ವಿಜಯ ದರ್ಪಣ ನ್ಯೂಸ್…..
ಬರಪಿಡಿತ ಪ್ರದೇಶದ ರೈತರ ಸಾಲ ಮನ್ನಾಕ್ಕೆ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಅಗ್ರ

ತಾಂಡವಪುರ ಸೆಪ್ಟೆಂಬರ್ 22 ರಾಜ್ಯದಲ್ಲಿ ವರುಣದೇವನ ಕೃಪ ಇಲ್ಲದೆ ರಾಜ್ಯದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು ಕೂಡ ರೈತರ ನೆರವಿಗೆ ಸರ್ಕಾರ ಧಾವಿಸುವ ಜೊತೆಗೆಬರ ಪೀಡಿತ ಪ್ರದೇಶಗಳೆಂದು ಘೋಷಣೆಯಾಗಿರುವ ವ್ಯಾಪ್ತಿಯ ರೈತರ ಕೃಷಿ ಪತ್ತಿನ ಸಹಕಾರ ಸಂಘದ ಸಾಲವನ್ನು ಸಂಪೂರ್ಣವಾಗಿ ರಾಜ್ಯ ಸರ್ಕಾರ ರೈತರ ಸಾಲ ಮನ್ನಾ ಮಾಡಬೇಕು. ಹಾಗೂ ಕೇಂದ್ರ ಸರ್ಕಾರ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಬರಪಿಡಿತ ಪ್ರದೇಶದ ವ್ಯಾಪ್ತಿಯ ರೈತರು ಪಡೆದಿರುವ ಬೆಳೆ ಸಾಲಗಳನ್ನು ಸಹ ಮನ್ನಾ ಮಾಡಿ ಬರದಿಂದಿರ ತತ್ತರಿಸಿರುವ ರೈತರ ರಕ್ಷಣೆಗೆ ಮುಂದಾಗಬೇಕೆಂದು ಒತ್ತಾಯಿಸಿ ನಂಜನಗೂಡಿನಲ್ಲಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜು ನೇತೃತ್ವದಲ್ಲಿಪ್ರತಿಭಟನೆ ನಡೆಸಿದರು.
ಎನ್ ಡಿ ಆರ್ ಎಫ್ ಮತ್ತು ಎಸ್ ಡಿ ಆರ್ ಎಫ್ ಮಾನದಂಡ ವೈಜ್ಞಾನಿಕವಾಗಿ ಮತ್ತು ಪ್ರಸ್ತುತ ಸನ್ನಿವೇಶಕ್ಕೆ ಅನುಕೂಲವಾದ ರೀತಿಯಲ್ಲಿ ಮಾರ್ಪಾಡು ಮಾಡಬೇಕು. ರಾಜ್ಯದಲ್ಲಿ ಇರುವಂತಹ ಮುಖ್ಯಮಂತ್ರಿಯಿಂದ ಶಾಸಕರ ತನಕ ಮತ್ತು ರಾಜ್ಯದಿಂದ ಆಯ್ಕೆಯಾಗಿರುವ ಲೋಕಸಭಾ ಸದಸ್ಯರು ಎಲ್ಲರೂ ಸಹ ತಮ್ಮ ಸಂಬಳ ಸಾರಿಗೆ ವೈಭವಿತ ಜೀವನವನ್ನು ಭರದ ನಡುವೆ ನಡೆಸುತ್ತಿದ್ದಾರೆ ಬರದ ಅಧ್ಯಯನದ ಖರ್ಚನ್ನು ಸಹ ಸರ್ಕಾರದಿಂದ ಪಡೆಯುತ್ತಾರೆ.
