--Ads--

ಜಂಗಮಕೋಟೆ ಹೋಬಳಿ ಹೊಸಪೇಟೆ ಗ್ರಾಮ ಪಂಚಾಯಿತಿಯ ಆವರಣದಲ್ಲಿ ಸೆಪ್ಟೆಂಬರ್-26 ಶನಿವಾರ “ಪ್ರಜಾ ಸೇವೆ ಆಂದೋಲನ”

On: September 23, 2026 4:48 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಜಂಗಮಕೋಟೆ ಹೋಬಳಿ ಹೊಸಪೇಟೆ ಗ್ರಾಮ ಪಂಚಾಯಿತಿಯ ಆವರಣದಲ್ಲಿ ಸೆಪ್ಟೆಂಬರ್-26 ಶನಿವಾರ “ಪ್ರಜಾ ಸೇವೆ ಆಂದೋಲನ”

ಶಿಡ್ಲಘಟ್ಟ : ಪ್ರಜಾ ಸೇವೆ ಆಂದೋಲನ”ದ ಅಂಗವಾಗಿ ಶನಿವಾರ ಸೆ.26 ಜಂಗಮಕೋಟೆ ಹೋಬಳಿ ಹೊಸಪೇಟೆ ಗ್ರಾಮ ಪಂಚಾಯಿತಿಯ ಆವರಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಸಾರ್ವಜನಿಕರು ತಮ್ಮ ಅಹವಾಲುಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬೇಕು ಎಂದು ತಹಶೀಲ್ದಾ‌ರ್
ಗಗನಸಿಂಧು ಮನವಿ ಮಾಡಿದರು.

ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕಳೆದ ಶನಿವಾರ ನಡೆದ ಕಾರ್ಯಕ್ರಮದಲ್ಲಿ 210 ಅರ್ಜಿಗಳು ಸ್ವೀಕೃತವಾಗಿವೆ ಕಸಬಾ ಹೋಬಳಿಯ ವೈ.ಹುಣಸೇನಹಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ 169 ಅರ್ಜಿಗಳು ಕಂದಾಯ ಇಲಾಖೆಗೆ ಸಂಬಂಧಿಸಿದ್ದಾಗಿದ್ದು, ಉಳಿದವು ವಿವಿಧ ಇಲಾಖೆಗಳದ್ದಾಗಿವೆ. ಅರ್ಜಿಗಳ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ತಾಲ್ಲೂಕಿನಲ್ಲಿ ನಡೆಯುತ್ತಿರುವ “ಪ್ರಜಾ ಸೇವೆ
ಆಂದೋಲನ”ದಲ್ಲಿ ಸ್ವೀಕರಿಸುವ ಅರ್ಜಿಗಳನ್ನು ನಿಯಮಾನುಸಾರ 21 ದಿನಗಳೊಳಗೆ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಫಾರಂ 50, 53 ಮತ್ತು 57ಕ್ಕೆ ಸಂಬಂಧಿಸಿದ ಅರ್ಜಿಗಳು, ಸಾಗುವಳಿ ಚೀಟಿ, ಖಾತೆ, ಹಕ್ಕುಪತ್ರ, ಪಹಣಿ ಹಾಗೂ ಆರ್.ಆರ್.ಟಿ ತಿದ್ದುಪಡಿಗೆ ಸಂಬಂಧಿಸಿದ ಅರ್ಜಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದಿವೆ ಎಂದು ತಿಳಿಸಿದರು.
ವಿಲೇವಾರಿ ಮಾಡಲು ಸಾಧ್ಯವಿರುವ ಅರ್ಜಿಗಳನ್ನು ಈಗಾಗಲೇ ಇತ್ಯರ್ಥಪಡಿಸಲಾಗಿದೆ ಜಮೀನು ಮಂಜೂರಾತಿ ಸೇರಿದಂತೆ ಕೆಲವು ಪ್ರಕರಣಗಳಿಗೆ ಹೆಚ್ಚಿನ ಕಾಲಾವಕಾಶ ಅಗತ್ಯವಿದೆ ಎಂದರು.

