆ,ನೆಲ ಜಲದ ಬಗ್ಗೆ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ ಎಂದು ಹಿರಿಯ ಸಾಹಿತಿ, ನಿವೃತ್ತ ತಹಶೀಲ್ದಾರ್ ಕೆ.ಎಂ.ರೇವಣ್ಣ ಅಭಿಪ್ರಾಯಪಟ್ಟರು.

ಅವರು ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನ ಸಭಾಂಗಣದಲ್ಲಿ ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ತನ್ನ 16 ವರ್ಷದ ಕನ್ನಡ ಸಾಹಿತ್ಯ, ಸಂಸ್ಕೃತಿ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಭಾಷಣ ಮಾಡಿದರು.

ಕರ್ನಾಕದ ಬೆಳವಣಿಗೆಗೆ ಕನ್ನಡಿಗರು, ಹೋರಾಟಗಾರರು, ಸಾಹಿತಿಗಳು, ಕಲಾವಿದರು ಕೂಡಿ ಕರ್ನಾಟಕಕ್ಕೆ ಪ್ರತಿನಿತ್ಯ ಬರುತ್ತಿರುವ ಪರಭಾಷಿಕರ ಹಾವಳಿ ತಪ್ಪಿಸಲು ಹೋರಾಟದ ಅಗತ್ಯವಿದೆ ಎಂದರು.

ಸರ್ಕಾರದ ಕನ್ನಡ ಸಂಸ್ಕೃತಿ ಇಲಾಖೆ, ವಿವಿಧ ಅಕಾಡೆಮಿಗಳು ಸದ್ದಿಲ್ಲದೆ ಕನ್ನಡ ಭಾಷೆ, ಸಾಹಿತ್ಯ ಸಂಸ್ಕೃತಿ ಬೆಳೆಸುತ್ತಿರುವ ಸಂಘಸಂಸ್ಥೆಗಳನ್ನು ಗುರುತಿಸಿ ಧನಸಹಾಯ ನೀಡಿ ಪ್ರೋತ್ಸಾಹ ನೀಡಬೇಕು. ಇಂದಿನ ವೈಜ್ಞಾನಿಕ ಕಾಲಕ್ಕೆ ತಕ್ಕಂತೆ ಕನ್ನಡ ಬೆಳವಣಿಗೆಗೆ ಹೊಸ ದಿಕ್ಸೂಚಿ ತೋರಬೇಕಿದೆ.

ಬದಲಾದ ಕಾಲಘಟ್ಟದಲ್ಲಿ ವಿಶೇಷವಾಗಿ ನಗರ ಪ್ರದೇಶಗಳಲ್ಲಿ ಕನ್ನಡದ ಭಾಷೆ, ಸಂಸ್ಕೃತಿ ಮರೆಯಾಗಿ ಪಾಶ್ಚಾತ್ಯ ಸಂಸ್ಕೃತಿಯೇ ಮೇಳೈಸುತ್ತಿದೆ. ವಿದ್ಯಾರ್ಥಿಗಳು ಕಲಿಯಲು ಎರಡು ಭಾಷೆ ಸಾಕು, ವ್ಯವಹಾರದ ಭಾಷೆ ಕ್ರಮೇಣ ಕಲಿತು ವ್ಯವಹರಿಸುತ್ತಾರೆ ಎಂದರು.

ಸಮಾರಂಭವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಪುರುಷೋತ್ತಮ ಬಿಳಿಮಲೆ ಅವರು ಮಾತನಾಡಿ ಕರ್ನಾಟಕದ ಅಭಿವೃದ್ಧಿಗೆ ಸರ್ಕಾರ ತೆಗೆದುಕೊಳ್ಳುವ ಕೆಲವು ನಿರ್ಧಾರಗಳು ಭಾಷೆ ಬೆಳವಣಿಗೆಗೆ ಕಷ್ಟವಾಗುತ್ತಿದೆ, ಒಂದು ಗಟ್ಟಿಯಾದ ಕಾನೂನು ಜಾರಿಗೆ ತರುವ ಪ್ರಯತ್ನ ಸರ್ಕಾರ ಮಾಡಬೇಕಿದೆ, ಗೋಕಾಕ್ ಮಾದರಿಯ ಚಳುವಳಿಗಳು ಕನ್ನಡ ಭಾಷೆ, ಶಿಕ್ಷಣ, ಉದ್ಯೋಗಕ್ಕಾಗಿ ಆಗಬೇಕು ಎಂದರು.

