--Ads--

ಕೈಲ್ ಪೊಳ್ದ್ ಕ್ರೀಡಾಕೂಟಗಳು ನಮ್ಮ ಪಾರಂಪರಿಕತೆಯ ಪ್ರತಿಬಿಂಬ:ತೆನ್ನಿರ ಮೈನಾ ಬಣ್ಣನೆ.

On: November 4, 2024 6:13 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…

ಕೈಲ್ ಪೊಳ್ದ್ ಕ್ರೀಡಾಕೂಟಗಳು ನಮ್ಮ ಪಾರಂಪರಿಕತೆಯ ಪ್ರತಿಬಿಂಬ:ತೆನ್ನಿರ ಮೈನಾ ಬಣ್ಣನೆ.

ಮಡಿಕೇರಿ : ಕೊಡಗಿನಲ್ಲಿ ನಡೆಯವ ಕೈಲ್ ಪೊಳ್ದ್ ಕ್ರೀಡಾವಕೂಟಗಳು ನಮ್ಮ ಪಾರಂಪರಿಕ ವೈಭವದ ಪ್ರತಿಬಿಂಬವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ತೆನ್ನಿರ ಮೈನಾ ಬಣ್ಣಿಸಿದ್ದಾರೆ‌.

ಮಡಿಕೇರಿ ತಾಲ್ಲೂಕಿನ ಅರ್ವತ್ತೋಕ್ಲು ಗ್ರಾಮದ ಜಬ್ಬಂಡ ವಾಡೆಯಲ್ಲಿ ಎ.ಕೆ.ಸಿ ಸಂಸ್ಥೆ ಆಯೋಜಿಸಿದ ಸಾಂಪ್ರದಾಯಿಕ ಕ್ರೀಡಾ ಕೂಟದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು ನಮ್ಮ ಹಿರಿಯರು ನಮ್ಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಉಳಿಸುವ ಮತ್ತು ಬೆಳೆಸುವ ನಿಟ್ಟಿನಲ್ಲಿ ಕೈಲ್ ಪೊಳ್ದ್ ಕ್ರೀಡಾಕೂಟಗಳನ್ನು ಪ್ರತಿ ಗ್ರಾಮಗಳಲ್ಲಿ ನಡೆಸುವ ಮೂಲಕ ಭವ್ಯ ಪರಂಪರೆಯನ್ನು ಬಳುವಳಿಯಾಗಿ ನೀಡಿದ್ದು ಅದನ್ನು ನಾವು ಪಾಲಿಸಲು ಬದ್ದರಾಗಿರಬೇಕು ಎಂದು ಕರೆ ನೀಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಗ್ರಾಮದ ಹಿರಿಯರು ಹಾಗೂ ನಿವೃತ್ತ ಬೆಮೆಲ್ ಆಡಳಿತಾಧಿಕಾರಿ ಕೋಳುಮಾಡಂಡ ರಘು ಪೂವಪ್ಪ ನವರು ಮಾತನಾಡಿ ತಾವು ಬಾಲಕರಾಗಿದ್ದಾಗ ಮಂದ್ ನಲ್ಲಿ ಕೈಲ್ ಪೋಳ್ದ್ ಕಾರ್ಯಕ್ರಮಗಳು ಅರ್ಥಪೂರ್ಣವಾಗಿ ನಡೆಯುತ್ತಿದ್ದು, ಈಗಲೂ ಕೂಡ ಯುವ ಸಮೂಹ ಆ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಮ್ಮ ಸಂಪ್ರದಾಯಗಳನ್ನು, ಆಚರಣೆಗಳನ್ನು ಆಚರಿಸಿ ಇತರರ ಆಚರಣೆಗಳನ್ನು ಗೌರವಿಸಬೇಕು ಎಂದು ಕಿವಿ ಮಾತು ಹೇಳಿದರು.

