ವಿಜಯ ದರ್ಪಣ ನ್ಯೂಸ್……
ಶ್ರೀ ಮಹೇಶ್ವರಿ ದೇವಸ್ಥಾನದಲ್ಲಿ 115ನೇ ದಸರಾ ಮಹೋತ್ಸವ

ಬೆಂಗಳೂರು : ಮಲ್ಲೇಶ್ವರದ ಸಂಪಿಗೆ ರಸ್ತೆಯ 8ನೇ ತಿರುವಿನಲ್ಲಿರುವ ಶ್ರೀ ಮಹೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ 115ನೇ ದಸರಾ ಮಹೋತ್ಸವದ ಅಂಗವಾಗಿ ಮಹಾಗಣಪತಿಗೆ ಹಾಗೂ ಅಮ್ಮನವರಿಗೆ ಅಕ್ಟೋಬರ್ 11 ರಿಂದ 20ರ ವರೆಗೆ ಒಂದೊಂದು ದಿನ ಒಂದೊಂದು ಅಲಂಕಾರ ಮಾಡಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮ ಪ್ರತಿದಿನ ಸಂಜೆ 6-30ಕ್ಕೆ ನಡೆಯಲಿದೆ
ಅಕ್ಟೋಬರ್ 11 : ಡಾ|| ದರ್ಶಿನಿ ಮಂಜುನಾಥ್ ನಿರ್ದೇಶನದಲ್ಲಿ ನೃತ್ಯ ದಿಶಾ ಟ್ರಸ್ಟಿನ ವಿದ್ಯಾರ್ಥಿಗಳಿಂದ “ಭರತನಾಟ್ಯ ಪ್ರದರ್ಶನ”,
ಅಕ್ಟೋಬರ್ 12 : ಡಾ|| ಮಾಲಿನಿ ರವಿಶಂಕರ್ ನಿರ್ದೇಶನದಲ್ಲಿ ಲಾಸ್ಯ ವರ್ಧನ ಟ್ರಸ್ಟಿನ ವಿದ್ಯಾರ್ಥಿಗಳಿಂದ “ಭರತನಾಟ್ಯ ಪ್ರದರ್ಶನ”,
ಅಕ್ಟೋಬರ್ 13 : ವಿದ್ವಾನ್ ಶ್ರೀಧರ್ ಸಾಗರ್ ಮತ್ತು ಸಂಗಡಿಗರಿಂದ “ಸ್ಯಾಕ್ಸೋಫೋನ್ ವಾದನ”,
ಅಕ್ಟೋಬರ್ 14 : ಕು|| ಚಿರಂತನ ಮತ್ತು ತಂಡದವರಿಂದ “ನೃತ್ಯ ಪ್ರದರ್ಶನ”,
ಅಕ್ಟೋಬರ್ 15 : ಪುಷ್ಪಲತಾ ಕಲಾ ಶಾಲೆಯ ವಿದ್ಯಾರ್ಥಿಗಳಿಂದ “ನೃತ್ಯ ಪ್ರದರ್ಶನ”,
ಅಕ್ಟೋಬರ್ 16 : ನಾಟ್ಯ ಗುರುಕುಲ ಶಾಲೆಯ ಪದ್ಮಿನಿ, ಕಾವ್ಯ ಮತ್ತು ಪ್ರಜ್ವಲ ಇವರುಗಳಿಂದ “ನೃತ್ಯ ಪ್ರದರ್ಶನ”,
ಅಕ್ಟೋಬರ್ 17 : ವಿದುಷಿ ಗಾಯಿತ್ರಿ ಮಯ್ಯ ನಿರ್ದೇಶನದಲ್ಲಿ ತಮೋಹ ಆರ್ಟ್ಸ್ ಫೌಂಡೇಶನ್ ವಿದ್ಯಾರ್ಥಿಗಳಿಂದ “ಭರತನಾಟ್ಯ ಪ್ರದರ್ಶನ”,
ಅಕ್ಟೋಬರ್ 18 : ಶೃಂಗಾರ ಲಹರಿ ಶ್ರೀಮತಿ ಶ್ರೀವಾಣಿ ಸುಂದರೇಶ್ ಶಿಷ್ಯ ವೃಂದದವರಿಂದ “ಸಂಗೀತ ಮತ್ತು ನೃತ್ಯ”,
ಅಕ್ಟೋಬರ್ 20 : ಕು|| ನಿರೀಕ್ಷಾ ಎಂ. ರಾವ್ ಮತ್ತು ಸಂಗಡಿಗರಿಂದ “ಜನಪದ ಮತ್ತು ಭಕ್ತಿ ಗೀತೆಗಳ ಗಾಯನ” ನಂತರ ನಟರಾಜ ಕಲಾ ನಿಕೇತನ ಇವರಿಂದ “ನೃತ್ಯ ಪ್ರದರ್ಶನ” ಕಾರ್ಯಕ್ರಮಗಳು ಜರುಗಲಿವೆ ಎಂದು ದೇವಸ್ಥಾನದ ಪದಾಧಿಕಾರಿಗಳು ತಿಳಿಸಿದ್ದಾರೆ.