ಡಾ.ಸಿಸಿರಾ, ಶಾಂತಿ ವಾಸು,ಬಿ.ಶೃಂಗೇಶ್ವರ ಅವರು ಸಂಪಾದಿಸಿ ನೂರಾರು ಮಂದಿ ಲೇಖನಗಳನ್ನು ಬರೆದು ಅರ್ಪಿಸಿರುವ ಕೆ.ಎಂ.ರೇವಣ್ಣ ಅವರ 80 ವರ್ಷದ ಅಭಿನಂದನೆ ಗ್ರಂಥ *ಆನು ಒಲಿದಂತೆ ಹಾಡುವೆ* ವನ್ನು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಸಿ. ಸೋಮಶೇಖರ್ ಬಿಡುಗಡೆ ಮಾಡಿ ಮಾತನಾಡಿದರು.

ಬೇಲಿಮಠದ ಶ್ರೀ ಶ್ರೀ ಶಿವರುದ್ರ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ ರೇವಣ್ಣ ದಂಪತಿಗೆ ಶುಭಾಶೀರ್ವಾದ ನೀಡಿದರು . ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷರಾದ ನಾಡೋಜ ಡಾ.ವೂಡೇ ಪಿ.ಕೃಷ್ಣ ಅವರು ರೇವಣ್ಣ ದಂಪತಿಗೆ *ಕುವೆಂಪು ಸಾಹಿತ್ಯ ಶ್ರೀ*ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ ಸಮಾಜದಲ್ಲಿ ಸಾಧು,ಸಂತರು, ಸಜ್ಜನರು, ವಿವೇಕಿಗಳು ಬಾಳುವೆ ನಡೆಸುವುದೇ ಕಷ್ಟವಾಗಿರುವ ಕಾಲದಲ್ಲಿ ರೇವಣ್ಣ ಅವರನ್ನು ಗುರುತಿಸಿ ಗೌರವಿಸಿ ಅಭಿನಂದಿಸಿರುವ ಕಾರ್ಯ ಶ್ಲಾಘನೀಯ ಎಂದರು.

ಬಿಎಂಶ್ರೀ ಪ್ರತಿಷ್ಠಾನದ ಅಧ್ಯಕ್ಷರಾದ ಸಾಹಿತಿ ಡಾ.ಬೈರಮಂಗಲ ರಾಮೇಗೌಡ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸುಮಂಗಲಿ ಸೇವಾಶ್ರಮದ ಅಧ್ಯಕ್ಷರು, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ.ಎಸ್.ಜಿ.ಸುಶೀಲಮ್ಮ ಅಧ್ಯಕ್ಷತೆ ವಹಿಸಿದ್ದರು.

ಸಂಸ್ಥೆಯ ಅಧ್ಯಕ್ಷ ಡಾ.ರಾಮಲಿಂಗೇಶ್ವರ್ ಪ್ರಾಸ್ತಾವಿಕ ನುಡಿಗಳಾಡಿ, ಸ್ವಾಗತಿಸಿದರು. ಕಾರ್ಯದರ್ಶಿ ಸಿ.ಹೇಮಾವತಿ, ಸಂಚಾಲಕರಾದ ಡಾ.ಆರ್.ವಾದಿರಾಜ್,
ಡಾ.ಕೃಷ್ಣ ಹಾನ್ ಬಾಳ್, ಎಲ್.ಬಸವಲಿಂಗ ಮುಂತಾದವರಿದ್ದರು. ಅಂಬುಜಾಕ್ಷಿ ಬೀರೇಶ್, ಇಂಚರ ನಟರಾಜ್, ಭೀಮಪ್ಪ ಪೂಜಾರಿ ಅವರ ಗಾಯನ, ಶ್ರೀಮತಿ ನಯನ ಶಿವಣ್ಣ, ಕು.ಭವ್ಯರವಿಶಂಕರ್ ಮತ್ತು ತಂಡದವರ ನೃತ್ಯ ಪ್ರದರ್ಶನ ಸೇರಿದ್ದ ಪ್ರೇಕ್ಷಕರ ಮನಸೂರೆಗೊಂಡಿತು.

