--Ads--

ರೇಷ್ಮೆ ಕೃಷಿ ನೋಡಲು ಹಿತ್ತಲಹಳ್ಳಿಗೆ ಬಂದ ಜರ್ಮನಿ, ಬಂಗಾಳದ ವಿನ್ಯಾಸಕರು

On: November 23, 2026 4:57 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್……

ರೇಷ್ಮೆ ಕೃಷಿ ನೋಡಲು ಹಿತ್ತಲಹಳ್ಳಿಗೆ ಬಂದ ಜರ್ಮನಿ, ಬಂಗಾಳದ ವಿನ್ಯಾಸಕರು

ಶಿಡ್ಲಘಟ್ಟ : ‘ಬಯೋ ಡಿಸೈನ್ ಸೌತ್ ಏಷ್ಯಾ’ ಯೋಜನೆಯಡಿ ಬೆಂಗಳೂರಿನ ಬಯೋ ಡಿಸೈನ್ ಬೆಂಗಳೂರು ಲ್ಯಾಬ್ ತಂಡದ ಸದಸ್ಯರು, ಜರ್ಮನಿಯ ತಜ್ಞರು ಹಾಗೂ ಪಶ್ಚಿಮ ಬಂಗಾಳದ ವಿನ್ಯಾಸಕರು ಸೇರಿದಂತೆ ಸುಮಾರು 15 ಜನ ಕೃಷಿ ಪಂಡಿತ್ ಪ್ರಶಸ್ತಿ ವಿಜೇತ ಗೋಪಾಲಗೌಡ ಅವರ ರೇಷ್ಮೆ ತೋಟಕ್ಕೆ ಭೇಟಿ ನೀಡಿ ರೇಷ್ಮೆ ಕೃಷಿಯ ವಿವಿಧ ಹಂತಗಳು, ರೈತರು ಅನುಸರಿಸುತ್ತಿರುವ ಪದ್ಧತಿಗಳು ಹಾಗೂ ಕೃಷಿಯಲ್ಲಿ ಎದುರಾಗುತ್ತಿರುವ ಸಮಸ್ಯೆಗಳ ಕುರಿತು ಮಾಹಿತಿ ಪಡೆದುಕೊಂಡರು.

ತಾಲ್ಲೂಕಿನ ಹಿತ್ತಲಹಳ್ಳಿ ಗ್ರಾಮದ ಪ್ರಗತಿಪರ ರೈತ ಹಾಗು ಕೃಷಿಪಂಡಿತ್ ಪ್ರಶಸ್ತಿ ವಿಜೇತ ಎಚ್.ಜಿ.ಗೋಪಾಲಗೌಡ ಅವರ ರೇಷ್ಮೆ ಕೃಷಿ ಪದ್ಧತಿ ಹಾಗೂ ಕೃಷಿ ಚಟುವಟಿಕೆಗಳನ್ನು ವೀಕ್ಷಿಸಲು ದೇಶ ,ವಿದೇಶಗಳ ತಜ್ಞರ ತಂಡ ಭೇಟಿ ನೀಡಿ ವೀಕ್ಷಿಸಿದರು.

ಪಶ್ಚಿಮ ಬಂಗಾಳದ ವಿನ್ಯಾಸಕಿ ಮೃದುಲ ಅವರು ಅಲ್ಲಿನ ರೇಷ್ಮೆ ಕೃಷಿ ಮತ್ತು ರೇಷ್ಮೆ ಗೂಡುಗಳ ಕುರಿತು ತಮ್ಮ ಅನುಭವ ಹಂಚಿಕೊಂಡರು ಅಲ್ಲಿಂದ ತಂದಿರುವ ರೇಷ್ಮೆ ಗೂಡುಗಳನ್ನು ಇಲ್ಲಿನ ಪರಿಸರದಲ್ಲಿ ಪ್ರಯೋಗಕ್ಕೆ ಬಳಸುವ ಉದ್ದೇಶ ಹೊಂದಿದ್ದಾರೆ.

