--Ads--

ಜೆಡಿಎಸ್ ಮುನಿಸು ಸದಸ್ಯರ ಭಿನ್ನಮತಕ್ಕೆ ಅಂತ್ಯ

On: October 20, 2026 5:04 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ಜೆಡಿಎಸ್ ಮುನಿಸು ಸದಸ್ಯರ ಭಿನ್ನಮತಕ್ಕೆ ಅಂತ್ಯ

ವಿಜಯಪುರ ,ದೇವನಹಳ್ಳಿ ತಾಲ್ಲೂಕು: ವಿಜಯಪುರ ಪುರಸಭೆಯ ಚುನಾಯಿತ ಸದಸ್ಯರ ಸದಸ್ಯತ್ವದ ಅಧಿಕಾರವಧಿ ಸೆ.19 ಕ್ಕೆ ಮುಕ್ತಾಯಗೊಂಡಿದ್ದು, ಒಂದು ತಿಂಗಳ ಬಳಿಕ ಜೆಡಿಎಸ್ ವರಿಷ್ಠರ ಸಮ್ಮುಖದಲ್ಲಿ ಪುರಸಭೆಯ ಜೆಡಿಎಸ್ ಮುನಿಸು ಸದಸ್ಯರ ಭಿನ್ನಮತವನ್ನು ಸಂಧಾನದ ಮೂಲಕ ಅಂತ್ಯಗೊಳಿಸಲಾಗಿದೆ.

ದೇವನಹಳ್ಳಿಯಲ್ಲಿ  ಮಾಜಿ ಶಾಸಕಕರ ಕಚೇರಿಯಲ್ಲಿ ಭಾನುವಾರ ರಾತ್ರಿ ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಮಹೇಶ್ ಅವರ ಅಧ್ಯಕ್ಷತೆಯಲ್ಲಿ ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ವಿ.ಮಂಜುನಾಥ್ ನೇತೃತ್ವದಲ್ಲಿ ವಿಜಯಪುರ ಪುರಸಭೆಯ ಜೆಡಿಎಸ್ ಮಾಜಿ ಸದಸ್ಯರು, ಮುಖಂಡರ ನಡುವೆ ಸಭೆ ಏರ್ಪಡಿಸಲಾಗಿತ್ತು.

2021 ರಲ್ಲಿ ನಡೆದ ಪುರಸಭೆ ಚುನಾವಣೆಯಲ್ಲಿ 23 ಚುನಾಯಿತ ಪ್ರತಿನಿಧಿಗಳ ಪೈಕಿ 13 ಮಂದಿ ಜೆಡಿಎಸ್ ಸದಸ್ಯರು ಗೆದ್ದಿದ್ದರು. ಜೆಡಿಎಸ್ ನ ಎಲ್ಲ ಸದಸ್ಯರಿಗೂ ಸೂಕ್ತ ಸ್ಥಾನಮಾನ ಸಿಗಬೇಕೆಂಬ ಕಾರಣಕ್ಕೆ ಸದಸ್ಯರ ಐದು ವರ್ಷ ಅಧಿಕಾರಾವಧಿಯನ್ನು ಒಂದು ಕಾಲು ವರ್ಷದಂತೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ, ಪುರಸಭೆಯ ಸ್ಥಾಯಿ ಸಮಿತಿಯ ಅಧಿಕಾರ ಹಂಚಿಕೆಗೆ ತೀರ್ಮಾನಿಸಲಾಗಿತ್ತು.

ಇದಕ್ಕೆ ತದ್ವಿರುದ್ಧವಾಗಿ ನಡೆದ ಕಾರಣಕ್ಕೆ ಬೇಸತ್ತು ಜೆಡಿಎಸ್ ಸದಸ್ಯರಲ್ಲಿ ಹಲವು ಭಿನ್ನಾಭಿಪ್ರಾಯ ಉಂಟಾಯಿತು. ಪಕ್ಷದಲ್ಲಿನ ಕೆಲ ಸ್ವಾರ್ಥಿಗಳು ಆಡಿದ ಮಾತಿನಂತೆ ನಡೆಯಲಿಲ್ಲ ಎಂಬ ಕಾರಣಕ್ಕೆ ಪಕ್ಷದ ಸದಸ್ಯರಲ್ಲಿ ಭಿನ್ನಾಭಿಪ್ರಾಯ ಉಂಟಾಗಿ ಪಕ್ಷದ ಒಗ್ಗಟ್ಟು ಒಡೆಯಲು ಕಾರಣವಾಯಿತು.

ಈಗ ಪುರಸಭೆಯ ಅವಧಿ ಮುಗಿದಿದೆ. ಚುನಾವಣೆಗಳು ಸಮೀಪಿಸುತ್ತಿರುವುದರಿಂದ ಈಗ ಸಭೆ ನಡೆಸಲಾಗುತ್ತಿದೆ ಎಂದು ಪಕ್ಷದ ವರಿಷ್ಠರ ಎದುರು ಜೆಡಿಎಸ್ ವಿರುದ್ಧ ಮುನಿಸಿಕೊಂಡ ಪುರಸಭೆಯ ಮಾಜಿ ಸದಸ್ಯರು ಆಕ್ರೋಶದ ಧ್ವನಿ ಎತ್ತಿದ್ದರು.

