--Ads--

ಹಿರಿಯರ ಜ್ಞಾನ ಭಂಡಾರ, ಅನುಭವ ಅಪಾರ: ಎಡಿಸಿ ಸೈಯಿದಾ ಆಯಿಷಾ

On: October 1, 2026 4:26 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್……

ವಿಶ್ವ ಹಿರಿಯ ನಾಗರೀಕರ ದಿನಾಚರಣೆ

ಹಿರಿಯರ ಜ್ಞಾನ ಭಂಡಾರ, ಅನುಭವ ಅಪಾರ: ಎಡಿಸಿ ಸೈಯಿದಾ ಆಯಿಷಾ

ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ  ಜಿಲ್ಲೆ, ಅಕ್ಟೋಬರ್ .01 :

ಹಿರಿಯರ ಜ್ಞಾನ ಭಂಡಾರ, ಅನುಭವ ಅಪಾರವಾಗಿದ್ದು ಯುವ ಪೀಳಿಗೆಯು ಹಿರಿಯರ ಮಾರ್ಗದರ್ಶನದಲ್ಲಿ ಸನ್ಮಾರ್ಗದಲ್ಲಿ ನಡೆಯಬೇಕು ಎಂದು ಅಪರ ಜಿಲ್ಲಾಧಿಕಾರಿ ಸಯಿದಾ ಆಯಿಷಾ ತಿಳಿಸಿದರು.

ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ನಡೆದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜೀವನದಲ್ಲಿ ಹಿರಿಯ ನಾಗರೀಕರ ಸ್ಥಾನ ಅತ್ಯಂತ ವಿಶೇಷವಾದದ್ದು. ಹಿರಿಯ ನಾಗರೀಕರು ಕುಟುಂಬದ ಬೇರುಗಳು ಇದ್ದ ಹಾಗೆ. ಬೇರು ಗಟ್ಟಿಯಾಗಿದ್ದರೆ ಮರ ಬೆಳೆಯುತ್ತದೆ. ಹಿರಿಯರ ಆಶೀರ್ವಾದ ಅನುಭವ ಮಾರ್ಗದರ್ಶನದಿಂದ ಸುಂದರವಾದ ಬದುಕನ್ನು ಕಟ್ಟಿಕೊಳ್ಳಬಹುದು ಎಂದರು.

ಕುಟುಂಬ, ಸಮಾಜ, ದೇಶದ ಅಭಿವೃದ್ಧಿಗೆ ಹಿರಿಯ ನಾಗರೀಕರು ನೀಡಿದ ಕೊಡುಗೆ ಅಪಾರ. ಜೀವನದಲ್ಲಿ ಕಷ್ಟ, ಯಶಸ್ಸು ಅನುಭವದಿಂದ ಬರುತ್ತದೆ. ಹಿರಿಯರಿಗೆ ಅನುಭವ ಹೆಚ್ಚಾಗಿರುತ್ತದೆ.

