ಅಧಿಕಾರಿಗಳ ನಿರ್ಲಕ್ಷದಿಂದ ಮಕ್ಕಳಿಗೆ ಪೋಷಕರಿಂದಲೇ ಸನ್ಮಾನ

ವಿಜಯ ದರ್ಪಣ ನ್ಯೂಸ್….

ಅಧಿಕಾರಿಗಳ ನಿರ್ಲಕ್ಷದಿಂದ ಮಕ್ಕಳಿಗೆ ಪೋಷಕರಿಂದಲೇ ಸನ್ಮಾನ

ಶಿಡ್ಲಘಟ್ಟ :   ನಿರ್ಲಕ್ಷ್ಯದಿಂದ ನಾವು ನಮ್ಮ ಕೈಯಲ್ಲಿಯೇ ಮಕ್ಕಳಿಗೆ ಶಾಲು, ಹಾರ ನೀಡಿ ಪುರಸ್ಕಾರ ಮಾಡಬೇಕಾಯಿತು ಅಧಿಕಾರಿಗಳು ಹಾಗು ಶಾಸಕರು ಸಹ ಹಾಜರಾಗದೇ ಜಯಂತೋತ್ಸವವನ್ನು ಕಡೆಗಣಿಸಿದ್ದಾರೆ ಹಲವಾರು ಜಯಂತಿಗಳಲ್ಲಿ ಪಾಲ್ಗೊಳ್ಳುವ ಜನಪ್ರತಿನಿಧಿಗಳು ಈ ಕಾರ್ಯಕ್ರಮವನ್ನು ಬದಿಗೊತ್ತಿದ್ದಾರೆ ಎಂದುತಾಲ್ಲೂಕು ಬ್ರಾಹ್ಮಣ ಯುವಕ ಸಂಘದ ಅಧ್ಯಕ್ಷ ಎನ್.ಜಿ. ಮಂಜುನಾಥ್ ತಿಳಿಸಿದರು.

ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗೈರುಹಾಜರಿನಿಂದ ಸಮುದಾಯದ ಮುಖಂಡರು ಅಸಹನೆ ವ್ಯಕ್ತಪಡಿಸಿದರು ಪೂಜೆಗಾಗಿ ದೇವಸ್ಥಾನಕ್ಕೆ ತೆರಳಬೇಕಿದ್ದ ಅವರು ಕಾರ್ಯಕ್ರಮದ ವಿಳಂಬದಿಂದ ಕಾದು ಕುಳಿತ ಪ್ರಹಸನ ನಡೆಯಿತು.

ಜಯಂತ್ಯುತ್ಸವದ ಆಯೋಜನೆಗೆ ಜವಾಬ್ದಾರಿ ನೀಡಿದ್ದ ತಹಶೀಲ್ದಾ‌ರ್ ಅವರು ತುರ್ತು ಸಭೆಯಲ್ಲಿ ನಿರತರಾಗಿದ್ದ ಕಾರಣ, ತಾಲ್ಲೂಕು ಪಂಚಾಯಿತಿ ಇಒ ಅವರಿಗೆ ಹೊಣೆ ವಹಿಸಲಾಗಿದೆ ಆದರೆ ಅವರು ಕೂಡ ಕಾರ್ಯಕ್ರಮಕ್ಕೆ ಹಾಜರಾಗದೇ ನಿರ್ಲಕ್ಷ್ಯ ತೋರಿದುದರಿಂದ, ಅನೇಕ ಇಲಾಖೆಗಳ ಅಧಿಕಾರಿಗಳಿಲ್ಲದ ಪರಿಸ್ಥಿತಿ ನಿರ್ಮಾಣವಾಯಿತು.

ತಾಲ್ಲೂಕಿನಲ್ಲಿ ನಡೆದ ಶ್ರೀ ಶಂಕರಾಚಾರ್ಯ
ಜಯಂತೋತ್ಸವವು ಆಡಳಿತದ ನಿರ್ಲಕ್ಷ್ಯ ಮತ್ತು ಅನುಪಸ್ಥಿತಿಯಿಂದ ಅಸಮಾಧಾನದ ವಾತಾವರಣ ನಿರ್ಮಾಣವಾಗಿತ್ತು.

ಕೊನೆಗೆ ತಾಲ್ಲೂಕು ಗ್ರೇಡ್ 2 ತಹಶೀಲ್ದಾರ್ ಪೂರ್ಣಿಮಾ ಅವರು ಸ್ಥಳಕ್ಕೆ ಆಗಮಿಸಿ ಕ್ಷಮೆ ಯಾಚಿಸಿ ಕಾರ್ಯಕ್ರಮ ನಡೆಸಿದರು,ಆದರೆ ಅವರ ಭಾಷಣದಲ್ಲಿ ಶಂಕರಾಚಾರ್ಯರ ಬಗ್ಗೆ ತಪ್ಪಾದ ಮಾಹಿತಿ ನೀಡಿದದ್ದು ಮತ್ತೆ ವಿವಾದಕ್ಕೆ ಕಾರಣವಾಯಿತು.

ಈ ವೇಳೆ ಶಂಕರ ಸೇವಾ ಟ್ರಸ್ಟ್ ಅಧ್ಯಕ್ಷ ಎಸ್‌.ಆ‌ರ್. ಶ್ರೀನಿವಾಸಮೂರ್ತಿ,ತಾಲ್ಲೂಕು ಬ್ರಾಹ್ಮಣ ಯುವಕ ಸಂಘದ ಕಾರ್ಯದರ್ಶಿ ಕೆ.ಮಂಜುನಾಥ್,ಬ್ರಾಹ್ಮಣ ಮಹಾಸಭಾ ಖಜಾಂಚಿ ಎಸ್‌.ಆ‌ರ್. ಶ್ರೀನಾಥ್, ಡಾ. ಡಿ.ಟಿ. ಸತ್ಯನಾರಾಯಣರಾವ್, ಜಿಲ್ಲಾ ವಿಪ್ರ ಪುರೋಹಿತರ ಮತ್ತು ಆಗಮಿಕರ ವಿಶ್ವಸ್ಥ ಮಂಡಳಿ ಅಧ್ಯಕ್ಷ ವಿ.ಎನ್‌. ರಾಮಮೋಹನ ಶಾಸ್ತ್ರಿ, ಸೇವಾ ಟ್ರಸ್ಟ್ ಅಧ್ಯಕ್ಷ ಬಿ.ಆರ್. ಅನಂತಕೃಷ್ಣ, ವಿ. ಕೃಷ್ಣ, ಹಾಗು ಮೇಲೂರು ಮಂಜುನಾಥ್ ಮುಂತಾದವರು ಪಾಲ್ಗೊಂಡಿದ್ದರು.