ಹಿಂದೆ ವಿಜಯಪುರ ಪುರಸಭೆಯಲ್ಲಿ ನಡೆದಿರುವ ಕಹಿ ಘಟನೆಗಳನ್ನು ಬದಿಗಿಟ್ಟು ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಸಂಘಟನೆಗೆ ಎಲ್ಲರೂ ಒಗ್ಗಟ್ಟು ಪ್ರದರ್ಶಿಸಬೇಕು. ಇಲ್ಲಿಯೇ ಪುರಸಭೆಯ ಜೆಡಿಎಸ್ ಮಾಜಿ ಸದಸ್ಯರು, ಮುಖಂಡರು ತಮ್ಮ ಭಿನ್ನಾಭಿಪ್ರಾಯಗಳಿಗೆ ಅಂತಿಮ ವಿರಾಮ ಹಾಕಿ ಪಕ್ಷ ಸಂಘಟನೆಗೆ ಒತ್ತು ನೀಡಬೇಕು ಎಂದು ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಕಟ್ಟುನಿಟ್ಟಾಗಿ ಸೂಚಿಸಿದರು.

ಪುರಸಭೆಯ ಅಧಿಕಾರ ಹಂಚಿಕೆಯಲ್ಲಿ ಆದ ಗೊಂದಲಗಳಿಂದ ಜೆಡಿಎಸ್ ಮುಖಂಡರು ಹಾಗೂ ಸದಸ್ಯರ ನಡುವೆ ಮನಸ್ತಾಪ ಉಂಟಾಯಿತು. ಈಗ ಪಕ್ಷದ ವರಿಷ್ಠರ ಸೂಚನೆ, ಮಾರ್ಗದರ್ಶನದಂತೆ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲು ಎಲ್ಲರೂ ನಿರ್ಧರಿಸಿದ್ದೇವೆ ಎಂದು ಜೆಡಿಎಸ್ ಮುಖಂಡ ಭಾಸ್ಕರ್ ತಿಳಿಸಿದರು.

ಮಾಜಿ ಶಾಸಕ ಎಲ್.ಎನ್.ನಾರಾಯಣಸ್ವಾಮಿ ಅವರ ನೇತೃತ್ವದಲ್ಲಿ ಮುಂಬರುವ ಚುನಾವಣೆಗಳನ್ನು ಎದುರಿಸಿ ಪಕ್ಷವನ್ನು ಅಧಿಕಾರಕ್ಕೆ ತರಲು ಎಲ್ಲರೂ ಒಗ್ಗಟ್ಟಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಲಾಗುವುದು ಎಂದು ಪುರಸಭೆ ಮಾಜಿ ಸದಸ್ಯ ಬೈರೇಗೌಡ ತಿಳಿಸಿದರು.

ಜೆಡಿಎಸ್‍ನಿಂದ ಮುನಿಸಿಕೊಂಡ ಪುರಸಭೆಯ ಮಾಜಿ ಸದಸ್ಯರ ನುಡಿಯನ್ನು ಆಲಿಸಿದ ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಅವರು ಮುಂದಿನ ಪುರಸಭೆಯ ಚುನಾವಣೆಯಲ್ಲಿ 23 ಸ್ಥಾನಗಳನ್ನು ಜೆಡಿಎಸ್ ಗೆಲ್ಲುವ ಗುರಿಯನ್ನು ಹಾಕಿಕೊಳ್ಳಬೇಕು ಎಂದಿದ್ದಾರೆ. ಅದರಂತೆ ಕೆಲಸ ಮಾಡಲಾಗುವುದು ಎಂದು ಜೆಡಿಎಸ್ ಮಾಜಿ ಸದಸ್ಯ ವಿ.ರವಿ ತಿಳಿಸಿದರು.

ಪಕ್ಷದೊಳಗಿನ ಗೊಂದಲಗಳನ್ನು ಬಗೆಹರಿಸಿಕೊಂಡು ಒಗ್ಗಟ್ಟಿನಿಂದ ಮುನ್ನಡೆಯುವುದು ಮುಖ್ಯವಾಗಿದೆ. ವರಿಷ್ಠರ ಮಾರ್ಗದರ್ಶನದಲ್ಲಿ ಪಕ್ಷದ ಸಂಘಟನಾತ್ಮಕ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಜೆಡಿಎಸ್ ಮುಖಂಡ ಬಸವರಾಜ ಹೇಳಿದರು.

ಜೆಡಿಎಸ್ ಕಾರ್ಯಾಧ್ಯಕ್ಷ ರವೀಂದ್ರ, ಪ್ರಧಾನ ಕಾರ್ಯದರ್ಶಿ ಮನೋಹರ್, ಉಪಾಧ್ಯಕ್ಷ ಮುನಿರಾಜು, ಯುವ ಜೆಡಿಎಸ್ ಅಧ್ಯಕ್ಷ ಟಿ.ರವಿ, ಮುಖಂಡರಾದ ಸಿ.ನಾರಾಯಣಸ್ವಾಮಿ, ಕೇಶವಪ್ಪ,  ಭುಜೇಂದ್ರ , ಮುನಿರಾಜು, ಮೆಹಬೂಬ್ ಪಾಷಾ, ಪ್ರಕಾಶ್, ಎಚ್.ಎಂ.ಕೃಷ್ಣಪ್ಪ, ಶ್ರೀರಾಮಣ್ಣ, ಮುನಿಕೃಷ್ಣಪ್ಪ, ಸೋಮಣ್ಣ, ಕುಮಾರ್ ಇದ್ದರು.

 

WhatsApp

Join Now

Telegram

Join Now

Instagram

Join Now