ವಿಜಯ ದರ್ಪಣ ನ್ಯೂಸ್…….
ಮಹಿಳಾ ಸಾಹಿತ್ಯ, ಸಂಸ್ಕೃತಿ ಸಮ್ಮೇಳನ ಅಧ್ಯಕ್ಷರಾಗಿ ಶಿಕ್ಷಣ ತಜ್ಞೆ ಡಾ.ಗೀತಾ ರಾಮಾನುಜಂ ಆಯ್ಕೆ

ಬೆಂಗಳೂರು : ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ( ರಿ) ವತಿಯಿಂದ ದಿನಾಂಕ : 27/12/2026 ಭಾನುವಾರ ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನ ಸಭಾಂಗಣದಲ್ಲಿ ರಾಜ್ಯ ಮಟ್ಟದ 8 ನೇ ಮಹಿಳಾ ಸಾಹಿತ್ಯ, ಸಂಸ್ಕೃತಿ ಸಮ್ಮೇಳನ ಆಯೋಜಿಸಿದೆ.
ಸಮ್ಮೇಳನ ಅಧ್ಯಕ್ಷರಾಗಿ ಖ್ಯಾತ ಶಿಕ್ಷಣ ತಜ್ಞರು, ಪ್ರಗತಿಪರ ಲೇಖಕಿ, ಮಹಿಳಾಪರ ಹೋರಾಟಗಾರ್ತಿ, ರಂಗಕರ್ಮಿಗಳು, ಜಿ.ಆರ್.ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರು, ನ್ಯಾಷನಲ್ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲರು, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಆಗಿರುವ ಡಾ.ಗೀತಾ ರಾಮಾನುಜಂ ಅವರನ್ನು ಆಯ್ಕೆ ಮಾಡಲಾಗಿದೆ.
ಸಮ್ಮೇಳನದಲ್ಲಿ ಏನೇನಿರುತ್ತದೆ :
ಕವಿಗೋಷ್ಠಿ (12 ಮಂದಿಗೆ), ವಿಚಾರ ಸಂಕಿರಣ, ಸಾಧಕರಿಗೆ ವಿವಿಧ ದತ್ತಿ (ಲೋಹಿಯಾ ಪ್ರಶಸ್ತಿ, ಲಯನ್ ವೆಂಕಟಸುಬ್ಬಯ್ಯ,ಡಾ.ಕೆ.ಪಿ. ಶೈಲಜಾ.ಪ್ರಶಸ್ತಿ ದತ್ತಿ , ದೊಡ್ಡಬಳ್ಳಾಪುರ ಎನ್ . ರೇಣುಕಾ.. ನಾಗಪ್ರಿಯ ದತ್ತಿ , ಡಾ.ಕೆ.ರಮಾನಂದ ಹಾಗೂ ಹೆಬ್ಬಗೋಡಿ ಗೋಪಾಲಪ್ಪ ಕಾದಂಬರಿ, ಚುಟುಕು ಸಾಹಿತ್ಯ ಪ್ರಶಸ್ತಿ, ಮಂಡ್ಯ ಬಿ.ಆರ್.ಉಮಾ ಮತ್ತು ಮಲ್ಲೇಶ್ವರಂ ಲೀಲಾ ವಾಸುದೇವ್ ಮಹಿಳಾ ಸಾಹಿತ್ಯ ಸಂಸ್ಕೃತಿ ಸೇವಾ ಪ್ರಶಸ್ತಿ (12 ಮಂದಿಗೆ), 2025 ರ ಸಾಲಿನ (10 ಮಂದಿಗೆ..ಕಥೆ, ಕವನ, ಕಾದಂಬರಿ, ಜಾನಪದ, ಪ್ರಬಂಧ ಕೃತಿಗಳ ತಲಾ ಎರಡು ಪ್ರತಿಗಳನ್ನು ಕಳುಹಿಸಬೇಕು) ಪುಸ್ತಕ ಬಹುಮಾನ ಗುಂಪಿನಲ್ಲಿ ನೃತ್ಯ ಪ್ರದರ್ಶನ, ಗುಂಪಿನಲ್ಲಿ ಗೀತಗಾಯನ ಇರುತ್ತದೆ. ಅದಾಗ ನಿಜವಾದ ಸಾಧಕರ ಹೆಸರುಗಳನ್ನು ಫೋಟೋ ಮತ್ತು ಕಿರು ಪರಿಚಯದೊಂದಿಗೆ ಶಿಫಾರಸು ಮಾಡಲು ಕೋರಿದೆ.
ಮಾಹಿತಿಯನ್ನು ದಿನಾಂಕ 30/11/2026,
ಡಾ.ಎಸ್.ರಾಮಲಿಂಗೇಶ್ವರ (ಸಿಸಿರಾ),
ಕನ್ನಡ ಉಪನ್ಯಾಸಕರು, ಶೇಷಾದ್ರಿಪುರಂ ಮೈನ್ ಪಿಯು ಕಾಲೇಜು, ಬೆಂಗಳೂರು ಪಿನ್ ಕೋಡ್ : 560020.ವಾಟ್ಸಪ್
ಸಂ.ಮೊ : 9448880985 ಕಳುಹಿಸಲು ಸಿಸಿರಾ ಮನವಿ ಮಾಡಿದ್ದಾರೆ.