ಮಕ್ಕಳಿಗೆ ಹಿರಿಯರು ಕಥೆಗಳನ್ನು ಮನರಂಜನೆಗಾಗಿ ಮಾತ್ರ ಹೇಳುತ್ತಿರಲಿಲ್ಲ. ಕಥೆಯ ಮೂಲಕ ಪ್ರೀತಿ, ಸಹನೆ, ಶಿಸ್ತು, ಮಾನವೀಯ ಮೌಲ್ಯವನ್ನು ತಿಳಿಸುತ್ತಿದ್ದರು.
ಈಗಿನ ಕಾಲದಲ್ಲಿ ಮಕ್ಕಳು ಮೊಬೈಲ್, ಲ್ಯಾಬ್ ಟ್ಯಾಪ್ , ತಂತ್ರಜ್ಞಾನದ ಬಳಕೆ ಹೆಚ್ಚಾಗಿ ಮಾಡುತ್ತಾರೆ. ಅವರು ಹಿರಿಯರಿಗೆ ಸಮಯವನ್ನು ನೀಡುತ್ತಿಲ್ಲ. ಕಿರಿಯರು ಹಿರಿಯರಿಗೆ ಸಮಯವನ್ನು ನೀಡಿ ಪ್ರೀತಿಯಿಂದ ಮಾತನಾಡಿಸಿ ಗೌರವದಿಂದ ನೋಡಿಕೊಳ್ಳಬೇಕು. ಅವರ ಆರೋಗ್ಯದ ಕಡೆ ಕಾಳಜಿ ವಹಿಸಿ ಹಿರಿಯರನ್ನು ಕುಟುಂಬದ ಪ್ರಮುಖ ಸದಸ್ಯರನ್ನಾಗಿ ನೋಡಬೇಕಾದುದು ಕರ್ತವ್ಯವೆಂದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾನೂನು ಸಲಹೆಗಾರ ಕೃಷ್ಣ ಪ್ರಸಾದ್ ಮಾತನಾಡಿ ಹಿರಿಯ ನಾಗರೀಕರಿಗೆ ಕಾನೂನು ಸೇವೆಗಳು, ವೃದ್ದಾಪ್ಯ ಪಿಂಚಣಿ ಸೌಲಭ್ಯ, ಪ್ರಯಾಣದಲ್ಲಿ ರಿಯಾಯಿತಿ, ಗುರುತಿನ ಚೀಟಿ, ಉಚಿತ ಲಾಯರ್, ಸಹಾಯವಾಣಿ ಸೌಲಭ್ಯದ ಕುರಿತು ಹಿರಿಯ ನಾಗರೀಕರಿಗೆ ಅರಿವು ಮೂಡಿಸಿದರು.

ಹಿರಿಯ ನಾಗರೀಕರಿಗೆ ಸಮಸ್ಯೆಗಳಿದ್ದಲ್ಲಿ ಸಹಾಯವಾಣಿ ಸಂಖ್ಯೆ 08022222919ಯನ್ನು ಸಂಪರ್ಕಿಸಬಹುದು. ಉಚಿತ ಕಾನೂನಿನ ಅರಿವು, ವೈಯಕ್ತಿಕ ಸಮಸ್ಯೆಗಳಿದ್ದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾನೂನು ಸಲಹೆಗಾರ ಕೃಷ್ಣ ಪ್ರಸಾದ್ ಅವರ ದೂರವಾಣಿ ಸಂಖ್ಯೆ 8861317519 ಸಂಪರ್ಕಿಸಬಹುದು ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಉತ್ತಮ ಸೇವೆ ಸಲ್ಲಿಸಿದ ಹಿರಿಯ ನಾಗರೀಕರಿಗೆ ಸನ್ಮಾನಿಸಲಾಯಿತು. ಕೃತಕ ಕಾಲು 3 ಜನರಿಗೆ ವಿತರಣೆ ಮಾಡಲಾಯಿತು. ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಜೇತರಾದ ಹಿರಿಯ ನಾಗರೀಕರಿಗೆ ಪಶಸ್ತಿ ಪತ್ರ ನೀಡಲಾಯಿತು.

ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಮುದ್ದಣ್ಣ ಎಂ, ಜಿಲ್ಲಾ ನಿರೂಪಣಾಧಿಕಾರಿ ರಮೇಶ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ, ಅನಿತಾ ಲಕ್ಷ್ಮಿ, ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯದರ್ಶಿ ಮಂಜುನಾಥ ಜಿ.ಆರ್. ಜಿಲ್ಲಾ ವಿಶೇಷಚೇತನರ ಕಲ್ಯಾಣಧಿಕಾರಿ ಅರುಣ್ ಕುಮಾರ್ ಎಂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಸಿಂಗಾರವ್ವ, ಜಿಲ್ಲಾ ನಿವೃತ್ತ ನೌಕರರ ಸಂಘದ ಕಾರ್ಯದರ್ಶಿ ಪ್ರಭಾಕರ್, , ಸ್ವಯಂ ಸೇವಾ ಸಂಸ್ಥೆಗಳು ಹಾಗೂ ವಿವಿದ್ದೋಶ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಹಾಗೂ ಹಿರಿಯ ನಾಗರೀಕರು ಉಪಸ್ಥಿತರಿದ್ದರು.

WhatsApp

Join Now

Telegram

Join Now

Instagram

Join Now