--Ads--

ಮುರುಡಗಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರತಿಭಾ ಕಾರಂಜಿ ಕಾರ್ಯಕ್ರಮ 

On: November 21, 2026 1:25 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ಮುರುಡಗಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರತಿಭಾ ಕಾರಂಜಿ ಕಾರ್ಯಕ್ರಮ 

ತಾಂಡವಪುರ ನವಂಬರ್ 21 ಮೈಸೂರ್ ತಾಲೂಕು ಉದ್ಬೂರ್ ಕ್ಲಸ್ಟರ್ ವ್ಯಾಪ್ತಿಗೆ ಬರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುರುಡಗಳ್ಳಿ ಶಾಲೆಯಲ್ಲಿ ಪ್ರತಿಭಾ ಕಾರಂಜಿ ಕಾರ್ಯಕ್ರಮ ಬಹಳ ಯಶಸ್ವಿಯಾಗಿ ನಡೆಯಿತು

ಕಾರ್ಯಕ್ರಮ ಉದ್ಘಾಟಿಸಿದ ಸಮಾಜ ಸೇವಕರಾದ ಶ್ರೀಕಾಂತ್ ರವರು ಮಾತನಾಡುತ್ತ ಮಕ್ಕಳಲ್ಲಿ ಅಡಗಿರುವ ಸೂಪ್ತವಾದ ಪ್ರತಿಭೆಯನ್ನು ಹೊರ ತರುವುದೇ ಪ್ರತಿಭಾ ಕಾರಂಜಿಯ ಮುಖ್ಯಉದ್ದೇಶ ಎಂದು ಹೇಳಿದರು

ಮುಖ್ಯ ಅತಿಥಿಯಾಗಿ ಆಗಮಿಸಿದ ಮೈಸೂರು ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಮಾಲೇಗೌಡ ಮಾತನಾಡುತ್ತ ಪ್ರತಿಭೆ ಯಾರ ಸ್ವತ್ತಲ್ಲ ಅದು ಸಾಧಕನ ಸ್ವತು ಆದ್ದರಿಂದ ಮಕ್ಕಳಿಗೆ ತಮ್ಮ ಪ್ರತಿಭಾ ಪ್ರದರ್ಶನಕ್ಕೆ ಸೂಕ್ತ ವೇದಿಕೆ ಇಂತಹ ಕಾರ್ಯಕ್ರಮಗಳಿಂದ ಸಾಧ್ಯ ಎಂದರು ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿಗಳಾದ ಗೀತ ರವರು ಮಾತನಾಡುತ್ತ ಸರ್ಕಾರಿ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸೋ ಮೂಲಕ ಉತ್ತಮ ಶಿಕ್ಷಣ ತಮ್ಮ ಮಕ್ಕಳಿಗೆ ಕೊಡಿಸಿ ನಮ್ಮ ಸರ್ಕಾರಿ ಶಾಲೆಯಲ್ಲಿ ಎಲ್ ಕೆ ಜಿ ಎಂದರೆ ಇಂಗ್ಲಿಷ್ ಶಿಕ್ಷಣ ಪ್ರಾರಂಭವಾಗಿದ್ದು ನಮ್ಮ ಶಾಲೆಗಳು ಕೂಡ ಖಾಸಗಿ ಶಾಲೆಗಿಂತ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದ್ದೇವೆ ಎಂದು ಹೇಳಿದರು

ತಾಲ್ಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಸುಮತಿ ಮಕ್ಕಳನ್ನು ಕುರಿತು ಮಾತನಾಡಿದರು ಸಮಾರಂಭದಲ್ಲಿ SDMC ಅಧ್ಯಕ್ಷರಾದ ಮಹದೇವಸ್ವಾಮಿಯವರು ಗ್ರಾಮ ಪಂಚಾಯತಿ ಮಾಜಿ ಸದಸ್ಯ ಚಾಮುಂಡಯ್ಯ ನವರು ನಾಗರಾಜು ರವರು ಬಸವರಾಜು ರವರು PLD ಬ್ಯಾಂಕಿನ ಮಾಜಿ ಅಧ್ಯಕ್ಷ ನಾಗರಾಜು ರವರು ಮುಖಂಡರಾದ ದೊಡ್ಡೇಗೌಡ್ರು ಕೆಂಚೇಗೌಡ್ರು ಸಿದ್ದಪಾಜಿ ಯವರು ಕುಮಾರ್ ಮಂಜು ರವರು ನಟರಾಜ್ ರವರು ಮೂರ್ತಿರವರು ಸಿದ್ದಪ್ಪ ರವರು ಮಲ್ಲೇಶ್ ಯುವ ಮುಖಂಡ ಸತೀಶ್ ಶಿಕ್ಷಕರ ಸಂಘದ ಉಪಾಧ್ಯಕ್ಷರಾದ ಶಿವಪ್ಪನವರು ಸಹ ಕಾರ್ಯದರ್ಶಿ ಜಿ.ಜೆ ಪ್ರಕಾಶ್ ಮುಖ್ಯ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಶಿವಲಿಂಗರಾಜು ಪೋಷಕರು ಗ್ರಾಮಸ್ಥರು ಹಾಜರಿದ್ದರು

