ವಿಜಯ ದರ್ಪಣ ನ್ಯೂಸ್……
ಕರ್ನಾಟಕ ರಾಜ್ಯ ಕಾಂಟ್ರಾಕ್ಟರ್ಸ್ ಅಸೋಸಿಯೇಷನ್ ಆರ್.ಮಂಜುನಾಥ್ ಅಧಿಕಾರ ದುರ್ಬಳಕೆ, ಸ್ವಜನ ಪಕ್ಷಪಾತ -ಗಂಭೀರ ಅರೋಪ ಮಾಡಿದ ಮಾಜಿ ಅಧ್ಯಕ್ಷ ಜಗನ್ನಾಥ್ ಜಿ.ಶೇಗಜಿ

ಬೆಂಗಳೂರು ಪ್ರೆಸ್ ಕ್ಲಬ್: ಕರ್ನಾಟಕ ರಾಜ್ಯ ಕಾಂಟ್ರಾಕ್ಟರ್ಸ್ ಅಸೋಸಿಯೇಷನ್ ಅಧ್ಯಕ್ಷರಾದ ಆರ್.ಮಂಜುನಾಥ್ ಅವರು ಗುತ್ತಿಗೆದಾರರಿಗೆ ಸುಳ್ಳು ಹೇಳಿ ದಾರಿ ತಪ್ಪಿಸುವ ಕೆಲಸ, ಸಂಘದಲ್ಲಿ ಅನಧಿಕೃತ ನಿರ್ದೇಶಕ ನೇಮಕ, ಕಾರ್ಯಾದೇಶ ಪತ್ರ ನೀಡಲು ಶೇಕಡ 5ರಷ್ಟು ಲಂಚಕ್ಕೆ ಹುಮಕ್ಕು, ಭ್ರಷ್ಟಾಚಾರ, ಅಧಿಕಾರ ದುರ್ಬಳಕೆ ಖಂಡಿಸಿ ಮಾಜಿ ಅಧ್ಯಕ್ಷರಾದ ಜಗನ್ನಾಥ್ ಜಿ.ಶೇಗಜಿ ರವರು ಮಾಧ್ಯಮಗೋಷ್ಠಿ ಏರ್ಪಡಿಸಿದ್ದರು.
ಕಳೆದ 40ವರ್ಷಗಳಿಂದ ಗುತ್ತಿಗೆದಾರರ ಸಂಘ ನಡೆಯುತ್ತಿದೆ ಅದರೆ ಇಂದು ಸಂಘದ ಹಾಲಿ ಅಧ್ಯಕ್ಷರ ನಡೆಯಿಂದ ಗುತ್ತಿಗೆದಾರರು ಸಂಕಷ್ಟ ಅನುಭವಿಸುವ ಪರಿಸ್ಥಿತಿ ಬಂದಿದೆ. ಕಲ್ಯಾಣಪಥ ಯೋಜನೆಯಲ್ಲಿ 1000ಕೋಟಿ 42ಟೆಂಡರ್ ಬಂದಿದೆ ಅದರಲ್ಲಿ 100ಕೋಟಿ ಟೆಂಡರ್ ಪಡೆದಿರುವ ಆರ್.ಮಂಜುನಾಥ್ ಸಂಘದ ಸದಸ್ಯರಿಗೆ ಹಂಚಿ ಎಂದರೆ ತಮ್ಮ ಸ್ವಂತ ಮತ್ತು ರಾಯಚೂರು, ಮೈಸೂರು ಜಿಲ್ಲೆಯ ಗುತ್ತಿಗೆದಾರರಿಗೆ ನೀಡಲು ಬಯಸಿದ್ದಾರೆ.