ಮೂರು ದಿನದ ಅಧಿವೇಶನಕ್ಕೆ ಕೋಟಿ ಕೋಟಿ ರೂಪಾಯಿಯನ್ನು ಸಹ ಸಂಬಳ ಸಾರಿಗೆ ಪಡೆದುಕೊಂಡು ರೈತರಿಗೆ ಪರಿಹಾರ ಕೊಡುವಲ್ಲಿ ಕೇಂದ್ರದ ಮೇಲೆ ರಾಜ್ಯ ರಾಜದ ಮೇಲೆ ಕೇಂದ್ರ ಕೈ ತೋರಿಸಿಕೊಂಡು ಕೈಕಟ್ಟಿ ಕುಳಿತಿದ್ದಾರೆ ಆದರೆ ಬರದ ಪಟ್ಟಿಯನ್ನು ರೈತನ ಬೆನ್ನಿಗೆ ಕಟ್ಟಿ ಬರ ದ ಹೆಸರಿನಲ್ಲಿ ರಾಜಕೀಯ ಮಾಡಲು ಹೊರಟಿರುವ ಆಡಳಿತ ಮತ್ತು ವಿರೋಧ ಪಕ್ಷಗಳು ಈಗಲಾದರೂ ರೈತನ ಅನ್ನವನ್ನು ತಿನ್ನುತ್ತಿದ್ದರೆ ತಕ್ಷಣ ರೈತರ ಸಮಸ್ಯೆಗೆ ಸ್ಪಂದಿಸಿ ವೈಜ್ಞಾನಿಕ ಬೆಳೆ ನಷ್ಟ ನೀಡಲು ಕ್ರಮ ಕೈಗೊಳ್ಳಲಿ. ಬರಪೀಡಿತ ಘೋಷಣೆ ದಿನಾಂಕದಿಂದ ರಾಜ್ಯದಲ್ಲಿ ಸಂಪೂರ್ಣ ಬರ ನಿಲ್ಲುವ ತನಕ ಯಾವುದೇ ಮಂತ್ರಿ ಶಾಸಕ ಲೋಕಸಭಾ ಸದಸ್ಯರು ಬರ ನಿರ್ವಹಣೆಗೆ ಹಣವನ್ನು ನೀಡಿ ಇವರಿಗೆ ಇರುವ ವಿಶೇಷ ಸೌಲಭ್ಯದ ಯಾವುದೇ ಸೌಲಭ್ಯಗಳನ್ನು ಪಡೆಯುವುದನ್ನು ಕೈಬಿಡಬೇಕು ಆಗ ಚುನಾಯಿತ ಪ್ರತಿಭೆಗಳು ರೈತ ಪರ ಇದ್ದಾರೆ ಎಂದು ತಿಳಿದುಕೊಳ್ಳಬಹುದು ಇದನ್ನು ಇಂದಿನ ಅದಿವೇಶನದಲ್ಲಿ ಪಕ್ಷಾತೀತವಾಗಿ ಎಲ್ಲಾ ಶಾಸಕರು ಘೋಷಣೆ ಮಾಡಲಿ ಎಂದು ಭಾಗ್ಯರಾಜ್ ಆಕ್ರೋಶ ವ್ಯಕ್ತಪಡಿಸಿದರು.
ಕಬಿನಿ ಮತ್ತು ಕಾವೇರಿ ಅಚ್ಚುಕಟ್ಟು ವ್ಯಾಪ್ತಿಯ ರೈತರಿಗೆ ಬೆಳೆ ಮಾಡಲು ನೀರು ನೀಡಲು ವಿಫಲವಾಗಿರುವ ಕಾರಣ ತಕ್ಷಣ ಪ್ರತಿ ಎಕರೆಗೆ 50,000 ಬೆಳೆ ನಷ್ಟ ಘೋಷಣೆ ಮಾಡಬೇಕು. ತಮಿಳುನಾಡಿಗೆ ನೀರು ಬಿಟ್ಟು ಕಬಿನಿ ವ್ಯಾಪ್ತಿಯ ರೈತರಿಗೆ ಸಾಕಷ್ಟು ತೊಂದರೆಯಾಗುತ್ತಿದೆ ಆದ್ದರಿಂದ ತಕ್ಷಣ ಕಬಿನಿ ಇಂದ ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಬೇಕು.
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮೇವು ಕೇಂದ್ರಗಳು ಆರಂಭವಾಗಬೇಕು. ಸಕ್ಕರೆ ಕಾರ್ಖಾನೆಗಳಿಂದ ರೈತರಿಗೆ ಬರಬೇಕಾದ ಬಾಕಿ50 ರೂಪಾಯಿ ಮೈಸೂರು ಚಾಮರಾಜನಗರ ಜಿಲ್ಲೆಯಲ್ಲಿ ಸುಮಾರು 8 ಕೋಟಿ ಅಷ್ಟು ರೈತರಿಗೆ ಹಣವನ್ನು ತಕ್ಷಣ ಕೊಡಿಸಬೇಕು. ಸಕ್ಕರೆ ಬೆಲೆ ಜಾಸ್ತಿ ಆಗಿರುವುದರಿಂದ ಪ್ರತಿ ಟನ್ ಕಬ್ಬಿಗೆ 6,000 ನಿಗದಿಗೆ ಒತ್ತಾಯ. ಕಬ್ಬು ಬೆಳೆಗಾರರಿಗೆ ಉತ್ತರ ದಕ್ಷಿಣ ಎಂಬ ತಾರಾತಮ್ಯವಿಲ್ಲದೆ ಕಟಾವು ಸಾಗಾಣಿಕೆಯನ್ನು ಕಾರ್ಖಾನೆ ಮಾಲೀಕರೇ ಬರಿಸಬೇಕು. ಕಬ್ಬು ಖರೀದಿ ಮಂಡಳಿಯನ್ನು ತಕ್ಷಣ ಪುನರ್ ರಚನೆ ಆಗಬೇಕು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮೇವು ಪೂರೈಕೆ ಕೇಂದ್ರಗಳನ್ನು ಸರ್ಕಾರ ಆರಂಭಿಸಬೇಕು.