ಕಾರ್ಯಕ್ರಮದಲ್ಲಿ ಜ್ಯೂನಿಯರ್ ಪುನೀತ್ ರಾಜ್‍ಕುಮಾರ್ ಭಾಗವಹಿಸಿ ಮಕ್ಕಳನ್ನು ರಂಜಿಸಿದರು

ಕಾರ್ಯಕ್ರಮದ ಸ್ವಾಗತವನ್ನು ಮುಖ್ಯ ಶಿಕ್ಷಕ ಕೆಂಚೇಗೌಡ ಮಾಡಿದರು ನಿರೂಪಣೆಯನ್ನು CRP ಯವರಾದ ಅನಿತ ರವರು ಮಾಡಿದರು ಕ್ಲಸ್ಟರ್ ನ ವಿವಿಧ ಶಾಲೆಯಿಂದ ಆಗಮಿಸಿದ ಮಕ್ಕಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮ ದಲ್ಲಿ ಮುರುಡಗಳ್ಳಿ ಶಾಲೆಯ ಶಿಕ್ಷಕರಾದ ಪುಷ್ಪಲತ ಶೃತಿ ಕ್ಲಸ್ಟರ್ ನ ವಿವಿಧ ಶಾಲೆಗಳ ಮುಖ್ಯ ಶಿಕ್ಷಕರು ಸಹಶಿಕ್ಷಕರು ಪೋಷಕರು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು

WhatsApp

Join Now

Telegram

Join Now

Instagram

Join Now

ಇದನ್ನೂ ಓದಿ

 ಕೆ.ಆರ್. ರಾಚಯ್ಯ ನವರು ರಚಿಸಿರುವ “ಸಮಾನತೆಯ ಹರಿಕಾರ ಶ್ರೀ ರಾಮಾನುಜಾಚಾರ್ಯ” ಕೃತಿ ಲೋಕಾರ್ಪಣೆ 

ನವೆಂಬರ್ 26ರಂದು ಮೈಸೂರಿನಲ್ಲಿ ನಡೆಯುವ ಸಂವಿಧಾನ ದಿನಾಚರಣೆ ಸಿದ್ಧತೆಗಳ ಕುರಿತು ಸಿದ್ದರಾಮಯ್ಯ ನವರ ಸಮ್ಮುಖದಲ್ಲಿ ಪೂರ್ವಭಾವಿ ಸಭೆ 

ಜ.3ರಿಂದ ಎಲ್ಲ ಜಿಲ್ಲೆಗಳಲ್ಲಿ ಫ.ಗು.ಹಳಕಟ್ಟಿ ಜೀವನ-ಸಾಧನೆ ಅಭಿಯಾನ ಕಾರ್ಯಕ್ರಮ: ಸಚಿವ ಎಂ ಬಿ ಪಾಟೀಲ

ಕೇಂದ್ರದ ಅನುದಾನದ ಬಗ್ಗೆ ಸುಳ್ಳು ಆರೋಪ ಮಾಡುವ ಬದಲು ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ನಡೆಸಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ್

ಎಚಗಳ್ಳಿ ಪ್ರಾಥಮಿಕ ಕೃಷಿ ಸಹಕಾರ ಪತ್ತಿನ ಸಂಘದ ಅಧ್ಯಕ್ಷರಾಗಿ ಗಾಯತ್ರಿ ಹಾಗೂ ಉಪಾಧ್ಯಕ್ಷರಾಗಿ ತಮ್ಮಣ್ಣ ಆಯ್ಕೆ

ಬುಡಕಟ್ಟು ಸಮುದಾಯದ ಹಕ್ಕು, ಅಸ್ಮಿತೆಗೆ ಹೋರಾಡಿದ ನಾಯಕ ಭಗವಾನ್ ಬಿರ್ಸಾ ಮುಂಡಾ : ಸಚಿವ ಡಾ ಯತೀಂದ್ರ ಸಿದ್ದರಾಮಯ್ಯ