ವಿಜಯ ದರ್ಪಣ ನ್ಯೂಸ್….
ಅಕ್ಷಯಾ–ವಿನಾಯಕ ವಿವಾಹ ಸಂಭ್ರಮ: ವಿಶಿಷ್ಟ ಬೈಕ್ ರ‍್ಯಾಲಿ ಆಯೋಜನೆ

ಬೆಂಗಳೂರು: ಅಕ್ಷಯಾ ಜಿ.ಎಚ್. ರೆಡ್ಡಿ ಹಾಗೂ ವಿನಾಯಕ ವಿ. ರೆಡ್ಡಿ ಅವರ ವಿವಾಹ ಮಹೋತ್ಸವದ ಅಂಗವಾಗಿ ವಿಶಿಷ್ಟ ಬೈಕ್ ರ‍್ಯಾಲಿಯನ್ನು ಆಯೋಜಿಸಲಾಗಿತ್ತು. ಸಾಮಾನ್ಯವಾಗಿ ವಿವಾಹ ಸಮಾರಂಭಗಳಲ್ಲಿ ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವುದು ವಾಡಿಕೆ. ಆದರೆ, ಮದುವೆಯ ಸಂಭ್ರಮಕ್ಕೆ ಬೈಕ್ ರ‍್ಯಾಲಿಯನ್ನು ಸೇರಿಸಿರುವುದು ಅಪರೂಪದ ಹಾಗೂ ವಿನೂತನ ಪ್ರಯತ್ನವಾಗಿದೆ.

ನವೆಂಬರ್ 21ರಂದು ಬೆಳಿಗ್ಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿರುವ ಗಾಯತ್ರಿ ಗ್ರ್ಯಾಂಡ್‌ನಲ್ಲಿ ಈ ಬೈಕ್ ರ್ಯಾಲಿ ನಡೆಯಿತು. ಆರತಕ್ಷತೆ ಖ್ಯಾತ ಗಾಯಕ ಸಂಜೆ ಆರತಕ್ಷತೆ ವೇಳೆ, ರಾಜೇಶ್ ಕೃಷ್ಣನ್ ಮತ್ತು ತಂಡದಿಂದ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿದೆ. ನವೆಂಬರ್ 22ರಂದು ಬೆಳಿಗ್ಗೆ 9.30ರಿಂದ 10.30ರವರೆಗೆ ಶುಭ ಮುಹೂರ್ತದಲ್ಲಿ ವಿವಾಹ ನೆರವೇರಲಿದೆ.

ಡಾ. ಕೆ.ಜೆ. ಪುರುಷೋತ್ತಮ ಹಾಗೂ Narendra babu ಅವರ ಕುಟುಂಬದವರು ಬಂಧುಮಿತ್ರರು ಮತ್ತು ಹಿತೈಷಿಗಳನ್ನು ಬರಮಾಡಿಕೊಂಡರು.ಬೈಕ್ ರ‍್ಯಾಲಿಯ ಮೂಲಕ ವಿವಾಹ ಸಂಭ್ರಮಕ್ಕೆ ಹೊಸ ಮೆರುಗು ನೀಡಿರುವುದು ವಿಶೇಷ ಆಕರ್ಷಣೆಯಾಗಿದೆ.










