--Ads--

ಹಾಲಿನ ಧರ 7 ರೂ. ಹೆಚ್ಚಿಸಿ ರೈತರ ನೆರವಿಗೆ ಬಂದ ಸರಕಾರದ ನಿರ್ಧಾರಕ್ಕೆ ಅಭಿನಂಧನೆ : ಶಾಸಕ ಬಿ.ಎನ್.ರವಿಕುಮಾ‌ರ್

On: November 6, 2026 3:43 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್……

ಹಾಲಿನ ಧರ 7 ರೂ. ಹೆಚ್ಚಿಸಿ ರೈತರ ನೆರವಿಗೆ ಬಂದ ಸರಕಾರದ ನಿರ್ಧಾರಕ್ಕೆ ಅಭಿನಂಧನೆ : ಶಾಸಕ ಬಿ.ಎನ್.ರವಿಕುಮಾ‌ರ್

ಶಿಡ್ಲಘಟ್ಟ : ಹಾಲು ಉತ್ಪಾದಕರು ಎದುರಿಸುತ್ತಿರುವ ಆರ್ಥಿಕ ಸಂಕಷ್ಟವನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರಕಾರವು ಹಾಲಿನ ದರವನ್ನು ಪ್ರತಿ ಲೀಟರ್‌ಗೆ 7 ರೂ.ಗಳನ್ನು ಹೆಚ್ಚಿಸಿರುವುದು ಸ್ವಾಗತಾರ್ಹ ಬೆಳವಣಿಗೆ ಎಂದು ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.

ನಗರದ ಚಿಮುಲ್ ಶಿಬಿರ ಕಚೇರಿ ನವೀಕರಿಸಿದ ಸಭಾಂಗಣದ ಉದ್ಘಾಟನೆ ನೆರವೇರಿಸಿ  ಮಾತನಾಡಿದ ಅವರು ಹಾಲು ಉತ್ಪಾದನೆಗೆ ತಗಲುತ್ತಿರುವ ವೆಚ್ಚಕ್ಕೂ, ಒಕ್ಕೂಟದಿಂದ ಸಿಗುತ್ತಿರುವ ದರಕ್ಕೂ ಸಾಕಷ್ಟು ವ್ಯತ್ಯಾಸವಿದ್ದು, ಬಹಳಷ್ಟು ರೈತರು ನಷ್ಟ ಅನುಭವಿಸಿ ತಮ್ಮ ಜಾನುವಾರುಗಳನ್ನು ಮಾರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು ಸರಕಾರ ಇದೀಗ ಲೀಟರ್ ಹಾಲಿಗೆ 7 ರೂ.ಗಳು ರೈತರಿಗೆ ನೀಡುತ್ತಿರುವುದು ಅಭಿನಂದನೀಯ ಎಂದು ಹೇಳಿದರು.

ಗ್ರಾಮೀಣ ಭಾಗದಲ್ಲಿ ಹೈನುಗಾರಿಕೆಯಲ್ಲಿ ಲಕ್ಷಾಂತರ ಕುಟುಂಬಗಳು ತೊಡಗಿಸಿ ಕೊಂಡು ಬದುಕನ್ನು ಕಟ್ಟಿಕೊಂಡಿದ್ದು ಹಾಲು ಉತ್ಪಾದಕರಿಗೆ ಹೆಚ್ಚಿನ ದರ ನೀಡುವ ನಿರ್ಧಾರ ಕೈಗೊಂಡಿರುವ ಸರಕಾರಕ್ಕೆ ಕ್ಷೇತ್ರದ ಜನರ ಹಾಗೂ ಹಾಲು ಉತ್ಪಾದಕರ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ರೈತರು ತಮ್ಮ ಗ್ರಾಮಗಳ ಡೇರಿಗಳಿಗೆ ಗುಣ ಮಟ್ಟದ ಹಾಲನ್ನು ಪೂರೈಸುವ ಮೂಲಕ ಒಕ್ಕೂಟದ ಶೇಯೋಭಿವೃದ್ಧಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ (ಚಿಮುಲ್) ಅಧ್ಯಕ್ಷ ಮಂಜುನಾಥರೆಡ್ಡಿ ಮಾತನಾಡಿ,ಗುಣಮಟ್ಟದ ಹಾಲು ಉತ್ಪಾದನೆ ಮಾಡಿದಾಗ ಮಾತ್ರ ಡೇರಿಗಳು ಸೇರಿದಂತೆ ಒಕ್ಕೂಟಗಳು ಉಳಿಯುತ್ತವೆ ಮುಂದಿನ ದಿನಗಳಲ್ಲಿ ಹೆಚ್ಚಿನ ಕೊಬ್ಬಿನಾಂಶ ಇರುವ ಹಾಲಿಗೆ ಮಾತ್ರ ಸರಕಾರದ ಪ್ರೋತ್ಸಾಹಧನ ಸಿಗುತ್ತದೆ ಎಂದರು.