ತಂಡದಲ್ಲಿ ಬೆಂಗಳೂರಿನಲ್ಲಿ ಜವಳಿ ವಿನ್ಯಾಸ ಮತ್ತು ತಂತ್ರಜ್ಞಾನ ಶಿಕ್ಷಣ ಪಡೆದಿರುವ ತಜ್ಞರ ಜತೆಗೆ ಜರ್ಮನಿಯ ಕಾರ್ಲ್ಸ್‌ರೂಹೆ ಕಾಲೇಜಿನಿಂದ ಯೋಜನೆಗಾಗಿ ವಿದ್ಯಾರ್ಥಿವೇತನದಡಿ ಆಗಮಿಸಿರುವ ಹೆಲೆನಾ ಮತ್ತು ಪೀಟರ್ ಇದ್ದರು.

ಕೃಷಿ ಉಪಕರಣಗಳ ವಿನ್ಯಾಸಕ್ಕೆ ನಮ್ಮ ತಂಡದಲ್ಲಿ ಪ್ರತ್ಯೇಕ ವಿನ್ಯಾಸಕರಿದ್ದಾರೆ ರೈತರು ಎದುರಿಸುತ್ತಿರುವ ಸಮಸ್ಯೆಗಳಿಗೆ ಅನುಗುಣವಾಗಿ ಹೊಸ ಯಂತ್ರಗಳನ್ನು ರೂಪಿಸಿ, ಮಾದರಿ ಸಿದ್ಧಪಡಿಸಿದರೆ ಮುಂದೆ ಇತರರು ಅದನ್ನು ಉತ್ಪಾದಿಸಬಹುದು ಇದನ್ನು ಲಾಭದ ಉದ್ದೇಶದಿಂದ ನೋಡದೆ ಕೃಷಿಗೆ ನಮ್ಮ ಕೊಡುಗೆಯಾಗಿ ಪರಿಗಣಿಸಿದ್ದೇವೆ ಕರ್ನಾಟಕದ ಕೃಷಿ ಪದ್ಧತಿಗಳು ಮತ್ತು ಇಲ್ಲಿನ ಜ್ಞಾನವನ್ನು ಜಗತ್ತಿನ ಇತರ ಭಾಗಗಳಿಗೂ ಪರಿಚಯಿಸುವ ಉದ್ದೇಶವಿದೆ’ ಎಂದು ತಂಡದ ಸದಸ್ಯರು ತಿಳಿಸಿದರು.

ರೈತರ ಸಮಸ್ಯೆಗಳಿಗೆ ವಿಜ್ಞಾನಿಗಳು, ಕಲಾವಿದರು ಹಾಗೂ ವಿನ್ಯಾಸಕರ ನೆರವಿನೊಂದಿಗೆ ಪರಿಹಾರ ಕಂಡುಕೊಳ್ಳುವುದು ತಂಡದ ಭೇಟಿಯ ಮುಖ್ಯ ಉದ್ದೇಶವಾಗಿದೆ, ರೈತರು ಬಳಸುವ ಕೃಷಿ ಉಪಕರಣಗಳ ಸುಧಾರಣೆ ಹಾಗೂ ಹೊಸ ಯಂತ್ರಗಳ ವಿನ್ಯಾಸಕ್ಕೆ ಆದ್ಯತೆ ನೀಡಲಾಗುತ್ತಿದೆ ಗೋಪಾಲಗೌಡ ಅವರು ಪ್ರಸ್ತಾಪಿಸಿದ ಯಂತ್ರವೊಂದರ ಅಗತ್ಯದ ಕುರಿತು ವಿನ್ಯಾಸಕರ ಗಮನಕ್ಕೆ ತಂದು, ಸಾಧ್ಯವಾದರೆ ಮಾದರಿ ಯಂತ್ರ (ಪ್ರೊಟೊಟೈಪ್) ಅಭಿವೃದ್ಧಿಪಡಿಸುವ ಚಿಂತನೆಯೂ ತಂಡಕ್ಕಿದೆ ಎಂದರು.

