--Ads--

ಕಾವೇರಿ ವಿವಾದ: ಕರ್ನಾಟಕಕ್ಕೆ ಕೊಂಚ ರಿಲೀಫ್, 15 ದಿನಕ್ಕೆ 3,000 ಕ್ಯೂಸೆಕ್ ನೀರು ಬಿಡಲು CWRC ಆದೇಶ

On: October 9, 2026 1:46 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್……

ಕಾವೇರಿ ವಿವಾದ: ಕರ್ನಾಟಕಕ್ಕೆ ಕೊಂಚ ರಿಲೀಫ್, 15 ದಿನಕ್ಕೆ 3,000 ಕ್ಯೂಸೆಕ್ ನೀರು ಬಿಡಲು CWRC ಆದೇಶ

ತಮಿಳುನಾಡು ಕೇಳಿದ್ದು 15,050 ಕ್ಯೂಸೆಕ್, ಆದೇಶ ಬಂದಿದ್ದು 3,000 ಕ್ಯೂಸೆಕ್; ರಾಜ್ಯದ ವಾದಕ್ಕೆ ಮನ್ನಣೆ

“ಕಾವೇರಿಯಲ್ಲಿ ಕರ್ನಾಟಕದ ವಾದಕ್ಕೆ ಜಯ”

*ಬೆಂಗಳೂರು, ಅ.08:* ಕಾವೇರಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಇಂದು ನಡೆದ 144ನೇ CWRC ಮತ್ತು 59ನೇ CWMA ಸಭೆಯಲ್ಲಿ ಕರ್ನಾಟಕಕ್ಕೆ ಕೊಂಚ ರಿಲೀಫ್ ಸಿಕ್ಕಿದೆ.

ತಮಿಳುನಾಡು 15 ದಿನಗಳಿಗೆ 20.013 ಟಿಎಂಸಿ ನೀರು ಅಂದರೆ ದಿನಕ್ಕೆ 15,050 ಕ್ಯೂಸೆಕ್ ನೀರು ಬಿಡಬೇಕು ಎಂದು ಒತ್ತಾಯಿಸಿದ್ದರೆ, CWRC ಕೇವಲ *ದಿನಕ್ಕೆ 3,000 ಕ್ಯೂಸೆಕ್ (3.88 ಟಿಎಂಸಿ)* ನೀರನ್ನು ಅಕ್ಟೋಬರ್ 09 ಬೆಳಗ್ಗೆ 8 ಗಂಟೆಯಿಂದ ಮುಂದಿನ 15 ದಿನಗಳ ಕಾಲ ಬಿಳಿಗುಂಡ್ಲು ಬಳಿ ಹರಿಸುವಂತೆ ಕರ್ನಾಟಕಕ್ಕೆ ನಿರ್ದೇಶನ ನೀಡಿದೆ. CWMA ಕೂಡ ಇದೇ ಆದೇಶವನ್ನು ಎತ್ತಿ ಹಿಡಿದಿದೆ.

ಕರ್ನಾಟಕದ ವಾದ ಏನಿತ್ತು?

ಕರ್ನಾಟಕ ಸಭೆಯಲ್ಲಿ ತೀವ್ರ ಜಲದ ಕೊರತೆ ಇರುವುದನ್ನು ದಾಖಲೆ ಸಮೇತ ಮಂಡಿಸಿದೆ.