ಗ್ರಾಹಕರು ನೀಡುತ್ತಿರುವ ಹಣಕ್ಕೆ ನ್ಯಾಯ ಒದಗಿಸಬೇಕಾದರೆ ಉತ್ಪಾದಕರು ಸಹ ಗುಣಮಟ್ಟದ ಹಾಲು ಉತ್ಪಾದನೆಗೆ ಹೆಚ್ಚು ಒತ್ತು ನೀಡಬೇಕು ಹಾಗಾಗಿ ಡೇರಿ ಕಾವ್ಯದರ್ಶಿಗಳು ಹಾಲು ಉತ್ಪಾದಕರಿಗೆ ಈ ಬಗ್ಗೆ ಮನವರಿಕೆ ಮಾಡಿಕೊಡುವ ಜತೆಗೆ ಗುಣಮಟ್ಟದ ಹಾಲು ಉತ್ಪಾದನೆ ಹಾಗೂ ಪೂರೈಕೆಗೆ ಮುಂದಾಗಬೇಕು ಎಂದು ಮನವಿ ಮಾಡಿದರು.

ಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ ಮಾತನಾಡಿ, ಶಿಬಿರ ಘಟಕದ ಸಭಾಂಗಣದ ನವೀಕರಣ ಮಾಡಿದ್ದೇವೆ ಮುಂದಿನ ದಿನಗಳಲ್ಲಿ ಜಂಗಮಕೋಟೆ ಹೋಬಳಿ ಭಾಗದಲ್ಲಿ ಶಿಬಿರ ಘಟಕ ನಿರ್ಮಾಣ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದರು.ಇದೇ ವೇಳೆ ಡೇರಿ ಕಾರ್ಯದರ್ಶಿಗಳಿಗೆ ಉಡುಗೊರೆ ನೀಡಲಾಯಿತು.

ಈ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ನಿರ್ದೇಶಕ ರಾದ ಕೆ.ವಿ.ನಾಗರಾಜ್, ಹುಜಗೂರು ರಾಮಯ್ಯ,ಆದಿನಾರಾಯಣರೆಡ್ಡಿ, ಆವಲಪ್ಪ, ದಿನೇಶ್,, ಕೃಷ್ಣಾರೆಡ್ಡಿ , ಸುಧಾ, ಸುಮಾ, ಎಂ.ಡಿ.ನಾಗೇಶ್,
ಪಿ.ಎಲ್.ಡಿ.ಬ್ಯಾಂಕ್ ಅದ್ಯಕ್ಷ ಸುರೇಶ್,ತಾಲ್ಲೂಕು ಪಂಚಾಯತಿ ಮಾಜಿ ಅದ್ಯಕ್ಷ ಕೆ.ಲಕ್ಷ್ಮಿನಾರಾಯಣರೆಡ್ಡಿ,
ಮುಖಂಡರಾದ ತಾದೂರು ರಘು ,
ಡಾ.ಧನಂಜಯರೆಡ್ಡಿ , ರಾಮಚಂದ್ರ, ಆರ್.ಎ‌.ಉಮೇಶ್,
ಆನೂರು ವಿಜಯೇಂದ್ರ,ಉಪವ್ಯವಸ್ಥಾಪಕ ಡಾ.ರವಿಕಿರಣ್ ,ವಿಸ್ತರಣಾದಿಕಾರಿ ಜಯಚಂದ್ರ, ಮುಂತಾದವರು ಹಾಜರಿದ್ದರು.

WhatsApp

Join Now

Telegram

Join Now

Instagram

Join Now