ಈ ಯೋಜನೆಯು ದೆಹಲಿಯಲ್ಲಿ ಆರಂಭಗೊಂಡಿದ್ದು, ಬಾಂಗ್ಲಾದೇಶದ ಸೆಣಬು ಕೃಷಿ, ಶ್ರೀಲಂಕಾದ ಕಡಲಕಳೆ ಕೃಷಿ ಹಾಗೂ ಮಹಾರಾಷ್ಟ್ರದ ಲೂಫಾ (ನೈಸರ್ಗಿಕ ನಾರು ನೀಡುವ ಸಸ್ಯ) ಕೃಷಿಯ ಅಧ್ಯಯನವನ್ನು ಒಳಗೊಂಡಿದೆ. ಕರ್ನಾಟಕವು ದೇಶದ ಪ್ರಮುಖ ರೇಷ್ಮೆ ಉತ್ಪಾದಕ ರಾಜ್ಯಗಳಲ್ಲಿ ಒಂದಾಗಿರುವುದರಿಂದ ಇಲ್ಲಿನ ರೇಷ್ಮೆ ಬೆಳೆಗಾರರ ಸಮಸ್ಯೆ ಹಾಗೂ ರೇಷ್ಮೆ ಕೃಷಿಯ ಕುರಿತು ಅಧ್ಯಯನ ನಡೆಸಲಾಗುತ್ತಿದೆ ಎಂದು ವಿವರಿಸಿದರು.

ರೈತ ಎಚ್.ಜಿ.ಗೋಪಾಲಗೌಡ ಮಾತನಾಡಿ ,
ರೇಷ್ಮೆ ಮತ್ತು ಹೈನುಗಾರಿಕೆಯನ್ನು ಅಳವಡಿಸಿಕೊಂಡರೆ ದೊಡ್ಡ ಶ್ರೀಮಂತರಾಗದಿದ್ದರೂ ಉತ್ತಮ ಆರೋಗ್ಯ, ಉತ್ತಮ ಬಟ್ಟೆ ಮತ್ತು ಒಳ್ಳೆಯ ಊಟದೊಂದಿಗೆ ನೆಮ್ಮದಿಯ ಜೀವನ ನಡೆಸಬಹುದು ,
ನಾನು ಯಾರಿಂದಲೂ ಹೇಳಿಸಿಕೊಂಡು ಈ ಪದ್ಧತಿ ಅನುಸರಿಸುತ್ತಿಲ್ಲ ಸ್ವಂತ ಅನುಭವದಿಂದ ಪ್ರಾಯೋಗಿಕವಾಗಿ ಕೃಷಿ ಮಾಡುತ್ತಿದ್ದೇನೆ. ಇದಕ್ಕಿಂತ ಹೆಚ್ಚಿನ ವೈಭೋಗ ಇನ್ನೇನು ಬೇಕು’ ಎಂದು ತಮ್ಮ ಕೃಷಿ ಅನುಭವವನ್ನು ಹಂಚಿಕೊಂಡರು.

ಈ ಸಂದರ್ಭದಲ್ಲಿ ರೇಷ್ಮೆ ಕೃಷಿ ವಿಸ್ತರಣಾಧಿಕಾರಿ ಭಾರತಿ,ಬೋದಗೂರು ರಾಮಮೂರ್ತಿ, ರೈತರಾದ ಬೂದಾಳ ರಾಮಾಂಜಿ, ಸತೀಶ್, ಅಪ್ಪೇಗೌಡನಹಳ್ಳಿ ಮಂಜು,ಜಿ.ಮಂಜುನಾಥ್,ಹಿತ್ತಲಹಳ್ಳಿ ಆಶಾ, ಕಾಚಹಳ್ಳಿ ಶೈಲಜ ಮತ್ತಿತರರು ಹಾಜರಿದ್ದರು.

WhatsApp

Join Now

Telegram

Join Now

Instagram

Join Now