ಕರ್ನಾಟಕ ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಮಲ್ಲಿಕಾರ್ಜುನ್ ಖರ್ಗೆ, ಪ್ರಿಯಾಂಕ ಖರ್ಗೆರವರ ಸಹಕಾರದಿಂದ ಪ್ರಗತಿಪಥ ಎಂಬ ಹೆಸರಿನಲ್ಲಿ 5000ಕೋಟಿಯ 350ಟೆಂಡರ್ ರಾಜ್ಯಕ್ಕೆ ಬಂದಿದೆ ಇದಕ್ಕೆ ಆರ್.ಮಂಜುನಾಥ್ ಅಡ್ಡಗಾಲು ಹಾಕುತ್ತಿದ್ದಾರೆ. ಒಂದು ರೂಪಾಯಿ ಖರ್ಚಿಲ್ಲಿದೇ ಟೆಂಡರ್ ಗುತ್ತಿಗೆದಾರರಿಗೆ ಸಿಗಬೇಕು ಎಂಬುದು ನನ್ನ ಆಶಯ ಕಳೆದ ಮೂರು ತಿಂಗಳಿಂದ ಸಿಇಓ ಬಳಿ ಕಾರ್ಯಾದೇಶಕ್ಕಾಗಿ ಕಾಯುತ್ತಿದ್ದಾರೆ ಇದರಲ್ಲಿ ಶೇಕಡ 5ರಷ್ಟು ಕಮಿಷನ್ ನೀಡಬೇಕು ಎಂದು ಆರ್.ಮಂಜುನಾಥ್ ರವರು ಕುಮಕ್ಕು ನೀಡುತ್ತಿದ್ದಾರೆ.
ಸಂಘದಲ್ಲಿ ಬೈಲಾ ಪ್ರಕಾರ 66ಜನ ನಿರ್ದೇಶಕರು ಇರುತ್ತಾರೆ ಬೈಲಾ ಪ್ರಕಾರ 22ಮ್ಯಾನೇಜಿಂಗ್ ಕಮಿಟಿ ಸದಸ್ಯರು ಇರಬೇಕೆಂದು ಬೈಲಾ ಪ್ರಕಾರ ಇರುತ್ತದೆ. ಅನಧಿಕೃತವಾಗಿ ಸುಮಾರು 38ಜನರನ್ನು ನೇಮಕ ಮಾಡಿಕೊಂಡದ್ದಾರೆ.

ಗುತ್ತಿದಾರರಿಗೆ ಸಹಾಯ ಮಾಡು ಎಂದರೆ ನನ್ನ ಬಳಿಯಿಂದ 5ಲಕ್ಷ ಪಡೆದಿರುತ್ತಾರೆ.
ಸಂಘವನ್ನು ಒಂದು ರಾಜಕೀಯ ಪಕ್ಷ ಬೆಂಬಲಿಸುತ್ತಿದ್ದಾರೆ. ಆರೋಗ್ಯ ಇಲಾಖೆ 2.50ಕೋಟಿ ಸಮಾವೇಶ ಹೆಸರಿನಲ್ಲಿ ಅಕೌಂಟ್ ಗೆ ಜಮೆ ಮಾಡಿಲ್ಲ.
ಇದರ ಕುರಿತು ಹೇಳಿದ ಸದಸ್ಯರನ್ನ ತೆಗೆದು ಹಾಕಿದ್ದಾರೆ.
ಭವ್ಯವಾದ ಕಟ್ಟಡ ನಿರ್ಮಾಣದಲ್ಲಿ 2ಕೋಟಿ ಕಾಮಗಾರಿ ಟೆಂಡರ್ ಕರೆಯದೇ ಪರವಾನಗಿ ಕೊಟ್ಟಿದ್ದಾರೆ. ಆರ್.ಮಂಜುನಾಥ್ ಹೇಳುತ್ತಾರೆ 70ಶಾಸಕರು ಲಂಚ ತಿನ್ನುವವರು ಹೆಸರು ಕೇಳುತ್ತೇನೆ ಎಂದು ಹೇಳಿದ್ದರು ಇದುವರಗೆ ಬಹಿರಂಗಪಡಿಸಿಲ್ಲ ಇದು ಬ್ಲಾಕ್ ಮೇಲ್ ತಂತ್ರವಾಗಿದೆ. ಇದರ ಕುರಿತು ಕೊಡಲೇ ತನಿಖೆಯಾಗಬೇಕು ಎಂದು ಒತ್ತಾಯಿಸುತ್ತಿದ್ದೇನೆ ಎಂದು ಹೇಳಿದರು.