ದಾರಿ ಹಾಗೂ ಒತ್ತುವರಿಗೆ ಸಂಬಂಧಿಸಿದ ಅರ್ಜಿಗಳನ್ನು ಪರಿಶೀಲನೆಗಾಗಿ ಕಂದಾಯ ನಿರೀಕ್ಷಕರಿಗೆ ಕಳುಹಿಸಲಾಗಿದ್ದು, ಸ್ಥಳ ಪರಿಶೀಲನೆ ಬಳಿಕ ಕ್ರಮ ಕೈಗೊಳ್ಳಲಾಗುವುದು,ಸಿವಿಲ್ ವ್ಯಾಜ್ಯಗಳಿಗೆ ಸಂಬಂಧಿಸಿದ ಅರ್ಜಿಗಳಿಗೂ ನಿಯಮಾನುಸಾರ ಕಾಲಾವಕಾಶ ಬೇಕಾಗುತ್ತದೆ ಎಂದು ವಿವರಿಸಿದರು.

“ಪ್ರಜಾ ಸೇವೆ ಆಂದೋಲನದಲ್ಲಿ ದೂರು ಮತ್ತು ಹೊಸ ಮನವಿ ಎಂಬ ಎರಡು ರೀತಿಯ ಅರ್ಜಿಗಳು ಬರುತ್ತವೆ, ಈಗಾಗಲೇ ಅರ್ಜಿ ಸಲ್ಲಿಸಿದ್ದರೂ ಪಹಣಿಯಲ್ಲಿ ದಾಖಲಾತಿ ಆಗದಿರುವುದು, ಸಾಗುವಳಿ ಚೀಟಿ ನೀಡಿದ್ದರೂ ಖಾತೆ ಆಗದಿರುವಂತಹ ಸಮಸ್ಯೆಗಳನ್ನು ಗ್ರೀವಿಯನ್ಸ್ ಎಂದು ಪರಿಗಣಿಸಲಾಗುತ್ತದೆ ಹೊಸದಾಗಿ ಸಲ್ಲಿಸುವ ಅರ್ಜಿಗಳು ರಿಕ್ವೆಸ್ಟ್ ವ್ಯಾಪ್ತಿಗೆ ಬರುತ್ತವೆ ಎಂದರು.

ಐ.ಪಿ.ಜಿ.ಆರ್.ಎಸ್ (IPGRS) ಪೋರ್ಟಲ್‌ನಲ್ಲಿ ಅರ್ಜಿಗಳನ್ನು ಏಳು ದಿನಗಳೊಳಗೆ ವಿಲೇವಾರಿ ಮಾಡಿ ಸಹಾಯಕ ಆಯುಕ್ತರ ಲಾಗಿನ್‌ಗೆ ಕಳುಹಿಸಬೇಕು , ಸರ್ಕಾರದ ಆದೇಶದಂತೆ ಅರ್ಜಿಗಳನ್ನು 21 ದಿನಗಳೊಳಗೆ ಇತ್ಯರ್ಥಪಡಿಸಬೇಕು ನಿಗದಿತ ಅವಧಿಯಲ್ಲಿ ವಿಲೇವಾರಿ ಸಾಧ್ಯವಾಗದಿದ್ದರೆ, ಸಂಬಂಧಿಸಿದ ಹಂತಕ್ಕೆ ವರ್ಗಾಯಿಸಿ ಮುಂದಿನ ಕ್ರಮದ ಬಗ್ಗೆ ಅರ್ಜಿದಾರರಿಗೆ ಮಾಹಿತಿ ನೀಡಲಾಗುವುದು ಎಂದು ಹೇಳಿದರು.

WhatsApp

Join Now

Telegram

Join Now

Instagram

Join Now