ಪ್ರಾಸ್ತವಿಕವಾಗಿ ಮಾತನಾಡಿದ ಕೊಡವ ಸಾಹಿತ್ಯ ಅಕಾಡಮಿಯ ಮಾಜಿ ಸದಸ್ಯ ತೆನ್ನಿರ ರಮೇಶ್ ಪೊನ್ನಪ್ಪ ನವರು ಕ್ರೀಡಾ ಕೂಟದ ಆಯೋಜನೆಗೆ ಗ್ರಾಮದ ಜನತೆ ಸಂಪೂರ್ಣವಾಗಿ ಸಹಕಾರ ನೀಡಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ವಿಜೃಂಭಣೆಯಿಂದ ನಡೆಸಲು ಉತ್ತೇಜನ ನೀಡಿದಂತಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮ ನಿರೂಪಿಸಿ ಮಾತನಾಡಿದ ಚೆರುಮಾಡಂಡ ಸತೀಶ್ ಸೋಮಣ್ಣ ನವರು ಕ್ರೀಡಾ ಕೂಟದ ಯಶಸ್ವಿಗೆ ಸಮಿತಿಯ ಎಲ್ಲಾ ಸದಸ್ಯರು ಶ್ರಮ ವಹಿಸಿದ್ದು ಅವರಿಗೆ ಆಭಾರಿಯಾಗಿದ್ದೇವೆ ಎಂದು ತಿಳಿಸಿದರು.

ಸಭಾ ಕಾರ್ಯಕ್ರಮಕ್ಕೂ ಮೊದಲು ಒಂಟಿ ಗುಂಡು ಹಾರಿಸುವ ಮೂಲಕ ಮಂದ್ ಮರಿಯುವ ಆಚರಣೆ ಮಾಡಲಾಯಿತು. ನಂತರ ವಿವಿಧ ಕ್ರೀಡಾ ಕೂಟಗಳು ಜರುಗಿದವು.

ಪುಟ್ಟ ಮಕ್ಕಳಿಂದ ವಯೋವೃದ್ದರವರೆಗೆ ವಿವಿಧ ವಿಭಾಗಗಳಲ್ಲಿ ಸ್ಪರ್ಧೆ ಏರ್ಪಡಿಸಲಾಗಿತ್ತು.
ತೆಂಗಿನ ಕಾಯಿಗೆ ಗುಂಡು ಹಾರಿಸುವುದು,
ಮೆರೆಥಾನ್,ಹಗ್ಗ ಜಗ್ಗಾಟ,ಭಾರದ ಗುಂಡು ಎಸೆತ,ಕಣ್ಣಿಗೆ ಬಟ್ಟೆ ಕಟ್ಟಿ ಮಡಿಕೆ ಒಡೆಯುವುದು,ಕಾಳು ಹೆಕ್ಕುವುದು ,
100 ಮೀ ಓಟ,ವಾಲಗತ್ತಾಟ್ ಸೇರಿದಂತೆ ಸುಮಾರು ಐವತ್ತಕ್ಕೂ ಅಧಿಕ ಸ್ಪರ್ಧೆಯಲ್ಲಿ ಗ್ರಾಮಸ್ಥರು ಉತ್ಸಾಹದಿಂದ ಪಾಲ್ಗೊಂಡು ಸಂಭ್ರಮಿಸಿದರು.

ಪ್ರಮುಖರಾದ ಮುಂಜಾಂದಿರ ಸತ್ಯ ಬೋಪಯ್ಯ,
ಕೋಳುಮಾಡಂಡ ಉಷಾ ಉತ್ತಪ್ಪ,ಜಬ್ಬಂಡ ರಾಜೀವ್ ಬೋಪಣ್ಣ, ಕೋಳುಮಾಡಂಡ ಕಿರಣ್ ಸೇರಿದಂತೆ ಸಂಸ್ಥೆಯ ಪದಾಧಿಕಾರಿಗಳು ಕಾರ್ಯಕ್ರಮದ ಜವಾಬ್ದಾರಿ ನಿಭಾಯಿಸಿದರು.

WhatsApp

Join Now

Telegram

Join Now

Instagram

Join Now