ವಿಜಯ ದರ್ಪಣ ನ್ಯೂಸ್……
ಬೆಳಕಿನ ಹಬ್ಬ. ದೀಪಾವಳಿ ಹಬ್ಬದ ಪ್ರಯುಕ್ತ ಹಸು ಎತ್ತುಗಳಿಗೆ ಕಿಚ್ಚು ಆಯಸಿ ಸಂಭ್ರಮಿಸಿದ ರೈತರು

ತಾಂಡವಪುರ ನವೆಂಬರ್ 11 ನಂಜನಗೂಡು ತಾಲೂಕು ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ. ಕನಕ ನಗರ ಗ್ರಾಮ. ಹಾಗೂ ಕಲ್ಕುಂದ ಗ್ರಾಮದಲ್ಲಿ. ಬೆಳಕಿನ ಹಬ್ಬ ದೀಪಾವಳಿ. ಹಬ್ಬದ ಅಂಗವಾಗಿ. ರೈತರು ತಮ್ಮ ರಾಸುಗಳಿಗೆ. ಬಗೆ ಬಗೆಯ ಬಣ್ಣವನ್ನು ಹಚ್ಚಿ ಹೂವಿನ ಅಲಂಕಾರ ಮಾಡಿ. ಗ್ರಾಮದ ಮುಂಭಾಗ ಅಂಕ ಇರುವ ಜಾಗದಲ್ಲಿ. ತಮ್ಮ ತಮ್ಮ ಹಸು ಎಮ್ಮೆ ಕರು. ಕುರಿ ಮೇಕೆ ಮುಂತಾದ ಹಸುಗಳಿಗೆ ಕಿಚ್ಚು ಆಯಿಸಿ ದೀಪಾವಳಿ ಹಬ್ಬವನ್ನು ಸಂಭ್ರಮಿಸಿದ ರೈತರು ಹಾಗೂ ಸುತ್ತೂರು ಗ್ರಾಮದಲ್ಲಿ. ಪುಟ್ಟ ಬಾಲಕರು. ಹೊಗೆ .. ಶಬ್ದ. ಪಟಾಕಿಗಳನ್ನು ಒಡೆಯದೆ. ಬಿಟ್ಟು. ಹೊಗೆ ರಹಿತವಾದ. ಬೆಳಕು ಬರುವ ಪದಾರ್ಥಗಳನ್ನು ಬಳಸಿ. ಮಾದರಿಯಾಗಿ. ದೀಪಾವಳಿ ಹಬ್ಬದ ದೀಪವನ್ನು ಬೆಳಗಿದರು..
ದುಬಾರಿ ಪಟಾಕಿಗೆ. ವಿದಾಯ ಹೇಳಿ. ಪರಿಸರ ಕಾಪಾಡುವಲ್ಲಿ. ಯಶಸ್ವಿಯಾಗಿ. ದೀಪಾವಳಿ ಬೆಳಕಿನ ಹಬ್ಬವನ್ನು. ಸಂಭ್ರಮದಿಂದ ಆಚರಿಸಲಾಯಿತು.
#############################
ಕಾಲನ ಲೀಲೆ
ಉತ್ಸಾಹ ಲಯ ಚೌಪದಿ

ಯಾರು ರಥವ ನಡೆಸುತಿಹರು
ಯಾರ ಪಯಣವೆಲ್ಲಿಗೆ
ದಾರಿ ಹೇಗೆ ತಿಳಿಯದವಗೆ
ತೀರ ಸಿಗುವುದೆಂದಿಗೆ
ಸಾಗಬೇಕು ಬಹಳ ದೂರ
ಮಾಗಿ ಮನವು ಮೆಲ್ಲಗೆ
ತೂಗುತಿರುವ ಕತ್ತಿಯಂಚು
ಬಾಗುತಿರುವ ಬಳ್ಳಿಗೆ
ಹಗಲು ರಾತ್ರಿ ಮರಳಿ ಹೊರಳಿ
ದಿಗಿಲ ತರಿಸಬಲ್ಲದೆ
ಮುಗಿಲು ರವಿಯ ಮರೆಯಮಾಡಿ
ಜಗವನಳಿಸ ಬಲ್ಲದೆ
ಇಂದು ನಿನ್ನೆ ನಾಳೆಯೊಳಗೆ
ಬಂಧ ಬೆಸುಗೆಯಿಲ್ಲಿದೆ
ಮುಂದೆ ಹಾದಿ ಕಾಣದವಗೆ
ಮಂದ ಬೆಳಕು ಚೆಲ್ಲಿದೆ
ಕಾಲ ಬರಲು ಕಾಯಬೇಕು
ಲೀಲೆಯವನದಲ್ಲವೆ
ಸೋಲಿನಲ್ಲು ವಿಜಯಗಾಥೆ
ಮಾಲೆ ಹಿಡಿವುದಲ್ಲವೆ
ರಾಧಿಕಾ ವಿಶ್ವನಾಥ್, ಮಡಿಕೇರಿ











