ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌದರಿ ಅವರನ್ನು ಸನ್ಮಾನಿಸಿದ ಸಮಾಜ ಸೇವಕರು

ವಿಜಯ ದರ್ಪಣ ನ್ಯೂಸ್….

ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌದರಿ ಅವರನ್ನು ಸನ್ಮಾನಿಸಿದ ಸಮಾಜ ಸೇವಕರು

ತಾಂಡವಪುರ: ಏಪ್ರಿಲ್ 29 ಮೈಸೂರು ಜಿಲ್ಲಾ ಪ್ರವಾಸದಲ್ಲಿದ್ದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷ ಡಾಕ್ಟರ್ ನಾಗಲಕ್ಷ್ಮಿ ಚೌದರಿ ಅವರನ್ನು ಸಮಾಜ ಸೇವಕರು ಕನಕದಾಸರ ಭಾವಚಿತ್ರವನ್ನು ನೀಡಿ ಸನ್ಮಾನಿಸಿ ಗೌರವಿಸಿದರು.

ಡಾ‌ ನಾಗಲಕ್ಷ್ಮಿ ಚೌಧರಿ ರವರು ಮೈಸೂರು ಜಿಲ್ಲಾ ಪ್ರವಾಸದ ಸಂದರ್ಭದಲ್ಲಿ ಅನಿವಾಸಿ ಭಾರತೀಯ ಹಾಗೂ ಸಮಾಜಸೇವಕ ರವಿ ಮಹಾದೇವ ಸೌದಿ ಅರೇಬಿಯಾ ಇವರ ಖಾಸಗಿನಿವಾಸಕ್ಕೆ ಸೌಜನ್ಯ ಭೇಟಿಮಾಡಿ ಗೌರವ ಸನ್ಮಾನ ಸ್ವೀಕರಿಸಿದರು. ಬಳಿಕ ಸಮಾಜ ಸೇವಕ ರವಿ ಮಹದೇವ್ ಹಾಗೂ ಚಂದ್ರು ಅವರ ಕುಟುಂಬದ ಜೊತೆ ಸುಮಾರು ಹೊತ್ತು ಮಾತುಕತೆ ನಡೆಸಿ ಉಭಯ ಕುಶಲೋಪರಿಯನ್ನು ಹಂಚಿಕೊಂಡರು

ಈ ಸಂದರ್ಭದಲ್ಲಿ ಮಹದೇವ್ ಚಂದ್ರು ಕಮಲರಾಜ್ ಪ್ರತೀಕ್ ಸೇರಿದಂತೆ ಮುಂತಾದವರು ಹಾಜರಿದ್ದರು