--Ads--

ಚಿರಂಜೀವಿ ಚಾರಿಟೆಬಲ್ ಟ್ರಸ್ಟ್ ನಿಂದ ಶಿಡ್ಲಘಟ್ಟ ನಾರಾಯಣಸ್ವಾಮಿ ಗೆ “ಸಮಾಜ ಸೇವೆಯ ಗುರುತಿಸುವಿಕೆ”ಯ ಪ್ರಶಂಸಾ ಪತ್ರ

On: September 23, 2026 4:41 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಚಿರಂಜೀವಿ ಚಾರಿಟೆಬಲ್ ಟ್ರಸ್ಟ್ ನಿಂದ ಶಿಡ್ಲಘಟ್ಟ ನಾರಾಯಣಸ್ವಾಮಿ ಗೆ “ಸಮಾಜ ಸೇವೆಯ ಗುರುತಿಸುವಿಕೆ”ಯ ಪ್ರಶಂಸಾ ಪತ್ರ

ಶಿಡ್ಲಘಟ್ಟ : ಚಿರಂಜೀವಿ ಚಾರಿಟೆಬಲ್ ಟ್ರಸ್ಟ್ ನೀಡಿರುವ “ಸಮಾಜ ಸೇವೆಯ ಗುರುತಿಸುವಿಕೆ”ಯ ಪ್ರಶಂಸಾ ಪತ್ರ
ದಲ್ಲಿ, ಸಮಾಜಕ್ಕೆ ಸಲ್ಲಿಸಿರುವ ಸಮರ್ಪಿತ ಸೇವೆ ಹಾಗೂ ಅರ್ಥಪೂರ್ಣ ಕೊಡುಗೆಯನ್ನು ಗುರುತಿಸಿ ಶಿಡ್ಲಘಟ್ಟದ ನಾರಾಯಣಸ್ವಾಮಿ ಅವರನ್ನು ಅಭಿನಂದಿಸಲಾಗಿದೆ.

ಮೆಗಾಸ್ಟಾರ್ ಚಿರಂಜೀವಿ ಅವರ ಹುಟ್ಟುಹಬ್ಬದ
ಅಂಗವಾಗಿ ಪ್ರತಿವರ್ಷ ರಕ್ತದಾನ ಶಿಬಿರ, ಆರೋಗ್ಯ ತಪಾಸಣಾ ಶಿಬಿರ, ಶಾಲೆಗಳಿಗೆ ಮೂಲಸೌಲಭ್ಯ ಕಲ್ಪಿಸುವುದು ಸೇರಿದಂತೆ ವಿವಿಧ ಸಮಾಜಮುಖಿ ಸೇವಾ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿರುವ ಚಿರಂಜೀವಿ ಅಭಿಮಾನಿ ಸಂಘದ ತಾಲ್ಲೂಕು ಅಧ್ಯಕ್ಷ ಕೆ. ನಾರಾಯಣಸ್ವಾಮಿ ಅವರನ್ನು ಚಿರಂಜೀವಿ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಗೌರವಿಸಲಾಯಿತು.

ಹೈದರಾಬಾದ್‌ನ ಐಟಿಸಿ ಕೊಹಿನೂರ್ ಸೆವೆನ್ ಸ್ಟಾರ್ ಹೋಟೆಲ್‌ನಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಮೆಗಾಸ್ಟಾ‌ರ್ ಚಿರಂಜೀವಿ ಅವರಿಂದ ಶಿಡ್ಲಘಟ್ಟದ ಕೆ. ನಾರಾಯಣಸ್ವಾಮಿ ಅವರು ಪ್ರಶಂಸಾ ಪತ್ರ ಸ್ವೀಕರಿಸಿದರು.

ಸಮಾಜದ ಕಲ್ಯಾಣದತ್ತ ಅವರ ಕರುಣೆ, ಬದ್ಧತೆ ಹಾಗೂ ಸೇವಾ ಪ್ರಯತ್ನಗಳನ್ನು ಪ್ರಶಂಸಿಸಿರುವ ಟ್ರಸ್ಟ್, ಸೇವಾ ಮನೋಭಾವ ಮತ್ತು ಸಮಾಜಕ್ಕೆ ಮರಳಿ ನೀಡುವ ಆಶಯವನ್ನು ಮುಂದುವರಿಸುವಂತೆ ಹಾರೈಸಿದೆ.
ಚಿರಂಜೀವಿ ಅವರ ಚಾರಿಟಿ, ರಕ್ತದಾನ, ನೇತ್ರದಾನ ಸೇರಿದಂತೆ ವಿವಿಧ ಸಮಾಜಮುಖಿ ಕಾರ್ಯಗಳಿಂದ ಪ್ರೇರಣೆ ಪಡೆದು ನಾರಾಯಣಸ್ವಾಮಿ ಅವರು ಅಭಿಮಾನಿ ಸಂಘದ ಮೂಲಕ ಹಲವು ವರ್ಷಗಳಿಂದ ಸೇವಾ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ.

ಮೆಗಾಸ್ಟಾರ್ ಚಿರಂಜೀವಿ ಅಬರ ಹುಟ್ಟುಹಬ್ಬದ ಸಂದರ್ಭದಲ್ಲಿ ರಕ್ತದಾನ ಮತ್ತು ಆರೋಗ್ಯ ಶಿಬಿರಗಳನ್ನು ಆಯೋಜಿಸುವುದರ ಜತೆಗೆ, ಶಾಲೆಗಳಿಗೆ ಅಗತ್ಯ ಮೂಲಸೌಲಭ್ಯ ಒದಗಿಸುವ ಕಾರ್ಯಗಳನ್ನೂ ಕೈಗೊಂಡಿದ್ದಾರೆ.

ನಾವು ಕೈಗೊಂಡಿರುವ ಸಣ್ಣಪುಟ್ಟ ಸೇವಾ ಕಾರ್ಯಗಳನ್ನು ಗುರ್ತಿಸಿ , ಮೆಗಾಸ್ಟಾ‌ರ್ ಚಿರಂಜೀವಿ ಅವರ ಸಮ್ಮುಖದಲ್ಲಿ ಗೌರವಿಸಿರುವುದು ಜೀವನದ ಹೆಮ್ಮೆಯ ಕ್ಷಣ ಇದು ನನಗೆ ದೊರೆತ ಪ್ರಶಸ್ತಿ ಮಾತ್ರವಲ್ಲ ನಮ್ಮ ಸಂಘದ ಎಲ್ಲಾ ಸದಸ್ಯರ ಸೇವಾ ಕಾರ್ಯಗಳಿಗೆ ದೊರೆತ ಆಶೀರ್ವಾದ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳಲು ಈ ಗೌರವ ಪ್ರೇರಣೆಯಾಗಿದೆ ಎಂದು ನಾರಾಯಣಸ್ವಾಮಿ ಹರ್ಷ ವ್ಯಕ್ತಪಡಿಸಿದರು.

ನಟ ಚಿರಂಜೀವಿ ಅವರು ಪ್ರಶಂಸಾ ಪತ್ರ ನೀಡುವ ಸಂದರ್ಭದಲ್ಲಿ ಚಿರಂಜೀವಿ ಚಾರಿಟೆಬಲ್ ಟ್ರಸ್ಟ್ ಉಪಾಧ್ಯಕ್ಷೆ ಸುಶ್ಮಿತಾಕೋಣಿದೇಲ ಹಾಜರಿದ್ದರು.

WhatsApp

Join Now

Telegram

Join Now

Instagram

Join Now