--Ads--

ಬೃಹತ್ ‘ಸೇವಾ ಜ್ಯೋತಿ ಯಾತ್ರೆ’ ಹಾಗೂ ಬೈಕ್ ರಾಲಿಗೆ ಚಾಲನೆ : ‘ವಿಕಸಿತ ಭಾರತ – ಸಂಕಲ್ಪ ಸಭೆ’ ಯಶಸ್ವಿ

On: October 7, 2026 2:19 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್……

ಬೃಹತ್ ‘ಸೇವಾ ಜ್ಯೋತಿ ಯಾತ್ರೆ’ ಹಾಗೂ ಬೈಕ್ ರಾಲಿಗೆ ಚಾಲನೆ : ‘ವಿಕಸಿತ ಭಾರತ – ಸಂಕಲ್ಪ ಸಭೆ’ ಯಶಸ್ವಿ


​
ಬೆಂಗಳೂರು: ಭಾರತೀಯ ಜನತಾ ಪಾರ್ಟಿ ‘ಸೇವಾ ಜ್ಯೋತಿಯಿಂದ ದೇಶ ಸೇವೆ – 25 ವರ್ಷಗಳು’ ಸಂಭ್ರಮದ ಅಂಗವಾಗಿ ಬೃಹತ್ ‘ಸೇವಾ ಜ್ಯೋತಿ ಯಾತ್ರೆ’ ಹಾಗೂ ಬೈಕ್ ರಾಲಿಯನ್ನು ಅತ್ಯಂತ ವಿಜೃಂಭಣೆಯಿಂದ ಹಮ್ಮಿಕೊಳ್ಳಲಾಯಿತು.
​ಬೆಂಗಳೂರು ದಕ್ಷಿಣ ಜಿಲ್ಲೆ ಬಿಜೆಪಿ ಉಪಾಧ್ಯಕ್ಷರು ಹಾಗೂ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಜನಪ್ರಿಯ ನಾಯಕ ಕೆ. ಉಮೇಶ್ ಶೆಟ್ಟಿ ಅವರ ನೇತೃತ್ವದಲ್ಲಿ, ಸಂಸದ ತೇಜಸ್ವಿ ಸೂರ್ಯ, ಶಾಸಕರಾದ  ಕೆ.ಸಿ. ರಾಮಮೂರ್ತಿ,  ರವೀಂದ್ರ ಹಾಗೂ ಇತರ ಗಣ್ಯರು ಜತೆಯಾಗಿ ಬೈಕ್ ರಾಲಿಗೆ ಚಾಲನೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

​
ಗೋವಿಂದರಾಜನಗರದ ಉದ್ಯಾನವನ, ಬಿ.ಜೆ.ಎಸ್ ಕ್ರೀಡಾಂಗಣದ ಹತ್ತಿರದಿಂದ ಆರಂಭವಾದ ಈ ಬೃಹತ್ ಬೈಕ್ ರಾಲಿಗೆ ಹಾಗೂ ‘ಸೇವಾ ಜ್ಯೋತಿ ಯಾತ್ರೆ’ಗೆ ಚಾಲನೆ ನೀಡಿದ ಬಳಿಕ, ಯಾತ್ರೆಯು ಶಂಕರಮಠಸ್ವಾಮಿ ವಿವೇಕಾನಂದ ಕ್ರೀಡಾಂಗಣದವರೆಗೆ ಸಂಚರಿಸಿತು.
ಯಾತ್ರೆಯುದ್ದಕ್ಕೂ ಪಕ್ಷದ ಧ್ವಜಗಳನ್ನು ಹಿಡಿದು, ಬೈಕ್‌ಗಳಲ್ಲಿ ಉತ್ಸಾಹದಿಂದ ಸಾಗಿದ ಸಾವಿರಾರು ಕಾರ್ಯಕರ್ತರು ಜೈಕಾರ ಕೂಗುತ್ತಾ ಸಂಭ್ರಮಿಸಿದರು.
​ನಂತರ ನಡೆದ ‘ವಿಕಸಿತ ಭಾರತ – ಸಂಕಲ್ಪ ಸಭೆ’ಯಲ್ಲಿ ದೇಶದ ಅಭಿವೃದ್ಧಿ ಹಾಗೂ ಪಕ್ಷದ 25 ವರ್ಷಗಳ ಜನಸೇವೆಯ ಹೆಜ್ಜೆಗುರುತುಗಳನ್ನು ಸ್ಮರಿಸಲಾಗಿದ್ದು, ನರೇಂದ್ರ ಮೋದಿ ಅವರ ಆಡಳಿತ ಹಾಗೂ ಸರ್ಕಾರದ ಜನಪರ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಕುರಿತು ಮುಖಂಡರು ಮಾರ್ಗದರ್ಶನ ನೀಡಿದರು. ಕಾರ್ಯಕ್ರಮದಲ್ಲಿ ಬಿಜೆಪಿ ಪಕ್ಷದ ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಹಾಗೂ ಸ್ಥಳೀಯ ಗಣ್ಯರು ಉಪಸ್ಥಿತರಿದ್ದರು.

WhatsApp

Join Now

Telegram

Join Now

Instagram

Join Now