ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶ ಪ್ರಕಟ: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿಯೇ ಶಿಡ್ಲಘಟ್ಟ ತಾಲ್ಲೂಕು ಎರಡನೇ ಸ್ಥಾನ
ವಿಜಯ ದರ್ಪಣ ನ್ಯೂಸ್…
ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶ ಪ್ರಕಟ: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿಯೇ ಶಿಡ್ಲಘಟ್ಟ ತಾಲ್ಲೂಕು ಎರಡನೇ ಸ್ಥಾನ
ಶಿಡ್ಲಘಟ್ಟ : ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಳೆದ ವರ್ಷ 3 ನೇ ಸ್ಥಾನದಲ್ಲಿದ್ದ ನಮ್ಮ ತಾಲ್ಲೂಕು ಶೇಕಡಾ 69.01 ಫಲಿತಾಂಶದೊಂದಿಗೆ ಈ ಬಾರಿ ಎರಡನೇ ಸ್ಥಾನ ಪಡೆದಿದೆ.
ತಾಲ್ಲೂಕಿನಲ್ಲಿ ಒಟ್ಟು 2530 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಆ ಪೈಕಿ 1746 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.1218 ಬಾಲಕರು, 1312 ಬಾಲಕಿಯರು ಸೇರಿ 2530 ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಬರೆದಿದ್ದರು.
ಈ ಪೈಕಿ 744 ಬಾಲಕರು (ಶೇ 61.10), 1002 ಬಾಲಕಿಯರು(ಶೇ 76.36) ಸೇರಿ 1746 ವಿದ್ಯಾರ್ಥಿಗಳಷ್ಟೆ ಉತ್ತೀರ್ಣರಾಗಿದ್ದಾರೆ, ಸರ್ಕಾರಿ ಶಾಲೆಗಳ 873 ವಿದ್ಯಾರ್ಥಿಗಳಲ್ಲಿ 556 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅನುದಾನಿತ ಶಾಲೆಗಳ 451 ವಿದ್ಯಾರ್ಥಿಗಳಲ್ಲಿ 238 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಅನುದಾನರಹಿತ ಶಾಲೆಗಳ 1206 ವಿದ್ಯಾರ್ಥಿಗಳಲ್ಲಿ 952 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಬಿ.ಎಂ.ಮನೋಹರ (619), ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ನೂಹ ಲಷ್ಕರಿ (602), ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆಯ ಬಿ.ಎನ್.ಧನುಶ್ರೀ (601), ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಎನ್.ನಿತಿನ್ (598), ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಎ.ಸಿ.ಶ್ರೀಷಾ (596), ಸರ್ಕಾರಿ ಪ್ರೌಢಶಾಲೆಯ ಸ್ಪೂರ್ತಿ (595) ಅಂಕಗಳನ್ನು ಪಡೆದಿದ್ದಾರೆ.
ನಗರದ ಕ್ರೆಸೆಂಟ್ ಶಾಲೆಯ ಎಚ್.ಆರ್.ಜಶ್ವಂತ್ ಯಾದವ್ 623 ಅಂಕಗಳನ್ನು ಪಡೆದು ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದರೆ, ವಾಸವಿ ಶಾಲೆಯ ಎಂ.ಜಾಹ್ನವಿ ಹಾಗೂ ಬಿಜಿಎಸ್ ಶಾಲೆಯ ಎಂ.ಸಾಹಿತ್ಯ ಇಬ್ಬರು ಕೂಡ 622 ಅಂಕಗಳನ್ನು ಪಡೆದು ದ್ವಿತೀಯ ಸ್ಥಾನವನ್ನು ಹಂಚಿಕೊಂಡಿದ್ದಾರೆ.
ಹನುಮಂತಪುರ ಗೇಟ್ ಬಳಿಯಿರುವ ಬಿಜಿಎಸ್ ಶಾಲೆಯ ಪಿ.ತೇಜಸ್ ಕುಮಾರ್, ಚಿಕ್ಕದಾಸರಹಳ್ಳಿಯ ಶ್ರೀ ಲಕ್ಷ್ಮಿವಿದ್ಯಾನಿಕೇತನ ಶಾಲೆಯ ಎಂ.ವಿ.ಸಮನ್ವಿತ ಹಾಗೂ ಎಚ್.ಕ್ರಾಸ್ ನ ಶ್ರೀಪಂಚಮುಖಿ ಇಂಗ್ಲೀಷ್ ಶಾಲೆಯ ಎಂ.ಪ್ರೀತಂಗೌಡ ಮೂವರು ವಿದ್ಯಾರ್ಥಿಗಳು ತಲಾ 621 ಅಂಕಗಳನ್ನು ಪಡೆದು ತೃತೀಯ ಸ್ಥಾನವನ್ನು ಹಂಚಿಕೊಂಡಿದ್ದು ಈ ಬಾರಿ ತಾಲ್ಲೂಕಿಗೆ ಕೀರ್ತಿ ತಂದಿದ್ದಾರೆ.