--Ads--

ಆಟೋ ಚಾಲಕರ ಸೇವೆ, ಒಗ್ಗಟ್ಟು ಹೀಗೆಯೇ ಮುಂದುವರಿಯಲಿ: ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ

On: November 28, 2026 2:59 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ಜೈ ಭುವನೇಶ್ವರಿ ಆಟೋ ಚಾಲಕರ ಮತ್ತು ಮಾಲೀಕರ ಸಂಘದಿಂದ ಅದ್ಧೂರಿ ಕನ್ನಡ ರಾಜ್ಯೋತ್ಸವ ಆಚರಣೆ

ಆಟೋ ಚಾಲಕರ ಸೇವೆ, ಒಗ್ಗಟ್ಟು ಹೀಗೆಯೇ ಮುಂದುವರಿಯಲಿ : ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ

​

ದೇವನಹಳ್ಳಿ: ಪಟ್ಟಣದ ಆಕಾಶ್ ಆಸ್ಪತ್ರೆ ಬಳಿಯಿರುವ ಜೈ ಭುವನೇಶ್ವರಿ ಆಟೋ ಚಾಲಕರ ಮತ್ತು ಮಾಲೀಕರ ಸಂಘ (ರಿ.) ವತಿಯಿಂದ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಹಾಗೂ ತಾಯಿ ಭುವನೇಶ್ವರಿ ದೇವಿಯ ಪೂಜಾ ಕಾರ್ಯಕ್ರಮದಲ್ಲಿ ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಅವರು ಭಾಗವಹಿಸಿ ಶುಭ ಕೋರಿದರು.
​ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಶಾಸಕರು, “ಕನ್ನಡ ನಾಡು, ನುಡಿ ಹಾಗೂ ಸಂಸ್ಕೃತಿಯನ್ನು ಗೌರವಿಸಿ ಅತ್ಯಂತ ಸಡಗರದಿಂದ ರಾಜ್ಯೋತ್ಸವವನ್ನು ಸಂಭ್ರಮಿಸುತ್ತಿರುವ ನಮ್ಮ ಶ್ರಮಜೀವಿ ಆಟೋ ಚಾಲಕ ಹಾಗೂ ಮಾಲೀಕ ಮಿತ್ರರಿಗೆ ಹಾರ್ದಿಕ ಅಭಿನಂದನೆಗಳು. ಸಮಾಜಕ್ಕೆ ನಿಮ್ಮೆಲ್ಲರ ಸೇವೆ, ಶ್ರಮ ಮತ್ತು ಒಗ್ಗಟ್ಟು ಹೀಗೆಯೇ ಸದಾ ಕಾಲ ಮುಂದುವರಿಯಲಿ ಎಂದು ಹಾರೈಸುತ್ತೇನೆ” ಎಂದರು.
​ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕು ಉಪಾಧ್ಯಕ್ಷ ಎಸ್. ನಾಗೇಶ್, ಮುಖಂಡರಾದ ವಿಜಯ್ ಕುಮಾರ್, ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಪದಾಧಿಕಾರಿಗಳಾದ ಜಗದೀಶ್, ವೆಂಕಟೇಶ್, ರಾಜಶೇಖರ್, ರಾಜಣ್ಣ ಸೇರಿದಂತೆ ಸಂಘದ ಸದಸ್ಯರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

WhatsApp

Join Now

Telegram

Join Now

Instagram

Join Now