ಮಧ್ಯಾಹ್ನ ನಡೆದ ವಿಚಾರ ಸಂಕಿರಣದಲ್ಲಿ ಪ್ರಗತಿಪರ ಲೇಖಕಿ ಇಂದಿರಾ ಕೃಷ್ಣಪ್ಪ ಅವರು ಅಧ್ಯಕ್ಷತೆ ವಹಿಸಿ ಕವಿಗೋಷ್ಠಿ ಮತ್ತು ಪ್ರಶಸ್ತಿ ಪ್ರದಾನ ಮಾಡಿದರು.

ವೇದಿಕೆಯಲ್ಲಿ ಪೊಲೀಸ್ ಇಲಾಖೆಯ ಸಾಹಿತಿಗಳಾದ ರಾಂ.ಕೆ.ಹನುಮಂತಯ್ಯ, ವಿ.ರೇಣುಕಾಪ್ರಸನ್ನ, ಕವಯಿತ್ರಿ ಜಯಶ್ರೀ ರಾಜು, ಪತ್ರಕರ್ತ ಡಾ.ಉದಯರವಿ, ಅರಬಗಟ್ಟೆ ನಾಗರಾಜ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಅದ್ಧೂರಿಯಾಗಿ ನೆರವೇರಿದ ಸಾಹಿತ್ಯ ಸಂಸ್ಕೃತಿ ಸಮ್ಮೇಳನ ಸಂಪನವಾಯಿತು.

WhatsApp

Join Now

Telegram

Join Now

Instagram

Join Now

ಇದನ್ನೂ ಓದಿ

ಯುಕೆಪಿ-3 ಭೂಸ್ವಾಧೀನಕ್ಕೆ ಚುರುಕು: ಮುಳುಗಡೆ ಸಂತ್ರಸ್ತರಿಗೆ ಮೊದಲ ಆದ್ಯತೆ : ಸಚಿವ ಚಲುವರಾಯಸ್ವಾಮಿ

ಶ್ರೀಲಂಕಾದಲ್ಲಿ ನಡೆಯುವ ಅಂತರರಾಷ್ಟ್ರೀಯ ಶಾಸ್ತ್ರೀಯ ನೃತ್ಯೋತ್ಸವ,: ಭಾರತವನ್ನು ಪ್ರತಿನಿಧಿಸಲಿರುವ ಬೆಂಗಳೂರಿನ ಶ್ರೀ ಲಲಿತಾ ಕಲಾ ನಿಕೇತನ.

ವಿಜಯಿ ಭಾರತ್ ಫೌಂಡೇಶನ್ನ Khele Sanand Sports Utsav 2026 ಸೈನಾ ನೆಹ್ವಾಲ್ ಅವರ ಉಪಸ್ಥಿತಿಯಲ್ಲಿ ಆರಂಭ; 25,000+ ವಿದ್ಯಾರ್ಥಿಗಳ ಭಾಗವಹಿಸುವಿಕೆ

ಸಂವಿಧಾನದ ಆಶಯಗಳು ಈಡೇರಬೇಕಾದರೆ ಸಾಮಾಜಿಕ ಅಸಮಾನತೆ ನಿವಾರಣೆಯಾಗಬೇಕು: ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರಿನ ಅಪೋಲೋ ಆಸ್ಪತ್ರೆಯಿಂದ ಭಾರತದ ಮೊದಲ ಎಕ್ಸೈಮ್ ಟೆಂಪರರಿ ಪ್ರೊಸ್ಟಾಟಿಕ್ ಶಸ್ತ್ರಚಿಕಿತ್ಸೆ; ಐದು ರೋಗಿಗಳಿಗೆ ಚಿಕಿತ್ಸೆ

ಎಸಿ ರೂಂನಲ್ಲಿ ಕೂರಬೇಡಿ, ಫೀಲ್ಡಿಗಿಳಿಯಿರಿ: ಅಧಿಕಾರಿಗಳಿಗೆ ಸಚಿವ ಚಲುವರಾಯಸ್ವಾಮಿ ಚಾಟ