– *ಒಳಹರಿವು ಕೊರತೆ:* ಜೂನ್ 01 ರಿಂದ ಅ.07ರವರೆಗೆ ನಮ್ಮ ಜಲಾಶಯಗಳಿಗೆ ಬಂದಿರುವ ಒಟ್ಟು ಒಳಹರಿವು ಕೇವಲ 117.144 ಟಿಎಂಸಿ. 30 ವರ್ಷಗಳ ಸರಾಸರಿ 257.633 ಟಿಎಂಸಿ ಇರಬೇಕಿತ್ತು. ಅಂದರೆ *ಶೇ.54.53ರಷ್ಟು ಕೊರತೆ* ಇದೆ. ನೈಋತ್ಯ ಮುಂಗಾರು ಮುಗಿದಿದ್ದು ನೀರು ಹೆಚ್ಚುವ ಸಾಧ್ಯತೆ ಕಡಿಮೆ.
– ಆದೇಶ ಪಾಲನೆ: ಜುಲೈ 29ರಿಂದ ಅ.07ರವರೆಗೆ CWRC/CWMA 41.256 ಟಿಎಂಸಿ ಬಿಡಲು ಹೇಳಿದ್ದರೆ, ಕರ್ನಾಟಕ 42.476 ಟಿಎಂಸಿ ಬಿಟ್ಟಿದೆ. ಅಂದರೆ *1.220 ಟಿಎಂಸಿ ಹೆಚ್ಚುವರಿಯಾಗಿ* ಬಿಟ್ಟಿದ್ದೇವೆ ಎಂದು ಸ್ಪಷ್ಟಪಡಿಸಿದೆ.
– ಜಲಾಶಯದಲ್ಲಿ ನೀರೇ ಇಲ್ಲ: ಅ.07ರಂತೆ ನಮ್ಮ 4 ಜಲಾಶಯಗಳಲ್ಲಿ ಇರುವುದು ಕೇವಲ *46.968 ಟಿಎಂಸಿ*. ಕುಡಿಯುವ ನೀರು, ಪರಿಸರ ಹರಿವು ಮತ್ತು ಆವಿಯಾಗುವಿಕೆಗೆ 45 ಟಿಎಂಸಿ ಬೇಕು. ನೀರಾವರಿಗೆ ಉಳಿಯುವುದು ಕೇವಲ 12 ಟಿಎಂಸಿ. ಜಲಾಶಯಗಳ ಒಳಹರಿವು 1,000 ಕ್ಯೂಸೆಕ್ ಗಿಂತ ಕಡಿಮೆಯಾಗಿದೆ. ಹೀಗಾಗಿ ಮತ್ತೆ ನೀರು ಬಿಡಲು ಸಾಧ್ಯವಿಲ್ಲ ಎಂದು ಕರ್ನಾಟಕ ವಾದಿಸಿತ್ತು.
– ತಮಿಳುನಾಡು ಬಳಿ ನೀರಿದೆ: ತಮಿಳುನಾಡಿನ 3 ಜಲಾಶಯಗಳಲ್ಲೇ 37.997 ಟಿಎಂಸಿ ಇದೆ. ಮಧ್ಯಂತರ ಜಲಾನಯನ ಮತ್ತು ಅಂತರ್ಜಲ ಸೇರಿ ಒಟ್ಟು 244.997 ಟಿಎಂಸಿ ನೀರು ಲಭ್ಯವಿದೆ. ಮುಂಬರುವ ಈಶಾನ್ಯ ಮುಂಗಾರು ಅವರಿಗೇ ಲಾಭವಾಗಲಿದೆ. ಸಾಂಬಾ ಬೆಳೆಗೆ ಅವರೇ ಉತ್ತಮ ಸ್ಥಿತಿಯಲ್ಲಿದ್ದಾರೆ ಎಂದು ಕರ್ನಾಟಕ ವಾದ ಮಂಡಿಸಿತ್ತು.

ತಮಿಳುನಾಡು ವಾದ ಏನಿತ್ತು?

ಮೆಟ್ಟೂರಿನಲ್ಲಿ 32.01 ಟಿಎಂಸಿ ಮಾತ್ರ ಇದ್ದು, ಒಳಹರಿವು 952 ಕ್ಯೂಸೆಕ್ ಇದೆ. ಸಾಂಬಾ ಬೆಳೆಗೆ 81 ದಿನ ತಡವಾಗಿದೆ. ಬಿಳಿಗುಂಡ್ಲುನಲ್ಲಿ 127.706 ಟಿಎಂಸಿ ಬರಬೇಕಿತ್ತು, ಬಂದಿದ್ದು 46.047 ಟಿಎಂಸಿ ಮಾತ್ರ. ತಮಗೆ *15.022 ಟಿಎಂಸಿ ಬಾಕಿ* ಇದೆ ಎಂದು ತಮಿಳುನಾಡು ಆರೋಪಿಸಿತ್ತು.

ಕೊನೆಗೆ ಎರಡೂ ರಾಜ್ಯಗಳ ವಾದ ಆಲಿಸಿದ CWRC, ಕರ್ನಾಟಕ 3,000 ಕ್ಯೂಸೆಕ್ ನೀರು ಬಿಡಬೇಕು ಎಂದು ತೀರ್ಮಾನಿಸಿದೆ.

WhatsApp

Join Now

Telegram

Join Now

Instagram

Join Now