ಬರದಿಂದ ನೊಂದಿರುವ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ ಗೆ ಹೆಚ್ಚುವರಿ 5 ರೂಪಾಯಿ ಘೋಷಣೆ ಮಾಡಬೇಕು.ಮೈಸೂರ್ ಜಿಲ್ಲೆಯ ನಂಜನಗೂಡು ತಾಲೋಕ್ ನ ಕಸುವಿನಹಳ್ಳಿ ಗ್ರಾಮದ ಹೊಸಕೆರೆಗೆ ನೀರು ತುಂಬಿಸಲು ಕ್ರಿಯಾಯೋಜನೆ ತಯಾರು ಮಾಡಿ ಅಂತರ್ಜಲ ವೃದ್ಧಿ ಹಾಗೂ ಜಾನುವಾರಗಳಿಗೆ ಕುಡಿಯೋ ನೀರಿಗೆ ಅನುಕೂಲ ಮಾಡಿಕೊಳ್ಳಲು ತಕ್ಷಣ ಕ್ರಮ ಕೈಗೊಳ್ಳಬೇಕು , ಹಾಗೂ ಹುರ ಕೆರೆಯ ಪ್ರಾಜೆಕ್ಟ್ ನ 26ಕೆರೆ ಗಳಿಗೆ ಶೀಘ್ರ ನೀರು ತುಂಬಿಸುವಲು ತಕ್ಷಣ ಕ್ರಮ ಕೈಗೊಳ್ಳಬೇಕು ಹಾಗೂ ಕಟ್ಟೆಗಳಿಗೆ ನೀರು ತುಂಬಿಸಲ ಜಾರಿಯಾಗಿರುವ ಯೋಜನೆಗಳನ್ನು ತ್ವರಿತ ಗತಿಯಲ್ಲಿ ಕೈಗೊಳ್ಳಲು ಸೂಚಿಸಬೇಕು. ಎಂದು ಒತ್ತಾಯಿಸುತ್ತಿದ್ದೇವೆ.
ತಕ್ಷಣ ರಾಜ್ಯ ಸರ್ಕಾರ ರೈತರ ನೆರವಿಗೆ ಧಾವಿಸಿ ಈ ಮೇಲ್ಕಂಡ ಹಕ್ಕುಗಳನ್ನು ಜಾರಿಗೆ ತರಲು ಕ್ರಮ ವಹಿಸಬೇಕು ಇಲ್ಲವಾದರೆ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ತಿಳಿಯಬಯಸುತ್ತೇವೆ
ಪ್ರತಿಭಟನೆಯಲ್ಲಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಹಳ್ಳಿಕರೆಹುಂಡಿ ಭಾಗ್ಯರಾಜ ಖಜಾಂಚಿ ಕೆರೆಹುಂಡಿ ರಾಜಣ್ಣ ಒಳಗೆರೆ ಗಣೇಶ್. ಪ್ರಕಾಶ್ ಗಾಂಧಿ ಕಸುವಿನಹಳ್ಳಿ ಮಂಜೇಶ್. ಸಿಸಿ ಶಿವರುದ್ರಪ್ಪ ಸಿದ್ದಯ್ಯನ ಹುಂಡಿ ಸೋಮಣ್ಣ. ಕೀರ್ತಿ.ಮಂಜು. ದೇವಿರಮ್ಮನಹಳ್ಳಿಹುಂಡಿ ದೇವಿರಮ್ಮನಹಳ್ಳಿ ಪಪ್ಪು ಸ್ವಾಮಿ ಪುಟ್ಟಸ್ವಾಮಿ ಸಿದ್ಧಬಸಪ್ಪ ಶ್ರೀಕಂಠ ಅಂಗಡಿ ಜಗದೀಶ್ ಮಹೇಶ್ ದೇವನೂರು ನಾಗೇಂದ್ರ. ಹದಿನಾರು ಭುಜಂಗಪ್ಪ ಹೊಸಪುರ ಮಾದಪ್ಪ ನಂದಿಗುಂದ ಸಿದ್ದಪ್ಪ ಮುದ್ದಾಹಳ್ಳಿ ಮಧು. ಕುಮಾರಸ್ವಾಮಿ ನರ್ಸರಿ ಜೆಸಿಬಿ ಚಿದಂಬರ. ಅಂಡುವಿನಹಳ್ಳಿ ಮಹೇಶ್ ಮಹದೇವಪ್ಪ ಮುಂತಾದ ನೂರಾರು ಜನರು ಹಾಜರಿದ್ದರು










